ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಟಕಚೈತ್ರ 2017 : ಎರಡು ನಾಟಕಗಳ ವಿಮರ್ಶೆ

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದ ಹವ್ಯಾಸಿ ರಂಗಕಲಾವಿದರು ಒಗ್ಗೂಡಿ ಕಟ್ಟಿದ ತಂಡವೇ "ನಾಟಕ ಚೈತ್ರ". ಈ ಉತ್ಸವದ ಅಂಗವಾಗಿ 'ಮಳೆ ದಂಡ' ಮತ್ತು 'ಮಾಗಡಿ ಡೇಸ್' ಕನ್ನಡ ನಾಟಕಗಳನ್ನು ಆಡಲಾಯಿತು. ನಾಟಕಗಳ ವಿಮರ್ಶೆ ಇಲ್ಲಿದೆ.

By ಆನಂದ ರಾಮಮೂರ್ತಿ, ಸ್ಯಾನ್ ಫ್ರಾನ್ಸಿಸ್ಕೋ
|
Google Oneindia Kannada News

ಮಿಷನ್ ಸಿಟಿ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ನ ಮುಂಬಾಗದಲ್ಲಿದ್ದ ಅರ್ಲಿ ಬರ್ಡ್ ಪಾರ್ಕಿಂಗ್ ಆಲ್ರೆಡಿ ಫುಲ್. ಪಕ್ಕದ ಸ್ಕೂಲ್ ಪಾರ್ಕಿಂಗ್ ನಲ್ಲಿ ಕಾರ್ ನಿಲ್ಲಿಸಿ ಚಳಿಗೆ ಭುಜ ಮುದುರಿ ಕೈ ಕಟ್ಟಿ ಅಲ್ಲಿಂದ ಆಡಿಟೋರಿಯಂ ಕಡೆಗೆ ಟ್ರೈನ್ನಂತೆ ಸಾಗಿದ್ದ ಜನರ ಸಾಲನ್ನು ಸೇರಿ ಸಾಗಿದೆವು.

ಮದುವೆ ಮನೆಯಲ್ಲಿ ಸ್ವಾಗತಕೊರಲು ನಿಂತಂತೆ ಮೂರ್ ಮೂರ್ ಜನ ಬಾಗಿಲ ಬಳಿ. ಆದರೆ ಅವರ ಕೈನಲ್ಲಿ ಪನ್ನೀರ್ ನ ಬದಲು ಫೋನು. ಈಟಿಕೆಟ್ ತೋರಿಸಿದ್ರೆ ಬ್ಲೆಸ್ ಮಾಡಿ ಸ್ಟಾಂಪ್ ಒತ್ತಿ ಒಳಗ್ ಬಿಡ್ತಾ ಇದ್ರು. ಜೊತೆಗೆ ಮುಗುಳ್ನಗು ಉಚಿತ. ಇಲ್ಲಿ Time & Crowd Management ಹಾಗೂ Paper saving efforts ಕಾಣಬಹುದು.

ಲಾಬಿಯಲ್ಲಿ ಮುಂದೆ ಬಂದ್ರೆ ನಾಟಕಚೈತ್ರದ trademark ಫೋಟೋ ಬೂತ್, ಮುಂಬರುವ ಸಾವಿರಾರು ಕ್ಲಿಕ್ಗಳಿಗೆ ಪೋಸ್ಗಳಿಗೆ ಕಾದು ನಿಂತಂತಿತ್ತು. ಒಂದು ಕಡೆ food and beverages ಇನ್ನೊಂದು ಕಡೆ ಅವನ್ನ ಕೊಳ್ಳಲು ಟಿಕೆಟ್ ಕೌಂಟರ್. ಇವೆರಡರ ನಡುವೆ ಬೇ ಏರಿಯಾ ಕನ್ನಡಿಗರ BIG brother KKNC (Kannada Koota Of Northern California) ಕೂಡ ತನ್ನ ಬೂತ್ ನೊಂದಿಗೆ ರೆಡಿ ಇತ್ತು. ಇಲ್ಲಿ ಸಹಬಾಳ್ವೆ ಮತ್ತು ಪರಸ್ಪರ ಬೆಂಬಲದ ಉದಾಹರಣೆ ನೋಡಬಹುದು. [ಬೇ ಏರಿಯಾದಲ್ಲಿ ನಾಟಕ ಚೈತ್ರದ ಎರಡು ನಾಟಕಗಳು]

