ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವರಾತ್ರಿ 2014 : ಅಮೆರಿಕಾದಲ್ಲಿ ಶಿವ ತಾಂಡವ!

By ನಾಗರಾಜ್ ಎಂ, ಕನೆಕ್ಟಿಕಟ್
|
Google Oneindia Kannada News

ನೋಡಿದರೆ ಸುತ್ತಲೂ ಬಿಳಿ ಹಿಮದಿಂದ ಆವೃತವಾಗಿರುವ ಬೆಟ್ಟಗುಡ್ಡಗಳು, ಬಿಳಿಯಾಗಿರುವ ಮರಗಿಡಗಳು, ಅಂಬಾ ಎಂದು ಗೋವಿನ ಕೂಗು, ಪೂಜಾ ಸಮಯದ ಘಂಟೆಯ ನಾದ. ನೋಡ ನೋಡುತ್ತಿದ್ದಂತೆ ಶಿವನ ಡಮರುಗದ ನಿನಾದ. ಜೊತೆಗೆ ತ್ರಿಶೂಲ ಹಿಡಿದ ಪರಶಿವನ ತಾಂಡವ ನೃತ್ಯಕ್ಕೆ ಎಲ್ಲರೂ ಕೈಜೋಡಿಸಿ ಓಂ ನಮಃ ಶಿವಾಯ, ಓಂ ನಮಃ ಶಿವಾಯ ಅಂತಾ ಮಂತ್ರ ಮುಗ್ದರಾಗಿ ಹೇಳುತ್ತಿರುವ ದೃಶ್ಯ ಕಂಡು ಸಾಕ್ಷಾತ್ ಕೈಲಾಸ ಪರ್ವತದಲ್ಲಿದ್ದಂತೆ ಅನ್ನಿಸುವಂತೆ ಮಾಡಿದ್ದು ಸಾವಿರಾರು ಮೈಲಿ ದೂರದ ಅಮೆರಿಕಾದ ಕನೆಕ್ಟಿಕಟ್ನಲ್ಲಿ VSCT (ವೀರಶೈವ ಸಮಾಜ, ಕನೆಕ್ಟಿಕಟ್) ನಡೆಸಿಕೊಟ್ಟ ಶಿವರಾತ್ರಿ 2014 ಆಚರಣೆ.

ಮಾರ್ಚ್ 15ರಂದು ಕನೆಕ್ಟಿಕಟ್ನಲ್ಲಿರುವ ಶ್ರೀ ಸ್ವಾಮಿ ಸತ್ಯನಾರಾಯಣ ದೇಗುಲದ ಆಡಿಟೋರಿಯಂನಲ್ಲಿ ನೂತನ VSCT ಕಮಿಟಿ ಸದಸ್ಯರ ನೇತೃತ್ವದಲ್ಲಿ - ಪದ್ಮ ಹಾಗು ಹರ್ಷವರ್ಧನ ರವರ ಸುಂದರ ನಿರೂಪಣೆಯೊಂದಿಗೆ ಯಶಸ್ವಿಯಾಗಿ ನಡೆಯಿತು. ಸರಿಯಾಗಿ ಮಧ್ಯಾನ್ಹ 3.30ಕ್ಕೆ ಬಸವ ಪೂಜೆಯೊಂದಿಗೆ ಪ್ರಾರಂಭವಾಗಿ ಪ್ರಾರ್ಥನೆ ಗೀತೆ ಹಾಡಿದ ಮೇಲೆ VSCT ಪ್ರೆಸಿಡೆಂಟ್ ಸೂರಜ್ ಕುರ್ತಕೋಟಿರವರು ಸ್ವಾಗತ ಭಾಷಣ ಮಾಡಿದ ನಂತರ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನೆರವೇರಿತು. ಈ ಬಾರಿ ಹಿರಿಯರಿಗಿಂತ ಹೆಚ್ಚಾಗಿ ಇಲ್ಲೇ ಹುಟ್ಟಿ ಬೆಳೆದ ಪುಟಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹ-ಕುತೂಹಲದಿಂದ ಭಾಗವಹಿಸಿ ಪೂಜೆ ಮಾಡಿದ್ದು ತುಂಬಾ ವಿಶೇಷವಾಗಿತ್ತು!

