ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕನ್ನಡಿಗ, ಸಾಹಿತಿ ವೈಆರ್ ಮೋಹನ್ ಇನ್ನಿಲ್ಲ

By Shami
|
Google Oneindia Kannada News

ಬೆಂಗಳೂರು, ಏ 21 : ಹಿರಿಯ ಅಮೆರಿಕನ್ನಡಿಗ, ಕನ್ನಡ ಸಾಹಿತಿ ವೈ.ಆರ್.ಮೋಹನ್ ಅವರು ಟಸ್ಕಲೂಸಾ ಅಲಬಾಮದಲ್ಲಿ ಏಪ್ರಿಲ್ 20, 2015ರ ಸಂಜೆ ನಿಧನರಾದರು. ಹಲವಾರು ವರ್ಷಗಳಿಂದ ಅವರು 'ಪಾರ್ಕಿನ್ಸನ್' ಕಾಯಿಲೆಯಿಂದ ಬಳಲುತ್ತಿದ್ದರು.

'ನೆನಪುಗಳು' ಮೋಹನ್ ಅವರ ಆತ್ಮಚರಿತ್ರೆ. ಇದರಲ್ಲಿ 'ಪಾರ್ಕಿನ್ಸನ್'ನೊಂದಿಗಿನ ತಮ್ಮ ಹೋರಾಟವನ್ನು ಪುಸ್ತಕದಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಅವರ "ನೆನಪುಗಳು" ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭ್ಯವಾಗಿದೆ. ಇದು ಅಮೆರಿಕನ್ನಡಿಗ ಬರಹಗಾರರಿಗೆ ಸಂದ ಮೊದಲ ಪ್ರಶಸ್ತಿಯಾಗಿದೆ.

Prof. Y.R. Mohan, Alabama University, NRI Kannada writer dies

"ಅಮೆರಿಕಾಯಣ" ಅವರ ಇನ್ನೊಂದು ಕೃತಿ. ಕಾಯಿಲೆಯಿಂದ ನರಳುತ್ತಿದ್ದರೂ, ಇತ್ತೀಚೆಗೆ ಕೆಲವು ಇಂಗ್ಲಿಷ್ ಕೃತಿಯನ್ನು ಕೂಡ ರಚಿಸಿದ್ದರು. ಅಲಬಾಮಾ ಯುನಿವರ್ಸಿಟಿಯಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಮೋಹನ್ ಅವರು "ಸಹ್ಯಾದ್ರಿ" ಕನ್ನಡ ಕೂಟದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಕನ್ನಡ ಸಾಹಿತ್ಯ ರಂಗದ ಪ್ರಕಟನೆಗಳಲ್ಲಿಯೂ ಮೋಹನ್ ಅವರ ಲೇಖನಗಳು ಪ್ರಕಟವಾಗಿವೆ. ಮೋಹನ್ ಅವರ ನಿಧನಕ್ಕೆ ಅಮೆರಿಕ ಕನ್ನಡ ಲೇಖಕರ ಬಳಗ ಕನ್ನಡ ಸಾಹಿತ್ಯ ರಂಗ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಅರ್ಪಿಸಿದೆ. [ಹಾಗಾದರೆ ನೀನು ಸಾಹಿತಿಯಲ್ಲ, ಬಾಣಂತಿ!]

English summary
RIP: Dr.Y.R.Mohan, eminent NRI Kannada writer, retired professor of Sociology at University of Alabama, Tuscaloosa AL, no more. His autobiography in Kannada 'Nenapugalu' a heart rendering account - Fighting Parkinson's disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X