Nataka Chaitra 2017 : Kannada Drama review

ಸಭಾಂಗಣದ ಕಡೆಗೆ ಸಾಗುತ್ತ ಬಂದರೆ ಗೋಡೆಗಳ ಮೇಲೆ ಈ ಹಿಂದೆ ನಡೆದ ಎಲ್ಲ ನಾಟಕಗಳ ಸ್ಟಾರ್ ಮೊಮೆಂಟ್ಸ್ ಸೆರೆಹಿಡಿದು ಅಲಂಕರಿಸಲಾಗಿತ್ತು. ನಾಟಕಚೈತ್ರ ತಂಡ ಇದುವರೆಗು ಪ್ರತಿ ಪ್ರೊಡಕ್ಷನ್ ಗೆ ಎರಡರಂತೆ ಒಟ್ಟು ಎಂಟು ನಾಟಕಗಳನ್ನು ಪ್ರದರ್ಶಿಸಿದೆ. ಇನ್ನೊಂದೆಡೆ ನಾಟಕಗಳ ನೆನಪುಗಳನ್ನು ಕಾಲಾನುಕ್ರಮವಾಗಿ ಜೋಡಿಸಿ ಮರೆತುಹೋದ ದೃಶ್ಯಗಳು ಮರುಕಳಿಸುವಂತೆ ಮಾಡಲಾಗಿತ್ತು. ಒಟ್ಟಿನಲ್ಲಿ ನಾಟಕ ನೋಡಲು ಸರಿಯಾದ ಮೂಡ್ ಸೆಟ್ ಮಾಡುವ ಪ್ರಯತ್ನವಿದ್ದಿರಬಹುದು. ಸಭಾಂಗಣದ ಬಾಗಿಲ ಬಳಿ ಕುಶೋಲೋಪರಿ ವಿಚಾರಿಸುತ್ತಾ ಕೈಗೆ ಕೈಪಿಡಿಯನ್ನಿತ್ತು ಬರಮಾಡಿಕೊಳ್ಳಲಿಬ್ಬರು ಸ್ವಯಂಸೇವಕರು.

ಒಳಗಡೆ ನೋಡಿದರೆ ಮಧ್ಯದ ಸೀಟಿಂಗ್ಸ್ ಫುಲ್, ತುದಿಗಳಲ್ಲಿ ಮಾತ್ರ ಸೀಟ್ ಖಾಲಿ ಇದ್ದವು. ಕೂತು, ಅಕ್ಕ ಪಕ್ಕ Hi ಹಲೋ ಚೆನ್ನಾಗಿದ್ದೀರ ಅನ್ನೋಷ್ಟರಲ್ಲಿ ಆಕಾಶವಾಣಿಯೊಂದು ನಾಟಕ ಇನ್ನು 5 ನಿಮಿಷಗಳಲ್ಲಿ ಶುರುವಾಗುತ್ತದೆ ಎಂದೇಳಿ ಹೌಸ್ ರೂಲ್ಸ್ ಕೂಡ ತಿಳಿಸುತ್ತದೆ. ಸರಿ ಫೋನ್ silent ಗೆ ಹಾಕಿ ಕಾತರದಿಂದ ಕಾದು ಕುಳಿತೆವು.