Shivaratri 2014 celebrated in America

ನಂತರ ಈ ಕೆಳಕಂಡ ಕಾರ್ಯಕ್ರಮಗಳು ನೆರೆದಿದ್ದವರನ್ನು ರಂಜಿಸಿದವು.

1) ಇಷ್ಟ ಲಿಂಗ ಪೂಜೆ - ನಡೆಸಿ ಕೊಟ್ಟವರು ವಾಣಿ ಹುಲಿಕೆರೆ.

2) ಮಕ್ಕಳಿಂದ ಶರಣರ ವಚನಗಳು - ದೀಕ್ಷಾ ಅನಿಲ್ ಕುಮಾರ್, ದೀಕ್ಷಾ ಗೌಡ, ಇಶಾನ್ ವಿಜಯ್, ರಕ್ಷಾ ಅನಿಲ್ ಕುಮಾರ್, ಅನಿಷಾ ಅರಭಾವಿ ಮತ್ತು ತೇಜಸ್ ಬಸವರಾಜಪ್ಪ.

3) ಕು.ಇಂಚರ ಗಡ್ಡಿ ಮತ್ತು ಕು.ಸಿದ್ಧಾರ್ಥ್ ಮಸರೂರ್ ಚೊಕ್ಕವಾಗಿ ನಡೆಸಿಕೊಟ್ಟ, ಪುಟಾಣಿ ಮಕ್ಕಳ ವೇಷ-ವಿನ್ಯಾಸ ಕಾರ್ಯಕ್ರಮದಲ್ಲಿ ಹಲವಾರು ಪುಟಾಣಿಗಳು ಶರಣೆ ಅಕ್ಕಮಹಾದೇವಿ, ಬಸವಣ್ಣ, ಶಿವ, ಶರಣ ಮಾಚಿದೇವ, ಅಕ್ಕನಾಗಮ್ಮ, ಹರಳಯ್ಯ, ಗುಡ್ದಾಪುರದ ದಾನಮ್ಮ ಹೀಗೆ ಹಲವಾರು ಶಿವ ಶರಣ-ಶರಣೆಯರ ವೇಷದಲ್ಲಿ ಸ್ಟೇಜ್ ಮೇಲೆ ಬಂದಾಗ ಎಲ್ಲರಿಂದ ಜೋರಾಗಿ ಮೆಚ್ಚುಗೆಯ ಕರತಾಡನ ಕೇಳಿ ಬಂದಿತ್ತು.

4) ವೃಂದಾ ಐತ್ಹಾಲ್ ಅವರಿಂದ ಶಿವಸ್ತುತಿ.

5) ಭರ್ಜರಿ ಶಿವ ತಾಂಡವ ನೃತ್ಯ ಮಾಡಿ ಎಲ್ಲರ ಮನಸೂರೆಗೊಂಡಿದ್ದು ಕು.ಶ್ರೇಯ ಹರ್ಷವರ್ಧನ.

6) ಕು.ಇಂಚರ ಗಡ್ಡಿಯಿಂದ ಬಿಲ್ವಾಷ್ಟಕಂ.

7) "ಶಿವನೊಲಿದರೆ ಭಯವಿಲ್ಲ" ಅಂತಾ ಹೇಳುತ್ತಾ "ಶ್ರೀ ಮಂಜುನಾಥ ಚರಿತೆ" ಚಿತ್ರದ ಹಾಡಿಗೆ ಸರಿಯಾಗಿ ಹೆಜ್ಜೆ ಹಾಕಿದ್ದು ಪುಟಾಣಿಗಳಾದ ದೀಕ್ಷಾ, ದಿಯಾ, ಮೇಘ ಕುರ್ತಕೋಟಿ, ರಕ್ಷಾ ಮತ್ತು ಸಾನ್ವಿ ದೇಶಪಾಂಡೆ - ನೃತ್ಯ ನಿರ್ದೇಶನ ಶಿಲ್ಪಾ ದೇಶಪಾಂಡೆ ಹಾಗು ಕವಿತಾ ಬಾಳುರ್.

8) ಶ್ರೀ ಶಿವ ಷಡಾಕ್ಷರ ಸ್ತೋತ್ರ - ಕು.ಅಪರ್ಣ ಮತ್ತು ಅಂಜು ಸೋಮನಾಥ್ ರವರಿಂದ.

