ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿನೆಮಾ ಲೇಖನಗಳಿಗೆ ಪ್ರತಿಕ್ರಿಯೆಗಳ ಪ್ರವಾಹ

By Prasad
|
Google Oneindia Kannada News

ಕನ್ನಡ ಚಿತ್ರರಂಗದಲ್ಲಿ ಕನ್ನಡ ಚಿತ್ರಗಳ ರಿಲೀಸ್‌ಗೆ ಕಿತ್ತಾಡುವುದನ್ನು ಬಿಟ್ಟು ದಯವಿಟ್ಟು ಮಾಡಿರುವ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡಿ. ಕನ್ನಡಿಗರಾದ ನಾವು ಯಾವುದೇ ಒಂದು ಮಲ್ಟಿಪ್ಲೆಕ್ಸ್‌ಗೆ ಹೋದಾಗ ಕನ್ನಡ ಚಿತ್ರಗಳೇ ಕಾಣಸಿಗುವುದಿಲ್ಲ. ದಯವಿಟ್ಟು ಟಿಕೆಟ್ ಬೆಲೆಯನ್ನು ಕಡಿಮೆಮಾಡಿ, ಎಲ್ಲರಿಗು ತಲುಪುವಂತಾಗುತ್ತದೆ. ಕಠಾರಿವೀರ ಸುರಸುಂದರಾಂಗಿ ಚಿತ್ರ ಬರಲಿ ಇದೊಂದು ವಿಭಿನ್ನ ಪ್ರಯತ್ನ, ಅದು ಗೆಲ್ಲುತ್ತದೆ ಅನ್ನೋ ಭರವಸೆ ಎಲ್ಲರಲ್ಲಿದೆ. ಗಾಡ್ ಫಾದರ್ ಮತ್ತು ಕಠಾರಿವೀರ ಸುರಸುಂದರಾಂಗಿಯೂ ಯಶಸ್ಸನ್ನು ಪಡೆಯಲಿ. ಅಣ್ಣಬಾಂಡ್ ತನ್ನದೇ ದಾರಿಯಲ್ಲಿ ನಡೆಯಲಿ. [ಕಠಾರಿವೀರ ಸುರಸುಂದರಾಂಗಿ Vs ಗಾಡ್ ಫಾದರ್] [ಈ ಲೇಖನಕ್ಕೆ ಪತ್ರಗಳ ಮಹಾಪೂರವೇ ಹರಿದುಬಂದಿದೆ]
* ರಾಜ್


***
ಕರೆಕ್ಟ್ ಆಗಿ ಹೇಳಿದ್ರಿ. ಇದ್ರಲ್ಲಿ ಪುನೀತ್ ಗೆ ಕನ್ನಡ ಚಿತ್ರರಂಗದ ಬಗ್ಗೆ ಕಾಳಜಿ ಏನೂ ಇಲ್ಲ. ಖಂಡಿತ audience ಕಠಾರಿವೀರ ಸಿನೆಮಾನೇ ನೋಡ್ತಾರೆ ಅನ್ನೋ ಭಯ. ಯಾಕಂದ್ರೆ ಅದು 'ಹಲೋ ಯಮ', 'ಇಂದ್ರನ ಗೆದ್ದ ನರೇಂದ್ರ' ತರ ಕಾಮಿಡಿ ಸಿನಿಮಾ. ಅಣ್ಣ ಬಾಂಡ್ ಟ್ರೈಲರ್ ನೋಡಿದ್ರೆನೆ ಗೊತ್ತಾಗುತ್ತೆ jackie ಫಿಲಂನ ಎಷ್ಟೋ ಸೀನ್ ರಿಪೀಟ್ ಆಗಿದೆ ಅಂತ. ಉದಾ: cage ಫೈಟ್, ಬೈಕ್ stunt, ಎಕ್ಕ ರಾಜ ರಾಣಿ ತರ ಒಂದು ಸಾಂಗ್. ಪುನೀತ್ ನ ಚಮಚಾಗಳು ಬರೇ ಇಷ್ಟೇನಾ ಇರೋದು ಅಂತ ಯಾರಾದ್ರೂ ಅಂತಾರೆ ಅನ್ನೋ ಭಯ. ಜನರಿಗೆ ಬುದ್ಧಿ ಇಲ್ಲ. ಅಣ್ಣಾವ್ರ ಮಗ ಅಂದ ಮಾತ್ರಕ್ಕೆ ಅವನೇನು ಅಣ್ಣಾವ್ರ ತರ ಸಾಚ ಅಲ್ಲ ಅನ್ನೋದು ಗೊತ್ತಿಲ್ಲ. [ಕಠಾರಿವೀರ ವಿವಾದದ ಬಗ್ಗೆ ಪುನೀತ್]
* ಸಚಿನ್

