ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನ: ಈ ಬಾರಿ ಅನೇಕರಿಗೆ ವೀಸಾ

By Shami
|
Google Oneindia Kannada News

TN Seetharam
ಬೆಂಗಳೂರು, ಆ. 14 : ಆಗಸ್ಟ್ 31ರಿಂದ ಸೆಪ್ಟೆಂಬರ್ 2ರವರೆಗೆ ಅಮೆರಿಕಾದ ಅಟ್ಲಾಂಟಾದಲ್ಲಿ ನಡೆಯಲಿರುವ 7ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಜಗತ್ತಿನ ನಾನಾ ಮೂಲೆಗಳಿಂದ ಹರಿದು ಬರುವ ಕನ್ನಡಿಗರ ಕಲರವ ಮೇಳೈಸುವುದಕ್ಕೆ ಇನ್ನು 17 ದಿನ ಬಾಕಿಯಿದೆ.

ಸಮ್ಮೇಳನಕ್ಕೆ ಈಗಾಗಲೇ ಆನ್ ಲೈನ್ ಮುಖಾಂತರ 2,000ಕ್ಕೂ ಹೆಚ್ಚು ಅಮೆರಿಕನ್ನಡಿಗರು ನೊಂದಾವಣೆ ಮಾಡಿಕೊಂಡಿದ್ದಾರೆ. ಪ್ರತಿವರ್ಷದಂತೆ ಸಮ್ಮೇಳನದ ದಿನ ಸಮೀಪವಾಗುತ್ತಿದ್ದಂತೆ ನೊಂದಾವಣೆ ಮಾಡುವವರ ಭರಾಟೆ ಹೆಚ್ಚಾಗಿದೆ ಎಂದು ಅಕ್ಕ ಅಧಿಕಾರಿಗಳು ತಿಳಿಸಿದ್ದಾರೆ.

ದಾನಿಗಳು, ಜಾಹೀರಾತುದಾರರು, ಭಾರತದಿಂದ ಆಗಮಿಸುವ ಅತಿಥಿಗಳು ಸೇರಿದಂತೆ ಸರಿಸುಮಾರು 3,500 ರಿಂದ 4000 ಪ್ರತಿನಿಧಿಗಳು ಸಮ್ಮೇಳನಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಅಕ್ಕ ಅಧ್ಯಕ್ಷ ದಯಾಶಂಕರ ಅಡಪ ಹೇಳಿದ್ದಾರೆ.

ಇದೇ ವೇಳೆ, ಕರ್ನಾಟಕದಿಂದ ತೆರಳಲು ಇಚ್ಛಿಸಿರುವ ಕವಿ, ಕಲಾವಿದರನೇಕರು ಯುಎಸ್ ವಿಸಾ ಗುಂಗಿನಲ್ಲಿದ್ದಾರೆ. ಪದೇಪದೇ ಅಮೆರಿಕಾಗೇ ಹೋಗಿ ಬಂದು ಮಾಡುವವರಿಗೆ ಮಲ್ಟಿಪಲ್ ವೀಸಾ ಇರ್ತದೆ. ಆದರೆ, ಅದಿಲ್ಲದವರು ಈಗ ವೀಸಾ ಪಡೆಯುವುದಕ್ಕೆ ಚೆನ್ನೈಗೆ ಹೋಗುತ್ತಿದ್ದಾರೆ.

ಅದೃಷ್ಟವಶಾತ್ ಈ ಋತುವಿನಲ್ಲಿ ಅನೇಕರಿಗೆ ವೀಸಾ ಸುಲಭವಾಗಿ ಸಿಗುತ್ತಿದೆ. ವೀಸಾ ಪಡೆದ ಕೆಲವರ ಹೆಸರುಗಳು ಇಂತಿವೆ : 1) ಯಕ್ಷಮಂಜೂಷ - ತೆಂಕುತಿಟ್ಟು ಯಕ್ಷಗಾನ ತಂಡ 2) ರಘು ದೀಕ್ಷಿತ್ ಮತ್ತು ತಂಡ 3) ಸಂಗೀತ ನಿರ್ದೇಶಕ ಗುರುಕಿರಣ್ 4) ವೀಣಾ ಪಾಣಿ, ವಿದುಷಿ ಸುಮಾ ಸುಧೀಂದ್ರ 5) ಭಕ್ತಿ ಸಂಗೀತದ ಶ್ರೀ ವಿದ್ಯಾಭೂಷಣ 6) ಸಾಹಿತಿ ಡಾ. ಚಂದ್ರಶೇಖರ ಕಂಬಾರ 7) ಚುಟುಕು ಸಾಹಿತಿ ಎಚ್. ಡುಂಡಿರಾಜ್ 8) ಕಿರುತೆರೆಯ ಧಾರಾವಾಹಿ ದೊರೆ ಟಿಎನ್ ಸೀತಾರಾಮ್.

ಮೇಲೆ ಹೆಸರಿಸಿದ ಎಲ್ಲರಿಗೂ ಶುಭ ಪ್ರಯಾಣ ಕೋರುತ್ತಾ, ವೀಸಾ ಸಂದರ್ಶನಕ್ಕೆ ಚೆನ್ನೈಗೆ ತೆರಳುತ್ತಿರುವ ಕನ್ನಡಿಗರಿಗೆ ಗುಡ್ ಲಕ್!

English summary
List of Kannada artists, singers, poets who have secured US Visa to particpate in AKKA world Kannada Convention 2012, Atlanta. TN Seetharam, Raghu Dixit, Gurukiran, Vidyabhushan, Chandrashekar Kambar are among many who have already got visa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X