9) ಭಾವನ ದಿನೇಶ್ ನೃತ್ಯ ನಿರ್ದೇಶನದಲ್ಲಿ "ಬ್ರಹ್ಮ ಮುರಾರಿ " ಪುಟಾಣಿಗಳಿಂದ ನೃತ್ಯ - ಅಮೋಘ್ ಕಾಜಿ, ಋತು ಕುರ್ತಕೋಟಿ, ಶ್ರೇಯ ಹರೀಶ್, ಶ್ರೀನಿವಾಸ್ ದೇಶಪಾಂಡೆ, ಸಿರಿ ಹರೀಶ್ ಮತ್ತು ಸ್ನೇಹ ಬಾಳುರ್.

10) ವಚನ ಹಾಡುಗಾರಿಕೆ - ಲತಾ ನಾರಾಯಣ.

11) ವಾಣಿ ಹುಲಿಕೆರೆ ನೃತ್ಯ ನಿರ್ದೇಶನದಲ್ಲಿ "ಮಹಾಪ್ರಾಣ ದೀಪಂ ಶಿವಂ" ನೃತ್ಯ ಮಾಡಿದವರು ಸರಿತಾ ಮಸರೂರ್, ಶಿಲ್ಪಾ ಶಾಸ್ತ್ರಿ, ವಾಣಿ ಹುಲಿಕೆರೆ ಮತ್ತು ಸುಮಾ ಬಸಂತ್.

12) ಬಸವರಾಜು ಚಿನ್ನದುಪ್ಪರಿಗೆ ಅವರಿಂದ ಬಸವ ಪ್ರವಚನ.

13) ನೃತ್ಯ - ಪುಟಾಣಿ ಶ್ರೇಯ ಗೌಡ.

14) ದಾಸರ ಪದಕ್ಕೆ - ಕೀ ಬೋರ್ಡ್ ನುಡಿಸಿದ್ದು ಕು.ಯಶಸ್ ಬಸವರಾಜಪ್ಪ.

15) ಶಿವನ ಬಗ್ಗೆ ಒಂದು ನೃತ್ಯ ನಾಟಕ - ಅಹ್ಜೀಥ ಶಂಕರ್, ಮಾತಂಗಿ ನೆಲ್ಲಿಚೆರಿ, ಸುಭಾತ್ರ ಚೆಲ್ಲದುರೈ ಮತ್ತು ಕನಕಪ್ರಿಯ ಚೆಲ್ಲದುರೈ.

16) ಪ್ರಾರ್ಥನೆ ಬಗ್ಗೆ ಕೆಲವು ಮಾತುಗಳು - ಪ್ರಣತಿ ಸಂತೋಷ್ ಮತ್ತು ಸುನೈನ ಸಂತೋಷ್.

ಸದಾನಂದ್ ಮಸರೂರ್ ಅವರು ವಂದನಾರ್ಪಣೆ ಮಾಡಿದ ನಂತರ

17) ವಾಣಿ ಹುಲಿಕೆರೆ ಮತ್ತು ಮಧು ಸಣ್ಣಪ್ಪನವರ್ ನೃತ್ಯ ನಿರ್ದೇಶನದಲ್ಲಿ "ಜ್ಞಾನದ ಬಲದಿಂದ" ನೃತ್ಯಕ್ಕೆ ಹೆಜ್ಜೆ ಹಾಕಿದ್ದು ಪುಟಾಣಿಗಳಾದ ಅಖಿಲ್ ಬಾಣಾವರ್, ಮಾನ್ಸಿ ಸಣ್ಣಪ್ಪನವರ್, ಓಂ ಬಸವಯ್ಯ, ರಿತ್ವಿಕ್ ರಾವ್, ಸಚಿತ್ ಹುಲಿಕೆರೆ ಮತ್ತು ತನಿಷ್ಕ ಕಬ್ಬಿನಾದ.

