ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಒಕ್ಕಲಿಗರ ಸಮ್ಮೇಳನಕ್ಕೆ ಕ್ಯಾಲಿಫ್ ಆತಿಥ್ಯ

By Shami
|
Google Oneindia Kannada News

ಸ್ಯಾಕ್ರಮೆಂಟೊ, ಏ. 30 : ಉತ್ತರ ಅಮೇರಿಕಾದ ಒಕ್ಕಲಿಗರ ಸಮುದಾಯ ಪ್ರತಿ ಎರಡು ವರ್ಷಕ್ಕೊಮ್ಮೆ ಏರ್ಪಡಿಸುವ ವಿಶ್ವ ಮಟ್ಟದ ಒಕ್ಕಲಿಗರ ಸಮಾವೇಶ ಈ ಬಾರಿ ಪೂರ್ವ ಕರಾವಳಿಯ ಉತ್ತರ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ನಡೆಯಲಿದೆ.

ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋ ನಗರದಲ್ಲಿ ಇದೇ ಜುಲೈ 2ರಿಂದ 4ರವರೆಗೆ ನಡೆಯಲಿರುವ ಮೂರು ದಿನಗಳ ಆರನೇ ಸಮಾವೇಶದ ಯಶಸ್ಸಿಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ಆದಿಚುಂಚನಗಿರಿ ಕ್ಷೇತ್ರದ ಪೂಜ್ಯಶ್ರೀ ನಿರ್ಮಲಾನಂದ ಸ್ವಾಮಿಗಳು ಸಮ್ಮೇಳನದಲ್ಲಿ ಭಾಗಿಯಾಗಲು ಸಮ್ಮತಿಸಿದ್ದಾರೆ ಎಂದು ಸಮ್ಮೇಳನಾಧ್ಯಕ್ಷ ರಾಧಾಕೃಷ್ಣ ತಲಕಾಡು ಹಾಗೂ ಒಕ್ಕಲಿಗರ ಪರಿಷತ್ತಿನ ರಾಷ್ಟ್ರ್ರೀಯ ಅಧ್ಯಕ್ಷ ರವಿಶಂಕರ್ ಬೈರಪ್ಪಗೌಡ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Vokkaligara parishat of America (VPA) convention 2015, Sacramento, CA

ಪೂಜ್ಯ ಸ್ವಾಮೀಜಿಯವರು ಬೆಂಗಳೂರಿನಿಂದ ಸ್ಯಾಕ್ರಮೆಂಟೋವರೆಗೆ ಬಂದು ಅಮೆರಿಕಾದ ಒಕ್ಕಲಿಗರನ್ನು ಆಶೀರ್ವದಿಸಲು ಒಪ್ಪಿಕೊಂಡಿರುವುದು ಸಮ್ಮೇಳನಕ್ಕೆ ಒಂದು ದಿವ್ಯ ಕಳೆಯನ್ನು ತಂದಿದ್ದು, ಕಾರ್ಯಕರ್ತರಲ್ಲಿ ಅಪರಿಮಿತ ಉತ್ಸಾಹವನ್ನು ತುಂಬಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸಂತಸದ ಹಿನ್ನೆಲೆಯಲ್ಲಿ ಸಮ್ಮೇಳನದ ನೊಂದಾಣಿಕೆಯ ದರದಲ್ಲಿರುವ ರಿಯಾಯಿತಿಯನ್ನು (Early-bird discount) ಮೇ 3ರವರೆಗೂ ವಿಸ್ತರಿಸಲಾಗಿದೆಯೆಂದು ರವಿಶಂಕರ್ ಬೈರಪ್ಪಗೌಡ ಒನ್ಇಂಡಿಯಾ ಕನ್ನಡಕ್ಕೆ ಗುರುವಾರ ತಿಳಿಸಿದರು.

Vokkaligara parishat of America (VPA) convention 2015, Sacramento, CA

ಅಮೆರಿಕಾದ ಮೂಲೆಮೂಲೆಗಳಿಂದ ನೆಲೆಸಿರುವ ಒಕ್ಕಲಿಗರು ಸಮ್ಮೇಳನಕ್ಕೆ ಬಂದು ಉತ್ತಮ ಸಾಂಸ್ಕೃತಿಕ, ಕ್ರೀಡಾ ಹಾಗೂ ಇನ್ನಿತರ ಸಮುದಾಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ. ನೊಂದಾವಣೆ ಹಾಗೂ ಇನ್ನಿತರ ವಿವರಗಳಿಗೆ ಒಕ್ಕಲಿಗರ ಪರಿಷತ್ತಿನ ಅಂತರ್ಜಾಲ ತಾಣಕ್ಕೆ ಭೇಟಿ ಕೊಡಿ.
English summary
His Holiness Sri Nirmalandanatha Swamiji of Adi Chunchanagiri Mutt has agreed to bless by his presence at the 6th convention (2-4 July 2015) of Vokkaligara Parishat of America - VPA
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X