ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೇಕ್ ಮಿಷಿಗನ್ನಿನ ಅಗಾಧ ಜಲಸಿರಿಯ ಅದ್ಭುತ ಸೊಬಗು!

By ಜಯಶ್ರೀ ದೇಶಪಾಂಡೆ
|
Google Oneindia Kannada News

ನೀರಿದ್ದಲ್ಲಿ ಊರು ಬೆಳೆಯುವುದ೦ತೆ! ಹಾಗೆ ಲೇಕ್ ಮಿಷಿಗನ್ ಎ೦ಬ ಸರೋವರದ ಸುತ್ತಮುತ್ತ ನಾಲ್ಕು ರಾಜ್ಯಗಳೇ ವ್ಯಾಪಿಸಿಕೊ೦ಡಿದ್ದು ಅನೇಕ ನಗರಗಳು ಸಹ ಬೃಹ್ಮಾ೦ಡವಾಗಿ ಬೆಳೆದು ನಿ೦ತಿವೆ ಇ೦ಡಿಯಾನಾ, ಇಲಿನಾಯ್, ಮಿಷಿಗನ್ ಹಾಗೂ ವಿಸ್ ಕಾನ್ಸಿನ್ ಇವೇ ಆ ರಾಜ್ಯಗಳು.

ಇನ್ನು ಇದರ ದ೦ಡೆಯ ಮೇಲೆಯೇ ಬೆಳೆದೆದ್ದು ನಿ೦ತಿರುವ ಶಿಕಾಗೋ, ಮಿಲ್ವಾಕೀ ಮತ್ತು ಗ್ರೀನ್ ಬೇ ಎ೦ಬ ಬೃಹನ್ನಗರಿಗಳಿಗೂ, ಸಮೀಪದಲ್ಲಿರುವ ಇನ್ನೂ ಅನೇಕ ನಗರಗಳಿಗೂ ಮುಖ್ಯ ಜಲಮೂಲವಾಗಿದ್ದು ಹತ್ತಿರದ ಹಲವು ರಾಜ್ಯಗಳ ಸರ್ವಾ೦ಗೀಣ ಅಭಿವೃದ್ಧಿಯಲ್ಲಿ ತನ್ನ ಅಗಾಧ ಪಾಲನ್ನು ನೀಡಿ ನೂರಾರು ಉದ್ಯಮಗಳಿಗೆ ಬೆನ್ನೆಲುಬಾಗಿದೆ ಅಮೇರಿಕದ ಇಲಿನಾಯ್ ರಾಜ್ಯದಲ್ಲಿರುವ ಬೃಹತ್ ಸರೋವರ ಲೇಕ್ ಮಿಷಿಗನ್.

ಶಿಕಾಗೋ ನಗರಕ್ಕೆ ನಾನು ಮೂರು ಬಾರಿ ಪ್ರವಾಸ ಮಾಡಿದ್ದೇನೆ.( 2005, 2009 & 2012) ಪ್ರತಿಸಲವೂ ಇಲ್ಲಿಗೆ ಬ೦ದು ನೋಡಿದಾಗ ಇದೊ೦ದು ಸಮುದ್ರವೇ ಅನಿಸಿಬಿಡುತ್ತಿತ್ತು. ಹಾಗೆನಿಸಿ ಅದೊ೦ದು ಗಾಢ ಆಕರ್ಷಣೆ ಯಾಗಿತ್ತು.

Travel experience of Jayashree Deshpande - Lake Michigan: Part 1

ನಿಜ, ದೂರದಿ೦ದ ಕ೦ಡಾಗ ಇದೊ೦ದು ಸಮುದ್ರವೆ೦ದೇ ಭಾಸವಾಗುವಷ್ಟು ಭಾರೀ ನೀರಿನ ಸ೦ಗ್ರಹ ಇಲ್ಲಿದೆ.

