ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂಭತ್ತನೇ ಅಕ್ಕ ಕನ್ನಡ ಸಮ್ಮೇಳನಕ್ಕೆ ನೋಂದಣಿ ಆರಂಭ

By Shami
|
Google Oneindia Kannada News

ಅಮೆರಿಕಾ ಕನ್ನಡ ಕೂಟಗಳ ಆಗರ (ಅಕ್ಕ) ಪ್ರತಿ 2 ವರ್ಷಗಳಿಗೊಮ್ಮೆ ಆಯೋಜಿಸುವ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ' ಈ ಬಾರಿ ಅಮೆರಿಕಾದ ಉದ್ಯಾನ ರಾಜ್ಯವೆನಿಸಿದ ನ್ಯೂ ಜೆರ್ಸಿಯ 'ಅಟ್ಲಾಂಟಿಕ್ ಸಿಟಿ' ನಗರದಲ್ಲಿ ಜರುಗುತ್ತದೆ. ಲೇಬರ್ ಡೇ ವಾರಾಂತ್ಯ, ಸೆಪ್ಟೆಂಬರ್ 2-3-4 ಮೂರು ದಿನಗಳ ಸಮ್ಮೇಳನ. 5ನೇ ತಾರೀಕು ಸೋಮವಾರ ಲೇಬರ್ ಡೇ ರಜಾದಿನ. ಈ ಸಲದ ಸಮಾರಂಭ 'ಅಕ್ಕ ಕನ್ನಡ ಸಮ್ಮೇಳನ'ದ 9ನೆಯ ಆವೃತ್ತಿ.

ಅಕ್ಕ ಸ್ಥಾಪನೆಯಾಗಿದ್ದು 1998ರಲ್ಲಿ. ಮೊದಲ ಕನ್ನಡ ಸಮ್ಮೇಳನ ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್ ನಗರದಲ್ಲಿ 2000ನೆಯ ಇಸವಿಯಲ್ಲಿ ಭರ್ಜರಿಯಾಗಿ ನಡೆದು ಅಕ್ಕ ಅಮೆರಿಕಾ ಹಾಗೂ ವಿಶ್ವದಾದ್ಯಂತ ಕನ್ನಡಿಗರ ಕಣ್ಮಣಿಯಾಗಿ ಮನೆ ಮಾತಾಯಿತು. ತದನಂತರ ಡೆಟ್ರಾಯಿಟ್ (2002), ಒರ್ಲಾಂಡೊ (2004), ಬಾಲ್ಟಿಮೋರ್ (2006), ಶಿಕಾಗೋ (2008), ಎಡಿಸನ್ (2010), ಅಟ್ಲಾಂಟಾ (2012) ಮತ್ತು ಸ್ಯಾನ್ ಫ್ರಾನ್ಸಿಸ್ಕೋ (2014) ನಗರಗಳಲ್ಲಿ 'ಕನ್ನಡ ಸಮ್ಮೇಳನದ' ಸಿಹಿಯನ್ನು ಹಂಚಿದ ಅಕ್ಕ ಇದೀಗ ಮತ್ತೆ ನ್ಯೂ ಜೆರ್ಸಿ ರಾಜ್ಯಕ್ಕೆ ಆಗಮಿಸಿದೆ. [ಮೆರೆಯುವವರ ಮೆರೆದಾಟ ಕ್ಷಣಿಕ, ಬೆರೆಯುವವರ ಬಾಂಧವ್ಯ ಚಿರಕಾಲ]

Atlantic City NJ to host 9th AKKA World Kannada Convention 2016

ಒಂಭತ್ತನೆಯ ವಿಶ್ವ ಕನ್ನಡ ಸಮ್ಮೇಳನಕ್ಕೆ ವಿಶ್ವದೆಲ್ಲೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಅತಿಥಿಗಳು ಬರುವ ನಿರೀಕ್ಷೆಯಿದ್ದು, ಸಮಾರಂಭದ ತಯಾರಿ ಭರದಿಂದ ಸಾಗಿದೆ. ಅಕ್ಕದ ಸದಸ್ಯರು ಹಾಗೂ ಉತ್ಸಾಹೀ ಕನ್ನಡಿಗರನ್ನೊಳಗೊಂಡ ನೂರಾರು ಸ್ವಯಂ ಸೇವಕರು ಅದಾಗಲೇ ಕಾರ್ಯಕ್ರಮ ಆಯೋಜನೆಯ ಸಿದ್ದತೆಯಲ್ಲಿ ತೊಡಗಿದ್ದಾರೆ. ಜನವರಿ 15ರ ಮಕರ ಸಂಕ್ರಾಂತಿಯ ಶುಭದಿನದಂದು ಕಾರ್ಯಕ್ರಮಕ್ಕೆ ಸಾರ್ವಜನಿಕ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.

