ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನದಲ್ಲಿ ಸಾಹಿತ್ಯ ವಾಚನಕ್ಕೆ ಸಿದ್ಧರಾಗಿ

By Prasad
|
Google Oneindia Kannada News

ಆಗಸ್ಟ್ 29, 30 ಮತ್ತು 31, 2014ರಂದು ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಆಶ್ರಯದಲ್ಲಿ ನಡೆಯಲಿರುವ ಎಂಟನೆಯ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ 2014' ಕಾರ್ಯಕ್ರಮದಲ್ಲಿ, ಹೊರನಾಡ ಕನ್ನಡಿಗರ ಸಾಹಿತ್ಯದಲ್ಲಿನ ಕೃಷಿಯನ್ನು ಅವರಿಂದಲೇ ತಿಳಿಯುವ ಉದ್ದೇಶದಿಂದ 'ಸಾಹಿತ್ಯ ವಾಚನ' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದ ನಿಯಮಗಳು ಕೆಳಗಿನಂತಿವೆ:

* ಈ ಕಾರ್ಯಕ್ರಮದಲ್ಲಿ ಲೇಖಕರು ಸ್ವತಃ ಉಪಸ್ಥಿತರಿರಬೇಕು.

* ಅಂತಹ ಲೇಖಕರು ಪ್ರಸ್ತುತ ಕರ್ನಾಟಕದ ಹೊರಗಡೆ ನೆಲೆಸಿರಬೇಕು.

AKKA Sammelana : The pleasure of reading literary fiction

* ತಾವು ವಾಚನ ಮಾಡಬಯಸುವ ಕನ್ನಡದ ಕೃತಿ ಯಾವುದೇ ಸಾಹಿತ್ಯಿಕ ಪ್ರಕಾರಕ್ಕಾದರೂ ಸೇರಿರಬಹುದು; ಇಂತಹ ಹಾಸ್ಯಲೇಖನ, ಪ್ರಬಂಧ, ಸಣ್ಣಕಥೆ, ವಿಮರ್ಶೆ ಅಥವಾ ಕವನ ಸ್ವತಂತ್ರವಾಗಿದ್ದು, ಸಭಿಕರಿಗೆ ಅರ್ಥವಾಗುವಂತಿರಬೇಕು.

* ಗದ್ಯ ಪ್ರಕಾರಕ್ಕೆ ಏಳು ನಿಮಿಷ ಮತ್ತು ಪದ್ಯ ಪ್ರಕಾರಕ್ಕೆ ಮೂರು ನಿಮಿಷ ಕಾಲಾವಕಾಶ ಮಾಡಿಕೊಡಲಾಗುವುದು; ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. (7 ನಿಮಿಷದಲ್ಲಿ ಸುಮಾರು 800 ಪದಗಳ ಗದ್ಯವನ್ನು ಓದಬಹುದು.)

* ವಾಚನ ಮಾಡಬಯಸುವ ತಮ್ಮ ಇತ್ತೀಚಿನ ಗದ್ಯ ಅಥವಾ ಪದ್ಯವನ್ನು ನಮಗೆ ಕಳುಹಿಸಬೇಕು; ಅವುಗಳನ್ನು ನಮಗೆ ತಲುಪಿಸಲು ಕೊನೆಯ ದಿನಾಂಕ ಆಗಸ್ಟ್ 15, 2014. ಈ ದಿನಾಂಕದ ನಂತರ ನಮ್ಮನ್ನು ತಲುಪಿದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ. [ಉದಯೋನ್ಮುಖ ಲೇಖಕರಿಗೆ ಆಹ್ವಾನ]

* ತಲುಪಿದ ಎಲ್ಲಾ ಲೇಖನ/ಕವನಗಳನ್ನು ಪರಿಶೀಲಿಸಿ, ಉತ್ತಮ ಹಾಗೂ ಸ್ವಾರಸ್ಯಕರ ಎಸಿಸಿದ ಕೆಲವು ಕೃತಿಗಳನ್ನು ಈ ಕಾರ್ಯಕ್ರಮದಲ್ಲಿ ವಾಚನಮಾಡಲು ಸಾಹಿತ್ಯಿಕ ವೇದಿಕೆ ಅವಕಾಶ ಕೊಡುತ್ತದೆ; ಈ ವಿಷಯದಲ್ಲಿ ಸಾಹಿತ್ಯಿಕ ವೇದಿಕೆಯ ತೀರ್ಮಾನವೇ ಅಂತಿಮ.

* ಈ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಮಾಡುವ ಅಧಿಕಾರ ಸಾಹಿತ್ಯಿಕ ವೇದಿಕೆಗಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವಿರಾದರೆ, ತಮ್ಮ ಕೃತಿಯನ್ನು ನಮಗೆ ಕಳುಹಿಸಬೇಕಾದ ವಿಳಾಸ : [email protected]

ಸಾಹಿತ್ಯಿಕ ವೇದಿಕೆ, ಅಕ್ಕ ವಿಶ್ವ ಕನ್ನಡ ಸಮ್ಮೇಳನ 2014

English summary
AKKA World Kannada Conference, North California, USA. Are you ready to read your prose, poem, short story, essay at 8th WKC? Then send your original creation to the organizers before 15th August. WKC will be held from August 29 to 31, 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X