ಪರದೆ ಸರಿಯಲು ಮೊದಲಿಗೆ ಕಾಣಿಸಿದ್ದು ಸುಂದರವಾದ ಗಾಜಿನ ಕಿಟಕಿಗಳುಳ್ಳ ಮನೆಯ ಲಿವಿಂಗ್ ರೂಮ್ನ ಅಮೋಘವಾದ ಸೆಟ್ಟು ಮತ್ತು ಕೆಲವು ಗುರುತಿಸಬಹುದಾದ ಮುಖಗಳು. ಕಲ್ಪನೆ ಮಾಡ್ಕೊಳಿ, ಕತ್ತಲ ರಾತ್ರಿಯಲ್ಲಿ ನಿಮ್ಮ ಕಾರು ಕೆಟ್ಟೋಗಿ ಜೋರು ಮಳೆಯ ನಡುವೆ ಸಿಲುಕಿದಾಗ, ದೂರದ ಬೆಟ್ಟದ ತುದಿಯಲ್ಲಿ ಕಾಣೋ ಬೆಳಕು, ಒಂದು ಸ್ನೇಹಮಯ ಮುಕ್ತ-ಮನಸ್ಸಿನ ವಾತಾವರಣ ನಿಮ್ಮ ಮುಂದೆ ತೆರೆದಿಟ್ಟಾಗ, ನಿಮ್ಮ ಆತಂಕ ತುಸು ಕಡಿಮೆಯಾಗಿ ಸ್ವಲ್ಪ ಧೈರ್ಯ ಬರುತ್ತೆ ಅಲ್ವೇ? ಅಲ್ಲಿ ಉತ್ತಮ ಆತಿಥ್ಯದೊಂದಿಗೆ ಅವರೊಡನೆ ಒಂದು ಕುತೂಹಲಕಾರಿ ಆಟದಲ್ಲಿ ಭಾಗಿಯಾಗಲು ಅವಕಾಶ ದೊರೆತರೆ ಬೇಡ ಅನ್ನೋಕಾಗತ್ಯೇ?

Nataka Chaitra 2017 : Kannada Drama review

ನೋಡಿ, ಈ ರೀತಿ ಶುರುವಾಯ್ತು salesman Mr ಆನಂದನ ಕಥೆ ಇವತ್ತಿನ ಮೊದಲ ನಾಟಕ 'ಮಳೆ ದಂಡ'ದಲ್ಲಿ. ಅವನು ಆ ಸಂಜೆ ಹೊಕ್ಕಿದ್ದು ನಿವೃತ್ತ ನ್ಯಾಯಾಧೀಶರು ವಕೀಲರುಗಳನ್ನೊಳಗೊಂಡ ಒಂದು ಸಂತೋಷಕೂಟವನ್ನ, ಆಡಲು ಒಪ್ಪಿದ್ದು ಕಟಕಟೆಯಲ್ಲಿ ನಿಂತು ಆಡುವ ಆಟ ಅದೇನು ಅಂತ ಗೊತ್ತು ತಾನೆ? ಒಂಟಿ ಮನೆಯಲ್ಲಿದ್ದವರ ಪ್ರಕಾರ ಈ ಆಟ ಅವರ ನಿವೃತ್ತ ಜೀವನಕ್ಕೆ ಒಂದು ಹೊಸ ಆಯಾಮ ಕೊಟ್ಟಿತ್ತು. ಆಟ ಸುಲಭ ಮತ್ತು ಕೇಳಲು ಆಸಕ್ತಿಕರ, ಏನಿಲ್ಲ ಜೀವನದಲ್ಲಿ ಮಾಡಿರೋ ಒಂದು ತಪ್ಪನ್ನು ನ್ಯಾಯಾಧೀಶರ ಮುಂದೆ ವಾದ ಮಂಡನೆಮಾಡಿ ನಿವಾರಿಸಿಕೊಳ್ಳುವುದು. ಆದರೆ Mr ಆನಂದ ನಾನು ಏನು ತಪ್ಪೇ ಮಾಡಿಲ್ಲ ಅಂತಾನೆ! ರಾಮಣ್ಣ ಕೇಳಬೇಕೆ, ತನ್ನ ಅಷ್ಟು ವರ್ಷ ಸರ್ವೀಸ್ ನಲ್ಲಿ ಇಂಥ ಎಷ್ಟು ಮಂದಿ ಆನಂದರನ್ನ ನೋಡಿಲ್ಲ ಚಾಣಾಕ್ಷ ವಕೀಲ? ತನ್ನ ವಾಕ್ಚಾತುರ್ಯತೆಯಿಂದ ಬರಿ ಕ್ಯಾಶುಯಲ್ ಮಾತ್ಮಾತಲ್ಲೆ ಆನಂದ್ನಿಂದ ಎಷ್ಟೋ ವಿಷಯಗಳನ್ನ ಬಹಿರಂಗ ಪಡಿಸುತ್ತಾ ಕೊನೆಗೆ ಒಂದು ಕೊಲೆ ಪ್ರಕರಣವನ್ನೇ ಆನಂದನ ವಿರುದ್ದ ಹೆಣೆಯುತ್ತಾನೆ.

ಈ ನಾಟಕದಲ್ಲಿ ತುಂಬಾ actions ಅಥವಾ ಬದಲಾಗುವ ದೃಶ್ಯಗಳಿಲ್ಲ ಆದರೆ slow and steady ಡೈಲಾಗ್ಸ್ ನಿಂದ build ಆಗೋ tension ನಿಂದ ನಾವು ನಾಟಕದಲ್ಲಿ ಮುಳುಗಿಹೋಗ್ತಿವಿ. ಇಲ್ಲಿ ದೃಶ್ಯಗಳಿಗಿಂತ ಮಾತುಕತೆ ಮುಖ್ಯ, ಒಂದು ಡೈಲಾಗ್ ಕೇಳುಸ್ಕೊಳ್ದೆ ಮಿಸ್ ಆದ್ರೆ ಕಷ್ಟ. ಮನೆಯ ಪಡಸಾಲೆಯಲ್ಲಿ ತಟ್ಟನೆ ರೂಪುಗೊಳ್ಳುವ ನ್ಯಾಯಾಲಯದ ನಕಲು ತುಂಬ ಚೆನ್ನಾಗಿತ್ತು. ಕಟಕಟೆಯೊಂತು ಥೇಟ್ ಅಸಲಿ.

ಉಲ್ಲೇಖ ಮಾಡಲೆಬೇಕಾದ ಅಂಶಗಳೆಂದರೆ ಸ್ಪೆಷಲ್ ಲೈಟ್ಸ್ ಮತ್ತು ಧ್ವನಿ ಎಫೆಕ್ಟ್. ಮಳೆ ಗಾಳಿ ಮಿಂಚು ಗುಡುಗು ಇವುಗಳು ಪರಿಣಾಮಕಾರಿಯಾಗಲು ಕಾಳಜಿ ತಗೊಂಡು ಪ್ರಯತ್ನ ಮಾಡಿದ್ದಾರೆ. ಗಾಳಿ ಬಂದಾಗ ಗಿಡವೊಂದು ಅಲುಗಾಡುವುದನ್ನು ನಾನು ಗಮನಿಸಿದೆ. ಮಳೆ ದಂಡದ ನಟರು ಉತ್ತಮ ನಟನೆಯಿಂದ ಎಲ್ಲರ ಮೆಚ್ಚುಗೆಗಳಿಸಿದರು. ಮಳೆ ದಂಡ ನಾಟಕದ ಕತೃ ಎಲ್ ಎಸ್ ಸುಧೀಂದ್ರ ನಿರ್ದೇಶಕ ಅಶೋಕ ಉಪಾಧ್ಯರವರ ಸಾಧನೆಯ ಮುಡಿಗೆ ಇನ್ನೊಂದು ಗರಿಯ ಸೇರ್ಪಡೆ.

Nataka Chaitra 2017 : Kannada Drama review

ಬ್ರೇಕ್ ಸಮಯದಲ್ಲಿ ಲಾಬಿಯಲ್ಲಿ ಕಂಡಿದ್ದು ಕೇಳಿದ್ದು, ಗುಜುಗುಜು ಸದ್ದುಗಳು, ಮೆಚ್ಚುಗೆಗಳು, ಪ್ರಶಂಸೆಗಳು, ಲೈನ್ ಗಳು, ಸೆಲ್ಫಿಗಳು, ಫೋಟೋಗಳು, ತಿಂಡಿಗಳು, ಊಟಗಳು, Hi ಗಳು, Bye ಗಳು, ಇದ್ದಕ್ಕಿದ್ದಂತೆ ಘಂಟೆಯ ಶಬ್ದಗಳು, ಟೈಮ್ ಆಯ್ತು ನಡೀರಿ ಒಳಗೆ ಅಂತ ಸಿಗ್ನಲ್ ಗಳು.

ಎರಡನೆಯ ನಾಟಕದ ಆರಂಭದ ದೃಶ್ಯ ಯುವ ನಾಯಕನೊಬ್ಬ ರಾಜ್ಯದ ಸಿಎಂ ಆಗಿ ಹೊಸ ಬದಲಾವಣೆ ತರುವ ಬಗ್ಗೆ ತನ್ನ ಪಿಎ ಜೊತೆ ಡಿಸ್ಕಶನ್ ಮಾಡ್ತಾನೆ. ಈ ನಾಟಕದಲ್ಲಿ ಸ್ಟೇಜ್ ವಿನ್ಯಾಸ ಬಹಳ ವಿಶೇಷವಾಗಿತ್ತು. ಅದು ನನಗೆ ಕಂಡದ್ದು ಹೀಗೆ, ಎಡಗಡೆ ದುರಭಿಮಾನದ ಆಡಳಿತಶಾಹಿ ಬಂಧನದಲ್ಲಿ ಸಿಲುಕಿದ್ದ ಹೊಸ ಪ್ರಯತ್ನದ ಅಲೆ, ಬಲಗಡೆ ಯಾವ ಬಂಧನಗಳು ಇಲ್ಲದ ಹೊಸ ಬದಲಾವಣೆಗಳಿಗಾಗಿ ಕಾದುನಿಂತ ಮತ್ತು ಕಾದು ಬೇಸತ್ತ ಅತಿ ಸಾಮಾನ್ಯ ತಲೆ, ನಡುವೆ ಈ ಎಡ ಬಲ ಎರಡನ್ನು ಪೇಚಿಗೆ ಸಿಕ್ಕಿಸುವ Media and Law Enforcement, ಮತ್ತವುಗಳ ವಿಲಕ್ಷಣ ಪೈಪೋಟಿಯ ಬಲೆ.

ಈ ನಾಟಕ, ನಿಜಜೀವನದಲ್ಲಿ ನಡೆಯುವ ಘಟನೆಗಳನ್ನು ವಿಡಂಬನಾತ್ಮಕವಾಗಿ ಪ್ರೇಕ್ಷಕರ ಮುಂದೆ ರಪ್ ರಪ್ ರಪ್ ಅಂತ ಪ್ರದರ್ಶಿಸುತ್ತ instant gratification ಕೊಡುತ್ತ ಸಾಗುತ್ತದೆ. ನಿಮ್ಮನ್ನು ಕ್ಷಣಾರ್ಧದಲ್ಲಿ ವಿಧಾನಸೌಧದಿಂದ ಜೋಪಡಪಟ್ಟಿಗೆ ಅಲ್ಲಿಂದ ನ್ಯೂಸ್ ರೂಮ್ಗೆ ಕರೆದೊಯ್ದದ್ದು ಲೈಟಿಂಗ್ ಅದಕ್ಕೆ ಪೂರಕ ಆ ತರನಾಗಿ ಸೆಟ್ ಡಿಸೈನ್ ಮಾಡಿರೋದು.

Nataka Chaitra 2017 : Kannada Drama review

ಕಥೆಗಿಂತ ಚಿತ್ರಕಥೆ ಮೇಲು, ಡೈಲಾಗ್ಸ್ ಸೂಪರ್ ಅಂದ್ರೆ ಆಕ್ಟಿಂಗ್ ಡಬಲ್ ಸೂಪರ್. ವಾಸ್ತವದ ಚಿತ್ರಣವನ್ನ ನಾಟಕ ಪರೀಕ್ಷೆಯಲ್ಲಿ ಎರಡು ಅಂಕಿಯ ಪ್ರಶ್ನೆಗೆ ಉತ್ತರಿಸುವಂತೆ ಸಂಕ್ಷಿಪ್ತವಾಗಿ ಉತ್ತರಿಸುತ್ತಾ ಹೋಗುತ್ತದೆ. ಮ್ಯಾಟರ್ ಸೀರಿಯಸ್, ಆದ್ರೆ ಪ್ರೇಕ್ಷಕನಿಗೆ ಅದರ ಅರಿವು ಮೂಡಿಸಿ ಗಕ್ಕನೆ ನಗಿಸಿ ವಾಪಸ್ ಕರಿಸಿಕೊಳ್ಳುತ್ತದೆ ನಾಟಕ.

