ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಲ್ಮೆಯ ಕವಿಗಳಿಗೆ ಸಾಹಿತ್ಯ ರಂಗದ ಆತ್ಮೀಯ ಆಹ್ವಾನ

By Prasad
|
Google Oneindia Kannada News

ಕನ್ನಡ ಸಾಹಿತ್ಯಕ್ಕೆಂದೇ ಮೀಸಲಾದ ಅಮೆರಿಕಾದ ಏಕೈಕ ರಾಷ್ಟ್ರೀಯ ಸಂಸ್ಥೆ 'ಕನ್ನಡ ಸಾಹಿತ್ಯ ರಂಗ'ವು ಬರುವ ಮೇ 30 ಮತ್ತು 31ರಂದು ತನ್ನ ಏಳನೆಯ ಸಾಹಿತ್ಯೋತ್ಸವವನ್ನು ಸೈಂಟ್ ಲೂಯಿಸ್ ನಲ್ಲಿ ಮಿಸ್ಸೌರಿ ಕನ್ನಡಿಗರ ಆಶ್ರಯದಲ್ಲಿ ಆಚರಿಸುತ್ತಿದೆ.

ಸ್ಥಳೀಯ ಕನ್ನಡ ಸಂಸ್ಥೆಯಾದ 'ಸಂಗಮ' ಈ ಸಂಘಟನೆಯಲ್ಲಿ ಸಹ ಪ್ರವರ್ತಕ ಪಾತ್ರವನ್ನು ವಹಿಸುತ್ತಿದೆ. ಹಾಗೂ ಮಧ್ಯ ಪಶ್ಚಿಮ ವಲಯದ ಇತರ ಕನ್ನಡ ಸಂಘಗಳು ತುಂಬು ಹೃದಯದಿಂದ ತಮ್ಮ ಸಹಕಾರ ಹಸ್ತವನ್ನು ಚಾಚುತ್ತಿವೆ. ಚೆಸ್ಟರ್ ಫೀಲ್ಡ್, ಮಿಸ್ಸೌರಿಯಲ್ಲಿರುವ ಮಾರ್ಕೆ ಶಾಲೆಯ ಸಭಾಂಗಣದಲ್ಲಿ ಈ ಸಮಾರಂಭದ ಅಂಗವಾಗಿ ನಡೆಯುವ ಸಾಹಿತ್ಯ ಗೋಷ್ಠಿಯಲ್ಲಿ ನಿಮ್ಮ ಕೃತಿಗಳನ್ನು ಓದಲು ಇಲ್ಲಿದೆ ಪ್ರೀತಿಯ ಕರೆಯೋಲೆ. ಅನುವಾದಿತ ಕವನಗಳಿಗೆ ಆದ್ಯತೆ ನೀಡಲಾಗುತ್ತದೆ.

Kannada Sahitya Ranga : Invite to poets

'ಸಾಹಿತ್ಯ ಗೋಷ್ಠಿ'ಯಲ್ಲಿ ಭಾಗವಹಿಸಲು ಇಚ್ಛಿಸುವವರು ಈ ಕೆಳಗಿನ ಅಂಶಗಳನ್ನು ಗಮನಿಸಬೇಕಾಗಿ ವಿನಂತಿ:

* ಪ್ರತಿಯೊಬ್ಬರಿಗೂ ಅನುವಾದಿತ ಕವನಗಳಿಗೆ ಎಂಟು ನಿಮಿಷ ಕಾಲಾವಕಾಶ (ಮೂಲ ಮತ್ತು ಅನುವಾದಿತ ಕವನ) ನೀಡಲಾಗುತ್ತದೆ.

* ಕವನ ವಾಚನಕ್ಕೆ ಐದು ನಿಮಿಷ ಮತ್ತು ಗದ್ಯ ವಾಚನಕ್ಕೆ ಏಳು ನಿಮಿಷ ಕಾಲಾವಕಾಶ ನೀಡಲಾಗುತ್ತದೆ.

* ನಿಮ್ಮ ರಚನೆಯನ್ನು ನೀವೇ ಓದಬೇಕು.

* ನೀವು ಓದಬೇಕೆಂದಿರುವ ಕೃತಿಯನ್ನು ಮುಂಚಿತವಾಗಿ 'ಬರಹ' ಅಥವಾ ಕನ್ನಡ ಯುನಿಕೋಡ್ ನಲ್ಲಿ ಟೈಪ್ ಮಾಡಿ ಕಳಿಸಿಕೊಡಿ.

Kannada Sahitya Ranga : Invite to poets

* ನಿಮ್ಮ ರಚನೆಯನ್ನು ಕಳಿಸಲು ಕೊನೆಯ ದಿನಾಂಕ ಮೇ 3.

* ಸಾಹಿತ್ಯ ಗೋಷ್ಠಿಯಲ್ಲಿ ಪ್ರಸ್ತುತಿಯ ಆಯ್ಕೆಯ ಬಗ್ಗೆ ನಮ್ಮ ನಿರ್ಧಾರವೇ ಅಂತಿಮ.

* ನಿಮ್ಮ ರಚನೆಯನ್ನು ಈ ಕೆಳಕಂಡ ವಿಳಾಸಕ್ಕೆ ಕಳಿಸಿಕೊಡಿ.

[email protected]

English summary
Kannada Sahitya Ranga, only organization in America dedicated for literature, has invited poets to participate in 7th Vasantha Sahityotsava and to recite their own or translated Kannada poem. Vasantha Sahityotsava will be held on May 30 and 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X