ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ಹುದ್ದೆಗಳಿಗೆ ಕೆಕೆಎಸ್‌ಸಿಯಲ್ಲಿ ಹಣಾಹಣಿ

By Prasad
|
Google Oneindia Kannada News

Election fever in KKNC, USA
ನಲವತ್ತು ವಸಂತಗಳನ್ನು ಕಂಡಿರುವ, ಅಮೆರಿಕಾದ ಅತ್ಯಂತ ಹಳೆಯ ಕನ್ನಡ ಕೂಟಗಳಲ್ಲಿ ಒಂದಾಗಿರುವ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ (ಸ್ಥಾಪನೆ 1973) ಈಗ ಚುನಾವಣೆಯ ಕಾವು. ಮೂರು ಪ್ರಮುಖ ಹುದ್ದೆಗಳಿಗಾಗಿ ಹಣಾಹಣಿ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಆಡಳಿತ ಮಂಡಳಿ ಅಕ್ಟೋಬರ್ 31 ಡೆಡ್ ಲೈನ್ ನೀಡಿದೆ.

ಕೆಕೆಎನ್ ಸಿ ಅಧ್ಯಕ್ಷ 2014, ಆಡಳಿತ ಮಂಡಳಿ (ಬೋರ್ಡ್ ಆಫ್ ಟ್ರಸ್ಟಿ) ಉಪಾಧ್ಯಕ್ಷ 2014-15 ಮತ್ತು ಆಡಳಿತ ಮಂಡಳಿ ಸದಸ್ಯ 2014-15 ಹುದ್ದೆಗಳಿಗೆ ಚುನಾವಣೆ ನಡೆಯಲಿದೆ. ಅತ್ಯಂತ ಪ್ರತಿಷ್ಠೆಯ ಕಣವಾಗಿರುವ ಈ ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಕೆಲ ನಿಬಂಧನೆಗಳನ್ನು ಕೂಡ ಹಾಕಲಾಗಿದೆ.

ನಿಬಂಧನೆಗಳು ಕೆಳಗಿನಂತಿವೆ

ಹುದ್ದೆ : ಕೆಕೆಎನ್ ಸಿ ಅಧ್ಯಕ್ಷ 2014, ಕಾರ್ಯನಿರ್ವಾಹಕ ಸಮಿತಿ ಮುಖ್ಯಸ್ಥ

* ಕನಿಷ್ಠ 2 ವರ್ಷಗಳ ಕಾಲ ಕೆಕೆಎನ್ ಸಿ ಸದಸ್ಯನಾಗಿರಬೇಕು ಮತ್ತು ಕ್ರಿಯಾಶೀಲನಾಗಿರಬೇಕು.
* ಕೆಕೆಎನ್ ಸಿಯ ಇಬ್ಬರು ಸದಸ್ಯರು ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಬೇಕು.

ಹುದ್ದೆ : ಆಡಳಿತ ಮಂಡಳಿ ಉಪಾಧ್ಯಕ್ಷ (2014-15)

* ಕೆಕೆಎನ್ ಸಿ ಮಾಜಿ ಅಧ್ಯಕ್ಷನಾಗಿರಬೇಕು ಅಥವಾ ಎಕ್ಸಿಕ್ಯೂಟಿವ್ ಸದಸ್ಯನಾಗಿರಬೇಕು ಅಥವಾ ಆಜೀವ ಸದಸ್ಯನಾಗಿರಬೇಕು.
* ಕನಿಷ್ಠ 5 ವರ್ಷಗಳ ಕಾಲ ಕೆಕೆಎನ್ ಸಿ ಸದಸ್ಯನಾಗಿರಬೇಕು ಮತ್ತು ಕ್ರಿಯಾಶೀಲನಾಗಿರಬೇಕು.
* ಕೆಕೆಎನ್ ಸಿಯ ಇಬ್ಬರು ಸದಸ್ಯರು ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಬೇಕು.

ಹುದ್ದೆ : ಆಡಳಿತ ಮಂಡಳಿ ಸದಸ್ಯ (2014-15)

* ಕನಿಷ್ಠ 5 ವರ್ಷಗಳ ಕಾಲ ಕೆಕೆಎನ್ ಸಿ ಸದಸ್ಯನಾಗಿರಬೇಕು.
* ಕೆಕೆಎನ್ ಸಿಯ ಇಬ್ಬರು ಸದಸ್ಯರು ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಬೇಕು.

ಚುನಾವಣಾ ಕಮಿಷನರ್ ಆಗಿ ನೇಮಕವಾಗಿರುವ ಆಡಳಿತ ಮಂಡಳಿಯ ಉಪಾಧ್ಯಕ್ಷ ನಂದ ಕಿಶೋರ್ ಅವರಿಗೆ ನಾಮಪತ್ರವನ್ನು ಅಕ್ಟೋಬರ್ 31ರ ರಾತ್ರಿ 11:59ರೊಳಗೆ ಸಲ್ಲಿಸಬೇಕೆಂದು ಕೋರಲಾಗಿದೆ. ಹಾಗೆಯೆ, ಸ್ಪರ್ಧಿಸಲಿಚ್ಛಿಸುವವರು ಕೆಕೆಎನ್ ಸಿಯ ಸಂವಿಧಾನ ಮತ್ತು ಬೈಲಾಗಳ ಬಗ್ಗೆ ತಿಳಿದುಕೊಂಡಿರಬೇಕು ಎಂದೂ ತಿಳಿಸಲಾಗಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :

ನಂದ ಕಿಶೋರ್
ಫೋನ್ : 408 656 1289
ಈಮೇಲ್ : [email protected]

English summary
KKNC Board of Trustees – 2013 (BoT) has called for nominations for the three positions to be filled in calendar year 2014. Election will be held for KKNC President 2014, Vice Chair, BoT and Member, BoT. Deadline for filing nominations is 31st October, 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X