ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೆನಾಡಲ್ಲೂ ಗುಬ್ಬಿಗಳು ಮಟಾಮಾಯ!

|
Google Oneindia Kannada News

Poor sparrow has no place in malenadu too
ಹರಿಹರೇಶ್ವರರಿಗೆ ನಮಸ್ಕಾರಗಳು.

ಈ ವಾರದ ಹೊಂಬೆಳಕು ಗುಬ್ಬಚ್ಚಿಯ ಮೇಲೆ ಹರಿದಿದೆ. ಗುಬ್ಬಚ್ಚಿಯ ಬಗ್ಗೆ ಹಲವು ಗೊತ್ತಿಲ್ಲದ ವಿಚಾರಗಳು ತಿಳಿದವು. ಸಾರ್! ಇಂದಿಗೂ ಮಲೆನಾಡಿನಲ್ಲಿ "ಅಂಗಿಯ ಗುಂಡಿ ಹಾಕಿಕೋ ಅನ್ನಲು, ಅಂಗಿಯ ಗುಬ್ಬಿ ಹಾಕಿಕೋ!" ಅನ್ನುತ್ತಾರೆ.

ಪಕ್ಷಿ ವಿಜ್ಞಾನಿ ದಿವಂಗತ ಸಲೀಮ್ ಆಲಿಯವರ ಪಕ್ಷಿಗಳ ಬಗೆಗಿನ ಆಸಕ್ತಿ ಅವರು ನಾಲ್ಕು ವರ್ಷದ ಮಗು ಆಗಿದ್ದಾಗ ಗುಬ್ಬಚ್ಚಿಯಿಂದಲೇ ಪ್ರಚೋದಿಸಲ್ಪಟ್ಟಿತಂತೆ.

ನಾನು ಮಲೆನಾಡಿನ ಒಬ್ಬ ಸಾಮಾನ್ಯ ರೈತ. ಇಂದು ಮಲೆನಾಡಿನಲ್ಲೂ ಗುಬ್ಬಚ್ಚಿಗಳು ಕಾಣುತ್ತಾ ಇಲ್ಲ. ಅಲ್ಲಿ ಶಬ್ದ ಮಾಲಿನ್ಯ ಇಲ್ಲ. ಅಲ್ಲೂ ಯಾಕೆ ಗುಬ್ಬಚ್ಚಿಗಳು ಇಂದು ಮಾಯವಾಗಿವೆ?

ನಾನು ಊಹಿಸುವಂತೆ ಈ ಗುಬ್ಬಚ್ಚಿಗಳ ಮಾಯವಾಗುವಿಕೆಗೆ ಕಾರಣ ಇಂದಿನ ವ್ಯವಸಾಯದಲ್ಲಿ ಉಪಯೋಗಿಸಲ್ಪಡುತ್ತಿರುವ ರಾಸಾಯನಿಕ ವಿಷಗಳು. ಇಂದು ನಮ್ಮ ಮಲೆನಾಡಿನಲ್ಲಿ ಹಲವು ಬಗೆಯ ಜೀವಿ, ಜಂತು, ಪಕ್ಷಿ ಪ್ರಾಣಿಗಳು ಮರೆಯಾಗುತ್ತಾ ಇವೆ. ಅವುಗಳನ್ನು ಉಳಿಸುವ ಬಗ್ಗೆ ನಾವು ಕೂಡಲೇ ಯೋಚಿಸಬೇಕಾಗಿದೆ. ತಮ್ಮ ಗುಬ್ಬಿಯ ಕುರಿತ ವ್ಯಾಖ್ಯಾನ ಸಕಾಲದಲ್ಲಿ ಗಂಟೆ ಮೊಳಗಿಸುತ್ತಾ ಇದೆ.

ಉತ್ತಮ ಲೇಖನಕ್ಕಾಗಿ ತಮಗೆ ವಂದನೆಗಳು.

ಎಸ್. ಎಮ್. ಪೆಜತ್ತಾಯ
ಬಾಳೆಹೊಳೆ, ಚಿಕ್ಕಮಗಳೂರು ಜಿಲ್ಲೆ

ಪೂರಕರ ಓದಿಗೆ

ಅರ್ಥಕೋಶದಿಂದ ಆಚೆ ಜಿಗಿದ ಪಾಪ ಗುಬ್ಬಚ್ಚಿ</a><br><a href=ಗುಬ್ಬಚ್ಚಿಯೇ ಇಲ್ಲದ ಬೆಂಗಳೂರಿನಂತಾದರೆ ಬದುಕು?" title="ಅರ್ಥಕೋಶದಿಂದ ಆಚೆ ಜಿಗಿದ ಪಾಪ ಗುಬ್ಬಚ್ಚಿ
ಗುಬ್ಬಚ್ಚಿಯೇ ಇಲ್ಲದ ಬೆಂಗಳೂರಿನಂತಾದರೆ ಬದುಕು?" />ಅರ್ಥಕೋಶದಿಂದ ಆಚೆ ಜಿಗಿದ ಪಾಪ ಗುಬ್ಬಚ್ಚಿ
ಗುಬ್ಬಚ್ಚಿಯೇ ಇಲ್ಲದ ಬೆಂಗಳೂರಿನಂತಾದರೆ ಬದುಕು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X