ಸಕಾಲ ಅಸ್ತ್ರ ನ್ಯಾಯಾಂಗಕ್ಕೂ ವಿಸ್ತರಣೆಯಾಗಲಿ

Written by: * ಶಶಿಧರ ಶೆಟ್ಟಿ, ಉಡುಪಿ
 
Share this on your social network:
   Facebook Twitter Google+ Comments Mail

High court
ಸರ್ಕಾರ ಜಾರಿಗೆ ತಂದಿರುವ 'ಸಕಾಲ' ಯೋಜನೆಯು ಕೇವಲ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿರದೆ ನ್ಯಾಯಾಂಗಕ್ಕೂ ವಿಸ್ತರಿಸಿದರೆ ಇದರಿಂದ ಲಕ್ಷಾಂತರ ಜನರ ಸಮಯ ಹಣ ಮತ್ತು ಹಲವಾರು ವಾಹನಗಳು ನ್ಯಾಯಾಲಯದಲ್ಲಿ ಕೊಳೆತು ಹಾಳಾಗುವುದನ್ನು ತಪ್ಪಿಸಬಹುದು.

ನಮ್ಮ ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಜೆಗಳ ಅತಿ ಹೆಚ್ಚಿನ ಸಮಯ ಮತ್ತು ಹಣವನ್ನು ಹಾಳು ಮಾಡುದೆಂದರೆ ಈ ನ್ಯಾಯಾಂಗ ವ್ಯವಸ್ಥೆ ಮಾತ್ರ.

ಯಾವುದೇ ಒಂದು ಸಿವಿಲ್ ದಾವೆ ದಾಖಲಾದ 20 ರಿಂದ 30 ವರ್ಷಗಳಿಗೂ ಮೇಲ್ಪಟ್ಟು ಕೊಳೆಯುತ್ತಿರುವ ಉದಾಹರಣೆಗಳನ್ನು ನಾವು ಕಾಣಬಹುದು. ಅದೇ ರೀತಿ ಕ್ರಿಮಿನಲ್ ದಾವೆಗಳು 10-15 ವರ್ಷ ಮುಂದೂಡುದನ್ನು ನಾವು ಕಂಡಿದ್ದೇವೆ.

ಇಂದಿಗೂ ಕೆಲವು ಅರಬ್ ರಾಷ್ಟ್ರಗಳು ಕೆಲವು ಸಣ್ಣ ಕೇಸುಗಳಿಗೆ ಸರಕಾರ ನ್ಯಾಯಾಲಯಕ್ಕೆ 90 ದಿನದ ಅವಧಿಯನ್ನು ಕೊಟ್ಟಿದೆ. ದೊಡ್ಡ ಕೇಸುಗಳಿಗೆ ಮೂರು ವರ್ಷ ಅವಧಿಯನ್ನು ನೀಡಿದೆ. ಇದಕ್ಕಿಂತ ಮೇಲೆ ಒಂದು ಕೋರ್ಟಿನಲ್ಲಿ ಒಂದು ಕೇಸು ಯಾವ ಕಾರಣಕ್ಕೂ ಉಳಿಯುವಂತಿಲ್ಲ.

ಉಳಿದರೆ ಆ ಕೋರ್ಟಿನ ನ್ಯಾಯಾಧೀಶರನ್ನೇ ಮೇಲಿನ ಕೋರ್ಟಿನಲ್ಲಿ ಪ್ರಶ್ನಿಸಲು ಅವಕಾಶವಿದೆ. ಇಂತಹ ವ್ಯವಸ್ಥೆಯನ್ನು ನಮ್ಮ ದೇಶದಲ್ಲೂ ಜಾರಿಗೆ ತಂದರೆ ನಮ್ಮ ಕೊಳೆಯುತ್ತಿರುವ ಕೋಟ್ಯಂತರ ರೂಪಾಯಿ ಸ್ವತ್ತುಗಳು ರಾಷ್ಟ್ರದ ಉಪಯೋಗಕ್ಕೆ ಸಿಗುತ್ತದೆ ಮತ್ತು ಜೈಲಿನಲ್ಲಿ ಕೊಳೆಯುತ್ತಿರುವ ನೂರಾರು ವಿಚಾರಣಾಧೀನ ಕೈದಿಗಳು ನಿರಾಪರಾಧಿಯಾಗಿ ಹೊರಬರಬಹುದು ಅಥವಾ ಅಪರಾಧಿಯಾಗಿ ಶಿಕ್ಷೆ ಅನುಭವಿಸಬಹುದು.

ಆದ್ದರಿಂದ ಸಕಾಲ ಎಂಬ ಅಸ್ತ್ರವನ್ನು ಸರಕಾರ ನ್ಯಾಯಾಂಗಕ್ಕೂ ಅನ್ವಯಿಸಿ, ಆದೇಶ ಹೊರಡಿಸಿದಲ್ಲಿ ಅನೇಕ ಜನರಿಗೆ ಇದರಿಂದ ಪ್ರಯೋಜನವಾಗಬಹುದು. ಮಾತ್ರವಲ್ಲದೇ ವಿಚಾರಧೀನ ಖೈದಿಗಳನ್ನು ಸಾಕುವ ಸಾವಿರಾರು ಕೋಟಿ ರೂಪಾಯಿ ಬೊಕ್ಕಸದಲ್ಲಿ
ಉಳಿಯಬಹುದು.

English summary
Karnataka Guarantee of Services to Citizens Act SAKALA launched across the state from today (2 Apr.2012 ). Sakala ensures services are provided in a timely manner over 151 services of 11 government departments. Sakala Should be extended to judicial department also to ensure justice given at the right time.
Please Wait while comments are loading...
Your Fashion Voice
Advertisement
Content will resume after advertisement