ರಂಗಭೂಮಿಗೆ ಇರುವ ಶಕ್ತಿ ಅದು, ಜನರನ್ನು ಸಂಘಟಿಸಿ, ಸಾಮಾಜಿಕ ಸಮಸ್ಯೆಗಳ ವಿರುದ್ಧ ಸಮಾಜವನ್ನು ಹುರಿದುಂಬಿಸಿ ಹರಿತ ಮಾಡುವ ಸಾಣೆಕಲ್ಲು ಥಿಯೇಟರ್. ನೋಡಿ ಲಕ್ಕವ್ವ ಸಿಎಂ ಭೇಟಿಗೆ ಹೋಗುವಾಗ ದಾರಿಯುದ್ದಕ್ಕೂ ದುಡ್ಡು ಬಿಚ್ಚುತ್ತಾ ಹೋಗ್ತಾಳೆ, ಮೂರನೇ ವ್ಯಕ್ತಿ ಎಲ್ಲಿಗೆ ಅಂತ ಕೇಳಿದ್ರೆ "ನಿನ್ನ ತಿಥಿಗೆ" ಅಂದು ಜನರ ನಗುಸ್ತಾಳೆ. ಕೊನೆಗೆ ಏಟು ತಿಂದು ಬಿಳ್ತಾಳೆ. ಇನ್ನೇನು ಮಂದಿ ಮುಖ ಸಣ್ಣ ಮಾಡ್ಕೊಳೋ ಹೊತ್ತಿಗೆ ಸರಿಯಾಗಿ ಸಿಎಂನ ಪಿಎ "ಏನು ಗಲಾಟೆ ಇಲ್ಲ ಸಾರ್ ಎಲ್ಲ ಕಂಟ್ರೋಲ್ ನಲ್ಲಿ ಇದೆ" ಅಂತ ವ್ಯಂಗ್ಯವಾಗಿ ಹೇಳಿ ಮತ್ತೆ ಜನರನ್ನ ನಗುಸ್ತಾರೆ, lights off scene change.
Overall very entertaining play.

ಪಾತ್ರಗಳನ್ನ ನಿಭಾಯಿಸಿದ ಕಲಾವಿದರು ಅತ್ಯುತ್ತಮ ಅಭಿನಯ ಕೊಟ್ಟು ಜನರ ಹುಬ್ಬೇರುವಂತೆ ಮಾಡಿದ್ದಾರೆ. ಜೀನಿಯಸ್ ನಾಟಕಕಾರ ಅಭಿಷೇಕ್ ಅಯ್ಯಂಗಾರ್ ಒಂದು ಉತ್ತಮ ನಾಟಕವನ್ನ ಬೇ ಏರಿಯಾಗೆ ಪರಿಚಯಿಸಿದ್ದಾರೆ, ಅವರ ಕೊಡುಗೆ ಬ್ರಿಲಿಯಂಟ್. ಬೇ ನ ಅಚ್ಚುಮೆಚ್ಚಿನ ಕಲಾವಿದೆ ಶರ್ಮಿಳಾ ವಿದ್ಯಾಧರ ತಮ್ಮ ಡೈರೆಕ್ಷನ್ ಹಾಗು ಅಭಿನಯದಿಂದ ಮತ್ತೊಮ್ಮೆ ಪ್ರೇಕ್ಷರ ಪ್ರೀತಿಗೆ ಪಾತ್ರರಾಗಿದ್ದಾರೆ.

ಎರಡೂ ನಾಟಕದಲ್ಲಿ ರಂಗತಂತ್ರಗಳ, ರಂಗಗೀತೆಗಳ ಹಾಗು ರಂಗಪರಿಕರಗಳ ಸಮತೋಲನವಾದ ಬಳಕೆ ಅತಿ ಪ್ರಶಂಸನೀಯ. ನಾಟಕಚೈತ್ರ ತಂಡ ತನ್ನ ಐದನೆ ಪ್ರೊಡಕ್ಷನ್ನಿಂದ ಬೆ ಏರಿಯಾದ ಕನ್ನಡ ನಾಟಕಾಸಕ್ತರ ಮನ ತಣಿಸುವಲ್ಲಿ ಯಶಸ್ವಿಯಾಗಿದೆ ಅಂದರೆ ತಪ್ಪಾಗಲಾರದು.