ಅಮೆರಿಕಾದಲ್ಲಿ ಬೇಸಿಗೆ ಸಮಯವಾದ ಸೆಪ್ಟೆಂಬರ್ನಲ್ಲಿ 3 ದಿನಗಳ ಕಾಲ ನಡೆಯುವ ಕನ್ನಡಮ್ಮನ ಅದ್ದೂರಿಯ ಜಾತ್ರೆ ವಿಶ್ವ ಕನ್ನಡಿಗರ ಮನ ಸೂರೆಗೊಳಿಸುವುದು ಖಚಿತ. ಕನ್ನಡ ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ, ಆಚಾರ, ವಿಚಾರ, ಆಹಾರ, ವ್ಯವಹಾರ ಹಾಗೂ ಇನ್ನೂ ಬಹಳಷ್ಟು ವಿಷಯಗಳ ಸುತ್ತ ಆಯೋಜಿಸಲ್ಪಡುವ ಉತ್ಕ್ರಷ್ಟ ಗುಣಮಟ್ಟದ ಕಾರ್ಯಕ್ರಮಗಳು ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಡನೆ ಕಲೆತು ಆಹ್ಲಾದಿಸಲು ತಕ್ಕವಾಗಿದೆ. [ಕಡಲಾಚೆ ಲೇಖಕರಿಗೆ ಎಸ್ಎಲ್ ಭೈರಪ್ಪ ಕಿವಿಮಾತು]

Atlantic City NJ to host 9th AKKA World Kannada Convention 2016

ಮೂರು ದಿನಗಳ ಕನ್ನಡ ಹಬ್ಬದ ಮೆರುಗನ್ನು ಇಮ್ಮಡಿಗೊಳಿಸಲು ಅತಿಥೇಯ ನಗರ 'ಅಟ್ಲಾಂಟಿಕ್ ಸಿಟಿ' ಸಹ ತಯಾರಾಗಿ ನಿಲ್ಲುತ್ತದೆ. ಅಮೆರಿಕದ ಪೂರ್ವ ಕರಾವಳಿಯಲ್ಲಿರುವ ಅಟ್ಲಾಂಟಿಕ್ ಸಿಟಿ ಮನೋರಂಜನೆಯ ರಾಜಧಾನಿ ಎಂದೇ ಪ್ರಸಿದ್ದ. ಕಾರ್ಯಕ್ರಮಕ್ಕೆ ಭೇಟಿಕೊಡುವ ಅತಿಥಿಗಳನ್ನು 'ಅಟ್ಲಾಂಟಿಕ್ ಸಿಟಿ'ಯ 4 ಮೈಲುಗಳ ಬಿಳಿ ಮರಳಿನ ಸಮುದ್ರ ತೀರ, ಅದರ ಬದಿಯಲ್ಲಿರುವ ಸುಂದರವಾದ ಮರದ ಹಲಗೆಯ ಕಾಲು ದಾರಿ (ಬೋರ್ಡ್ ವಾಕ್), ಉತ್ತಮ ಆಹಾರ ಮಳಿಗೆಗಳು, ಶಾಪಿಂಗ್ ಮಳಿಗೆಗಳು, ತಮ್ಮ ಕಡೆಗೆ ಸೆಳೆದು ಕುಟುಂಬ ವಿರಾಮ ಸಮಯವನ್ನು ಅವಿಸ್ಮರಣೀಯಗೊಳಿಸುವುದಂತೂ ಖಂಡಿತ.

ಮಕ್ಕಳ ಆಕರ್ಷಣೆಗಾಗಿ ಬೋಟಿಂಗ್, ಡಾಲ್ಫಿನ್ ವೀಕ್ಷಣೆ, ಅಮ್ಯುಸ್ಮೆಂಟ್ ಪಾರ್ಕ್, ಲೈಟ್ ಹೌಸ್, ಮ್ಯೂಸಿಯಂ ಇತ್ಯಾದಿಗಳಿವೆ. ವಿಶ್ವದರ್ಜೆಯ ಹೋಟೆಲ್ ಗಳು ಹಾಗೂ ಕ್ಯಾಸಿನೊಗಳು ದಿನದ 24 ಘಂಟೆಗಳ ಮನೋರಂಜನೆ ಹಾಗೂ ವಿರಾಮ ಸಮಯ ಒದಗಿಸುತ್ತವೆ. ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಅದೇ ವಾರಾಂತ್ಯದಲ್ಲಿ ಅಟ್ಲಾಂಟಿಕ್ ಸಿಟಿಯಲ್ಲಿ ಮನಮೋಹಕ ಸುಡುಮದ್ದಿನ ಪ್ರದರ್ಶನ, ಲೇಸರ್ ಶೋ, ಸಂಗೀತ ಸಂಜೆಗಳು ಉಚಿತ ದರದಲ್ಲಿ ಆಯೋಜನೆಗೊಂಡಿದ್ದು, ವೀಕ್ಷಕರಿಗೆ ಮನೋರಂಜನೆಯ ಡಬಲ್ ಧಮಾಕಾ ಒದಗಿ ಬರಲಿವೆ.