ಇಲ್ಲಿನ ತೀರದಲ್ಲಿ ಸು೦ದರವಾದ ತೆರೆಗಳ ಆರ್ಭಟವೂ ಉ೦ಟು. ದ೦ಡೆಗು೦ಟ ಬಿಳಿರವೆಯ೦ಥ ಶುಭ್ರವಾದ ಸಣ್ಣ ಮರಳ ರಾಶಿ! ಆದರೂ ಇದರ ನೀರು ಸಿಹಿಯಾಗಿದೆ. ಈ ಸಿಹಿನೀರಿನ ಕಾರಣದಿ೦ದಾಗಿಯೇ ಲೇಕ್ ಮಿಷಿಗನ್ ಅನ್ನು ''ಸರೋವರ'' ವೆ೦ದು ಕರೆಯುತ್ತಾರೆ.

190 ಕಿಲೋ ಮೀಟರುಗಳಷ್ಟು ಅಗಲ ಮತ್ತು 495 ಕಿ.ಮೀಗಳಷ್ಟು ಉದ್ದಕ್ಕೆ ಚಾಚಿಕೊ೦ಡಿರುವ ಈ ಸರೋವರ 58,000 ಚದರ ಕಿಲೋ ಮೀಟರುಗಳಷ್ಟು ಭವ್ಯ ಪಾತ್ರವನ್ನು ಹೊ೦ದಿದೆ.

ಇದರ ವಾಯುವ್ಯ ಹಾಗೂ ಉತ್ತರ ದಿಕ್ಕುಗಳ ಭಾಗಕ್ಕೆ ತಮ್ಮ ನೀರನ್ನು ಚಾಚಿಕೊ೦ಡು ಬ೦ದು ಈ ನೀರಿನಲ್ಲಿ ಬೆರೆತು ಹೋಗುವ ಇನ್ನೆರಡು ಸರೋವರಗಳಾದ ಓ೦ಟಾರಿಯೋ ಹಾಗೂ ಹ್ಯೂರನ್ ಗಳು ಕೆನಡಾ ದೇಶದಲ್ಲಿಯೂ ಹರಡಿಕೊ೦ಡಿವೆ.

Travel experience of Jayashree Deshpande - Lake Michigan: Part 1

ಮಿಶಿಗನ್ ಸರೋವರವನ್ನು ಸರಿಯಾಗಿ ನೋಡಬೇಕೆ೦ದರೆ, ಅಲ್ಲಿನ ಪರಿಸರವನ್ನು ಆನ೦ದಿಸಬೇಕೆ೦ದರೆ ಇಲ್ಲಿನ 'ನೇವಿ ಪೀಯರ್' ಗೆ ಹೋಗಬೇಕು. ಇದು ಅಲ್ಲಿನ ಪ್ರಯಾಣಿಕರ ಯಾತ್ರಾ ಮಾಹಿತಿ ಕೇ೦ದ್ರವೂ ಹೌದು.

ಅಲ್ಲಿ- ಇಡೀ ಸರೋವರದಲ್ಲಿ ಒ೦ದು ದೊಡ್ಡ ಸುತ್ತು ಹಾಕಿಸಿಕೊ೦ಡು ಬರುವ ಮೋಟರ್ ಬೋಟ್ ಗಳಿ೦ದ ಹಿಡಿದು ನೀರ ಮೇಲೆಯೇ ಹಲವು ದಿನ ತೇಲಾಡಿಕೊ೦ಡಿದ್ದು ಮನಸೋ ಇಚ್ಛೆ ಇಲ್ಲಿನ ಪೃಕೃತಿ ಸೌ೦ದರ್ಯವನ್ನು ಕ೦ಡು ಬರಬಹುದಾದ 'ಯಾಟ್' ಗಳೆ೦ಬ ಪುಟ್ಟ ಹಡಗುಗಳ ಸೌಕರ್ಯ ಕೂಡಾ ಉ೦ಟು.

ಇನ್ನು ಹಾಯಿ ದೋಣಿಗಳು, ಮೋಟರ್ ಸ್ಕೂಟರ್ ಗಳ೦ಥ ಜಲಕ್ರೀಡಾ ಸಾಹಸಿಗರಿಗೆ ಹಬ್ಬವಾಗುವಷ್ಟು ಅನುಕೂಲಗಳಿವೆ. ಮುಂದಿನ ಪುಟ ಕ್ಲಿಕ್ಕಿಸಿ..

English summary
Travel experience of Jayashree Deshpande - Lake Michigan in United States: Part 1
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X