18) ಮಲ್ಲಿ ಸಣ್ಣಪ್ಪನವರ್ ನೃತ್ಯ ನಿರ್ದೇಶನದಲ್ಲಿ "ಗಂಗೆ ಅವನ ತಲೆಮೇಲೆ" ಮಕ್ಕಳಿಂದ ನೃತ್ಯ - ಅಮೃತ್ ಬಾಣಾವರ್, ಮಾನವ್ ಸಣ್ಣಪ್ಪನವರ್, ಸಮರ್ಥ್ ಬಸಂತ್, ಸಮರ್ಥ್ ಮಸರೂರ್, ಸಿದ್ದಾರ್ಥ್ ಮಸರೂರ್, ಸಾತ್ವಿಕ್ ಹುಲಿಕೆರೆ ಮತ್ತು ಸಾತ್ವಿಕ್ ಶಿವಪ್ರಸಾದ್.

19) ವಾಣಿ ಹುಲಿಕೆರೆ ನೃತ್ಯ ನಿರ್ದೇಶನದಲ್ಲಿ"ನೀಡು ಶಿವ ನೀಡದಿರು ಶಿವ" ನೃತ್ಯ - ಅನಿಷ ಭಟ್ನಾಗರ್, ಇಂಚರ ಗಡ್ಡಿ, ಜ್ಯೋತಿರ್ಮಯಿ ಮಾವಿಲ್ಲಪಲ್ಲಿ, ಕೃತಿ ಗೌಡ ಮತ್ತು ಶೃಷ್ಟಿ ಸೋಸಲೆ.

20) ಯಶವಂತ್ ಗಡ್ಡಿಯವರಿಂದ ವಚನ ಹಾಡುಗಾರಿಕೆ.

21) ವಾಣಿ ಹುಲಿಕೆರೆ ಮತ್ತು ಮಲ್ಲಿ ಸಣ್ಣಪ್ಪನವರ್ ನೃತ್ಯ ನಿರ್ದೇಶನದಲ್ಲಿ "ನಿಮ್ಮ ಶರಣರಿಗೆ" ನೃತ್ಯ - ಆಶಾ ಗಡ್ಡಿ, ಗಿರೀಶ್ ಗೌಡ, ಮಧು - ಮಲ್ಲಿ ಸಣ್ಣಪ್ಪನವರ್, ಮಹೇಶ್ ಹುಲಿಕೆರೆ, ಸದಾನಂದ್ ಮಸರೂರ್, ಶಿಲ್ಪಾ-ಸಂತೋಷ್ ಸಂಗನಲ್ಮಥ್, ಶಿಲ್ಪಾ-ಶಿವಪ್ರಸಾದ್ ಮತ್ತು ವಿಜಯ ಬಸವಯ್ಯ.

ಈ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಮೇಲೆ ಶರಣರು ಮನೆಯಲ್ಲೇ ಮಾಡಿ ತಂದಿದ್ದ ಹೋಳಿಗೆ ಪ್ರಸಾದ ಸ್ವೀಕರಿಸಿದ ಹೊರನಾಡಿನಲ್ಲಿರುವ ಈ ಎಲ್ಲ ಶರಣ - ಶರಣೆಯರಲ್ಲಿ ಏನೋ ಒಂದು ಧನ್ಯತಾ ಭಾವ ಮೂಡಿತ್ತು! ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ವ ಧರ್ಮ ಶರಣ-ಶರಣೆಯರು ಪಕ್ಕದ ಬೋಸ್ಟನ್, ನ್ಯೂ ಹ್ಯಾಂಪ್ ಶೈರ್, ನ್ಯೂ ಜೆರ್ಸಿ ಮತ್ತು ದೂರದ ಟೆಕ್ಸಾಸ್ ನಿಂದ ಆಗಮಿಸಿ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದು ಎಲ್ಲರಿಗೂ ಹೆಚ್ಚಿನ ಸಂತೋಷ-ಸಡಗರವನ್ನುಂಟು ಮಾಡಿತ್ತು.

ಬಯಸಿ ಬಂದುದು ಅಂಗ ಭೋಗ,
ಬಯಸದೆ ಬಂದುದು ಲಿಂಗ ಭೋಗ!

English summary
Veerashaiva Samaja of Connecticut (VSCT) celebrated Shivaratri 2014 in Connecticut, USA recently. Various cultural programmes were organized at Sri Satyanarayana Temple to praise Lord Shiva by children and elders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X