ಇನ್ನೊಂದು ಬಹು ಮುಖ್ಯವಾದ ಅಂಶ, ಕಲಾವಿದರೆಲ್ಲ ಅಭ್ಯಾಸದಲ್ಲಿ ನಿರತರಿರುವಾಗ ಫೊಟೊ ಬೂತ್ ಯಾರು ರೆಡಿ ಮಾಡಿದ್ದು? ಲಾಬಿ ಡೆಕೋರೇಷನ್ಗೆ ಸಹಾಯ ಮಾಡಿದ್ದು? ಫೋಟೋ ವಿಡಿಯೋ ತೇಗದದ್ದು? ಟಿಕೇಟಿಂಗ್ ಚೆಕ್ ಮಾಡಿದ್ದು? ಅಷ್ಟು ದೊಡ್ಡ ಸೆಟ್ ಡಿಸೈನ್ ಮಾಡಿ ರೆಡಿ ಮಾಡಿ ಆಡಿಟೋರಿಯಂಗೆ ಸಾಗಿಸಿದ್ದು? ಶೋ ದಿನಗಳು ಯಾರು ಸ್ಟೇಜ್ setup ಅಂಡ್ tear-down ಮಾಡಿದ್ದು? ಲೈಟಿಂಗ್ ಮತ್ತು ಸೌಂಡ್ ಸಿಸ್ಟಮ್ ನೋಡ್ಕೊಂಡಿದ್ದು? ಸೌಂಡ್ tracks ಯಾರ್ ಹಾಕಿದ್ದು? ಥೀಯೇಟರ್ ಕ್ಲೀನ್ ಮಾಡಿದ್ದು ಯಾರು? ಹಾ ನೋಡುದ್ರಾ ಎಷ್ಟು ಕೆಲಸವಿರುತ್ತೆ ಅಂತ.

ಇದೆಲ್ಲ ತಮಾಷೆ ಅಲ್ಲ ಬಿಡಿ ಬಹಳ ಬೆಂಬಲ ಬೇಕು. ಯಾರು ಈ ಸಹಾಯ ಮಾಡಿದ್ದು ಅಂದ್ರೆ, ಅವರೇ selfless service ಮಾಡೋ volunteers ಅವರಿಲ್ಲದೆ ಏನು ನಡಿಯಲ್ಲ. ಬಹುತೇಕ ಕಲಾವಿದರು ಮತ್ತು ಸ್ವಯಂಸೇವಕರು ಸಿಲಿಕಾನ್ ವ್ಯಾಲಿಯ ಟೆಕ್ ಕಂಪನಿಗಳ ಬೇರೆ ಬೇರೆ ಹುದ್ದೆಯಲ್ಲಿರುವವರು. ಕೇವಲ ಬಿಡುವಿನ ಸಮಯದಲ್ಲಿ ಇಂತಹ ಅದ್ಭುತ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರೇರಣೆ, ಅವರ ಕನ್ನಡದ ಮೇಲಿನ ಒಲವು ಮತ್ತು ರಂಗಭೂಮಿ ಮೇಲಿನ ಆಸಕ್ತಿ. ಕನ್ನಡತನವನ್ನ ಉಳಿಸಿ ಬೆಳೆಸಿಕೊಳ್ಳಲು ಕೈ ಜೋಡಿಸಿ ನಿಂತ ಎಲ್ಲ ಕಲಾವಿದರು ಮತ್ತು ಸ್ವಯಂಸೇವಕರುಗಳಿಗೆ ಬೇ ಏರಿಯಾ ಕನ್ನಡಿಗರವತಿಯಿಂದ BIG THANKS.

Photos: Sreenath Kalahasti

English summary
Amateur drama troupe Nataka Chaitra is presented two Kannada plays in San Francisco bay area recently. It is celebrating 7th year of establishment and produced 5 plays. It has produced dramas of Rajendra Karanth, TN Seetharam, Dundiraj etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X