ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಮಾಂಚನಕಾರಿ ಗಳಿಗೆಗಳ ಎರಡನೇ ಪುಟ

By ಉಷಾ ಪ್ರಸನ್ನ ಕುಮಾರ್; ನ್ಯೂಜೆರ್ಸಿ
|
Google Oneindia Kannada News

ಸೆಪ್ಟೆಂಬರ್ 26ಕ್ಕೆ ಮೋದಿ ಅಮೆರಿಕ ದೇಶಕ್ಕೆ ಬಂದರು. 27ರಂದು ಸಂಯುಕ್ತ ರಾಷ್ಟ್ರಗಳ ಸಭೆಯಲ್ಲಿ ಅಮೋಘ ಭಾಷಣ ಮಾಡಿ ವಿಶ್ವನಾಯಕರನ್ನೆಲ್ಲ ದಂಗುಬಡಿಸಿದರು. ಅವರ ಅಮೆರಿಕ ಪ್ರವಾಸದ ಅಪ್‌ಡೇಟ್‌ಗಳನ್ನೆಲ್ಲ ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ನೋಡಿ, ಕೇಳಿ ನಮ್ಮ ಕುತೂಹಲ ತಾರಕಕ್ಕೇರಿತ್ತು. ಕೊನೆಗೂ 28ರ ರವಿವಾರ ಬಂದೇಬಂತು. ಬೆಳಿಗ್ಗೆ ಒಂಬತ್ತಕ್ಕೆಲ್ಲ ಮ್ಯಾಡಿಸನ್ ಸ್ಕ್ವೇರ್‌ನಲ್ಲಿರುವಂತೆ ನಮಗೆ ಮೊದಲೇ ಸೂಚನೆ ಕೊಟ್ಟಿದ್ದರು.

ನಾವಂತೂ ಹಿಂದಿನರಾತ್ರಿ ಹೋಗಿ ಅಲ್ಲೇ ಠಿಕಾಣಿ ಹೂಡುವುದಾದರೂ ಸಿದ್ಧರಿದ್ದೆವು, ಅಷ್ಟೂ ಕಾತರ, ