ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೃಜನಶೀಲತೆಗೆ ಸಾಣೆ ಹಿಡಿಯಿರಿ, ಸ್ಪರ್ಧೆಗೆ ಕಥೆ ಬರೆಯಿರಿ

By Prasad
|
Google Oneindia Kannada News

ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾದ ಸ್ವರ್ಣಸೇತು 2015ರ ಸಮಿತಿಯು ಅಮೆರಿಕನ್ನಡಿಗರಿಗಾಗಿ ಕನ್ನಡ ಕಥಾಸ್ಪರ್ಧೆಯೊಂದನ್ನು ಆಯೋಜಿಸಿದೆ. ಸೃಜನಶೀಲತೆಗೆ ಕಥೆಯ ರೂಪ ಕೊಡಲು, ನಿಮ್ಮಲ್ಲಿನ ಕಥೆಗಾರನನ್ನು ಪ್ರೋತ್ಸಾಹಿಸಲು. ಕಥೆಯನ್ನು ಇಲ್ಲಿನ ಕನ್ನಡ ಮನೆಮನಗಳಿಗೆ ತಲುಪಿಸಲು ಇದೊಂದು ಸದವಕಾಶ. [ಅನಿವಾಸಿ ಭಾರತೀಯರ ಸಣ್ಣಕಥೆಗಳು]

KKNC : Swarnasetu 2015 Short Story writing competition

ಸ್ಪರ್ಧೆಯ ನಿಯಮಗಳು

* ಕಥೆ ಎರಡು ಸಾವಿರ ಶಬ್ದಗಳನ್ನು ಮೀರದಿರಲಿ.
* ಕಥೆಗಳು ಬೇರೆಲ್ಲೂ (ಅಂತರ್ಜಾಲ ಮತ್ತು ಮುದ್ರಿತ ಮಾಧ್ಯಮ) ಪ್ರಕಟವಾಗಿರಬಾರದು.
* ಒಬ್ಬರು ಒಂದಕ್ಕಿಂತ ಹೆಚ್ಚು ಕಥೆ ಕಳುಹಿಸುವಂತಿಲ್ಲ.
* ಅಮೆರಿಕದ ಎಲ್ಲಾ ಕನ್ನಡಿಗರಿಗೂ ಭಾಗವಹಿಸುವ ಅವಕಾಶವಿದೆ.
* ಕಥೆಗಳು ಬರಹ, ನುಡಿ ಅಥವಾ ಯುನಿಕೋಡ್ ತಂತ್ರಾಂಶದಲ್ಲಿರಬೇಕು. ಕೈಬರಹದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
* ಆಯ್ದ ಕಥೆಗಳಿಗೆ ಬಹುಮಾನವಿರುತ್ತದೆ. ತೀರ್ಪುಗಾರರ ನಿರ್ಧಾರವೇ ಅಂತಿಮ.
* ಆಯ್ದ ಕಥೆಗಳನ್ನು ಸ್ವರ್ಣಸೇತು - 2015ರಲ್ಲಿ ಪ್ರಕಟಿಸಲಾಗುವುದು. ಪರಿಷ್ಕರಿಸಿ ಪ್ರಕಟಿಸುವ ಹಕ್ಕು ಸ್ವರ್ಣಸೇತು-2015ರ ಸಂಪಾದಕ ಸಮಿತಿಗೆ ಸೇರಿದ್ದು.
* ಕಥೆಯ ಜೊತೆಗೆ ಲೇಖಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಮಿಂಚಂಚೆ ವಿಳಾಸ (email ID)ಕಳುಹಿಸಬೇಕು.
* ನಿಮ್ಮ ಕಥೆಗಳು ನಮಗೆ ತಲುಪಲು ಅಂತಿಮ ದಿನಾಂಕ ಆಗಸ್ಟ್ 31, 2015,
* ನಿಮ್ಮ ಕಥೆಗಳನ್ನು ಕಳುಹಿಸಬೇಕಾದ ವಿಳಾಸ - [email protected]

ಮಕ್ಕಳಿಗೂ ಕಥಾಸ್ಪರ್ಧೆ

ಇದರ ಜೊತೆ ಅಮೆರಿಕದಲ್ಲಿ ಕನ್ನಡ ಕಲಿಯುತ್ತಿರುವ ಮಕ್ಕಳಿಗಾಗಿಯೂ ಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ. ಮಕ್ಕಳು ತಮ್ಮ ಅಪ್ಪಅಮ್ಮ, ಅಜ್ಜಅಜ್ಜಿಯಿಂದ ಕೇಳಿ ತಿಳಿದುಕೊಂಡ ಕಥೆಯನ್ನು ಸೃಜನಶೀಲವಾಗಿ ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಬರೆಯಬಹುದಾಗಿದೆ. ಇದಕ್ಕೆ ವಯೋಮಿತಿ 16 ವರ್ಷಗಳು ಮತ್ತು ಕ್ಯಾಲಿಫೋರ್ನಿಯಾ ಮಕ್ಕಳಿಗೆ ಮಾತ್ರ ಅವಕಾಶವಿದೆ. ಗಮನಿಸಿ, ಕಥೆ ಕಳಿಸಲು ಕೊನೆಯ ದಿನಾಂಕ ಆಗಸ್ಟ್ 31, 2015. ತ್ವರೆ ಮಾಡಿರಿ ಮಕ್ಕಳೆ.

ಇತರ ನಿಯಮಗಳಿಗಾಗಿ ಹೆಚ್ಚಿನ ವಿವರಗಳಿಗಾಗಿ ಕೆಕೆಎನ್ ಸಿ ವೆಬ್ ಸೈಟ್ ನೋಡಿರಿ.

English summary
Swarna Setu 2015 committee of Kannada Koota Northern California, is conducting short story writing competition for American Kannada writers. Golden opportunity to showcase talent in creativity, art of story telling and to reach Kannadiga's in USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X