***
ಯಾರ್ ಮಾಮ ಇಷ್ಟ್ ಪಸಂದಾಗಿ ಬರೆದಿದ್ದು.. !!? ಸೂಪರ್ ಮಾಮ.. 1 .2 .3.. ಪೆ ಪಾಂ..ಪೆ ಪಾಂ..ಪೆ ಪಾಂ..! [ಶಿಬು ಮಾಮಾಗೆ ಒಂದು ಬಹಿರಂಗ ಪತ್ರ]
* ನಾರದ

***

ಅಕ್ಷಯ ತದಿಗೆಯಂದು ಬಂಗಾರ ಖರೀದಿಸಿದರೆ ತಪ್ಪೇನೂ ಇಲ್ಲವಲ್ಲ! ಕಳೆದ ವರ್ಷ ಖರೀದಿಸಿದ ಬಂಗಾರದ ಬೆಲೆ ಈಗ ಅದೆಷ್ಟೋ ಹೆಚ್ಚಾಗಿದೆ. ಒಳ್ಳೆಯದೇ ಅಲ್ಲವೇ? ಚಿನ್ನದ ಅಂಗಡಿಯವರಿಂದ ಕಮೀಶನ್ ಪಡೆದಿದ್ದನ್ನು ನೀವು ನೋಡಿದ್ದೀರಾ? ಬಸವೇಶ್ವರ ಜಯಂತಿಯ ದಿನ ಬ್ಯಾಂಕು ತೆಗೆದು ವ್ಯಾಪಾರ ಮಾಡಿದರೆ ಬಸವೆಶ್ವರರಿಗೆ ಅವಮಾನನವಾ? ಏನಯ್ಯ ಶೆಟ್ಟಿ, ಏನೇನೋ ಬರೀತೀಯಲ್ಲಯ್ಯ. [ಅಕ್ಷಯ ತದಿಗೆ : ಜ್ಯೋತಿಷಿಗಳ ಬೊಗಳೆ]
* ಸ್ವಾಮಿ

***
ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುವುದು ಆಧುನಿಕ ಜೀವನ ಶೈಲಿಯ ಮುಖ್ಯ ಲಕ್ಷಣ. ಪರಿಸ್ಥಿತಿ ಹೀಗಿರುವಾಗ ಇದರಲ್ಲಿ ತಪ್ಪೇನಿದೆ. ಆಗಿನ ಕಾಲದಲ್ಲಿ ನಮ್ಮ ತಂದೆ ತಾಯಿಯರು ನಮಗೆಷ್ಟೇ ಬುದ್ದಿ ಹೇಳಿದ್ದರೂ ನಾವುಗಳು ತಪ್ಪು ಮಾಡಿಲ್ಲವೇ? ಮತ್ತೆ ಈಗಿನ ಕಾಲದ ಮಕ್ಕಳಿಗೆ ಇಂತಹ ಪ್ರಶ್ನೆಗಳು ಅಪ್ರಸ್ತುತವಲ್ಲವೇ? [ಕನ್ಯತ್ವ ಮತ್ತು ಮದುವೆ]
* ಮೋಹನ್

English summary
Letters to the editor : Toofan of responses hit controversy between Kannada movies Kathariveera Surasundarangi by Munirathna and God father by K Manju. Puneeth Rajkumar also responds to this controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X