ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಬಾಸ್ಟನ್ನಿನಲ್ಲಿ ಕನ್ನಡಿಗರೊಡನೆ ಉಪ್ಪಿ ಹರಟೆ

By ವೈಶಾಲಿ ಹೆಗಡೆ, ಬಾಸ್ಟನ್
|
Google Oneindia Kannada News

ಬಾಸ್ಟನ್ನಿನ ಮಂದಾರ-ನ್ಯೂ ಇಂಗ್ಲಂಡ್ ಕನ್ನಡ ಕೂಟದೊಡನೆ ನಾವಿಕ ಮತ್ತು VSNE ಸಹಯೋಗದಲ್ಲಿ ನಡೆದ "ಉಪ್ಪಿ ನೈಟ್" ರಸಮಂಜರಿ ಕಾರ್ಯಕ್ರಮ ವಿಶೇಷವಾದ ಸಂಭ್ರಮಾಚರಣೆಯಾಗಿತ್ತು.

ಇದುವರೆಗೂ ಕನ್ನಡ ಸಿನಿಮಾದ "ಸೂಪರ್ಸ್ಟಾರ್" ಹೀರೋವೊಬ್ಬ ಜನಸಾಮಾನ್ಯರೊಡನೆ ಹೀಗೆ ಬೆರೆತು ಕುಣಿದದ್ದು ಬಹು ವಿರಳ ಎಂದೇ ಹೇಳಬೇಕು. ಅಮೆರಿಕೆಗೆ ಹಲವು ಬಗೆಯ ಸಮ್ಮೇಳನಗಳಿಗೆ ಆಗಮಿಸುವ ತಾರೆಯರು ತಾವು ಬಹುತೇಕ ಆಕಾಶದಿಂದ ಉದುರಿದ ನಕ್ಷತ್ರವೆನ್ನುವಂತೆ ವರ್ತಿಸಿದ್ದನ್ನು ನೋಡಿದ್ದ ನಮಗೆಲ್ಲ ಉಪೇಂದ್ರರವರ ಸರಳ ಸಜ್ಜನಿಕೆ ಬಹುವೇ ಆಹ್ಲಾದಕರವಾಗಿತ್ತು.

ನೆರೆದೆವರೆಲ್ಲರೊಡನೆ ನಗುಮೊಗದಲ್ಲೇ ಛಾಯಾಚಿತ್ರ ತೆಗೆಸಿಕೊಂಡು, ಬಾಸ್ಟನ್ ಕನ್ನಡಿಗರ ನೆನಪಿನ ಕಾಣಿಕೆ, ಸನ್ಮಾನವನ್ನು ಸ್ವೀಕರಿಸಿದ ಉಪ್ಪಿ ಚಿತ್ರನಟನೊಬ್ಬ ಎಲ್ಲರೊಳಗೊಂದಾಗಬಲ್ಲ ಎಂದು ತೋರಿಸ್ಕೊಟ್ಟರು. ಬಾಸ್ಟನ್ ಕನ್ನಡಿಗರಿಗೆ ಆ ದಿನ ಬಹುಕಾಲ ನೆನೆಪಿನಲ್ಲುಳಿಯುವುದಂತೂ ಖಂಡಿತ. "ಉಪ್ಪಿಟ್ಟು" ಅಜೀರ್ಣವಾದ ಪ್ರೇಕ್ಷಕರೂ ಕೂಡ "ಉಪ್ಪಿ"ಗಿಂತ ರುಚಿ ಬೇರೆಯಿಲ್ಲ ಎಂದು ತಲೆದೂಗಿದ್ದರು.