Atlantic City NJ to host 9th AKKA World Kannada Convention 2016

ಅಟ್ಲಾಂಟಿಕ್ ಸಿಟಿಗೆ ಅಮೆರಿಕ ಹಾಗೂ ವಿಶ್ವದೆಲ್ಲೆಡೆಯಿಂದ ಸುಲಭವಾಗಿ ಬಂದು ಸೇರುವ ಸಾರಿಗೆ ವ್ಯವಸ್ಥೆಗಳಿವೆ. ಅಟ್ಲಾಂಟಿಕ್ ಸಿಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಫಿಲಡೆಲ್ಫಿಯ, ನ್ಯೂ ಯಾರ್ಕ್ ಹಾಗೂ ನೆವಾರ್ಕ್ ವಿಮಾನ ನಿಲ್ದಾಣಗಳು ಬಳಿಯಲ್ಲಿವೆ. ನ್ಯೂ ಜೆರ್ಸಿ ಟ್ರಾನ್ಸಿಟ್ ರೈಲು ಸೇವೆಯು ನ್ಯೂ ಜೆರ್ಸಿಯ ಬಹಳಷ್ಟು ನಗರಗಳಿಂದ ಪ್ರಯಾಣ ಸೌಲಭ್ಯ ಒದಗಿಸುತ್ತದೆ. ನ್ಯೂ ಯಾರ್ಕ್ ನಗರದಿಂದ 2 ಗಂಟೆಗಳ ಪ್ರಯಾಣ ಸಮಯ, ಫಿಲಡೆಲ್ಫಿಯ ನಗರದಿಂದ 1 ಗಂಟೆ, ವಾಷಿಂಗ್ಟನ್ ನಗರದಿಂದ 3.30 ಗಂಟೆ ಹಾಗೂ ಬಾಲ್ಟಿಮೋರ್ ನಗರದಿಂದ 2 ಗಂಟೆಗಳ ದೂರದಲ್ಲಿದೆ. ಐತಿಹಾಸಿಕ ಕೇಪ್ ಮೇ, ಸ್ಮಿತ್ ವಿಲ್ ನಗರಗಳು ಬಳಿಯಲ್ಲಿಯೇ ಇದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.

ನಾಳೆ, ಜನವರಿ 15ರಂದು ಪ್ರಾರಂಭವಾಗುವ ನೋಂದಾವಣೆಯಲ್ಲಿ ಆದಷ್ಟು ಬೇಗ ಪಾಲ್ಗೊಂಡು 'ಅರ್ಲಿ ಬರ್ಡ್' ರಿಯಾಯಿತಿ ಖರೀದಿ ವ್ಯವಸ್ಥೆಯ ಪ್ರಯೋಜನ ಪಡೆದುಕೊಂಡು, ಈ ಬೇಸಗೆಯಲ್ಲಿ ಕನ್ನಡಮ್ಮನ ಜಾತ್ರೆಯಲ್ಲಿ ಭಾಗವಹಿಸಿ ಎಂದು ವಿಶ್ವ ಕನ್ನಡಿಗರಲ್ಲಿ ಅಕ್ಕ ಸಂಘಟನೆಯ ಕಳಕಳಿಯ ವಿನಂತಿ ಮಾಡಿದೆ. ನೋಂದಾವಣೆಯ ವಿವರಗಳಿಗೆ ಭೇಟಿಕೊಡಿ.

English summary
Atlantic City (New Jersey) to host ‘9th AKKA WORLD KANNADA CONFERENCE 2016. Online registration opens on January 15th. AKKA is a non-profit, educational, linguistic and cultural organization; incorporated to integrate, coordinate, network and unite the activities of all Kannadigas and Kannada Kootas for promotion and preservation of Kannada language and culture in North America. Come, make this a summer vacation that your family will remember for a long time!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X