An interview with Real Star Upendra in America

ಅಂದು "ಎಕ್ಸ್‌ಕ್ಯೂಸ್ ಮಿ ಪ್ಲೀಸ್" ಹಾಡಿನೊಂದಿಗೆ ಸ್ಥಳೀಯ ಯುವಕರೊಂದಿಗೆ ಭರ್ಜರಿ ಎಂಟ್ರಿ ಕೊಟ್ಟ ಉಪ್ಪಿ ಸುಶ್ರಾವ್ಯ ಗಾಯಕಿ ಸೌಮ್ಯ ಸಂದೀಪ್ ರವರೊಡನೆ "ನಾನು ಜೀತೇಂದ್ರ ಮತ್ತು ಚಿತ್ರಾನ್ನ ಚಿತ್ರಾನ್ನ" ಹಾಡಿ ನರ್ತಿಸಿದರು. ಎಲ್ಲ ಹಾಡು ಕುಣಿತದ ನಡುವೆ ಉಪ್ಪಿಯನ್ನು ಕೊನೆಗೂ ತಮ್ಮ ವಿಶಿಷ್ಟ ಶೈಲಿಯ ಮಾತಿನ ಸರಣಿ ಆರಂಭಿಸುವಂತೆ ಚಾಲನೆ ನೀಡುವ ಸರದಿ ನನ್ನದಾಗಿತ್ತು.

ಕಾಲೇಜಿನ ದಿನಗಳ ಓಂ, A ಸಿನಿಮಾಗಳ ಉಪ್ಪಿ ಕ್ರೇಜ್ ದಿನಗಳೆಲ್ಲ ನೆನಪಾಗುತ್ತಿದ್ದವು. A ಸಿನಿಮಾಕೆಂದು ಒಂದಿಷ್ಟು ಗೆಳತಿಯರನ್ನು ಎಳೆದುಕೊಂಡು ಹೋಗಿ ನನಗಂತೂ ಸಿಕ್ಕಾಪಟ್ಟೆ ಇಷ್ಟವಾಗಿ, ಆದರೆ ಅವರಿಂದ ಬಾಯಿಗೆ ಬಂದಂತೆ ಬೈಸಿಕೊಂಡಿದ್ದೆಲ್ಲ ಕಣ್ಮುಂದೆ ಬಂತು.

ಕಳೆದ ಸಾರಿ ಭಾರತಕ್ಕೆ ಹೋದಾಗ, ಹಿಂತಿರುಗಿ ವಿಮಾನ ಹತ್ತುವ ಕೆಲವೇ ಗಂಟೆಗಳ ಮುಂಚೆ ಸೂಪರ್ ಸಿನಿಮಾ ನೋಡಿ ಬಂದಿದ್ದು ನೆನಪಾಗಿ ಮನದಲ್ಲೇ ನಗು ಬಂತು. ಅವರ ಸಿನಿಮಾಗಳ ಚಟಪಟ ಮಾತಿನ ಮತಾಪು ಇಲ್ಲಿಯೂ ಸಿಡಿಯುವುದೇ ಎಂಬ ನನ್ನ ಸಂದೇಹದಲ್ಲೇ ಪ್ರಶ್ನೆ ಆರಂಭಿಸಿದೆ. ಅಲ್ಲಿಂದ ಆರಂಭವಾದ ಅವರ ನಿರರ್ಗಳ ವಾಕ್ಝರಿ ಸುಮಾರು ಒಂದೂವರೆ ಎರಡು ಗಂಟೆಗಳ ಕಾಲ ಹರಿದು ಸಮಯ ಸರಿದದ್ದೇ ತಿಳಿಯಲಿಲ್ಲ. ಉಪ್ಪಿ 2 ಚಿತ್ರದ ಪ್ರಚಾರಕ್ಕೆಂದು ಅಮೆರಿಕಕ್ಕೆ ಬಂದಿರುವ ಉಪೇಂದ್ರ ಅವರೊಂದಿಗಿನ ಸಂವಾದದ ಝಲಕು ಮುಂದಿದೆ.

English summary
An interview with Kannada actor 'Real Star' Upendra in America. Uppi is in America to promote his latest movie Uppi 2. Upendra interacted with Kannadigas, shared his thoughts at a function organized by Mandara and New England Kannada Koota in Boston, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X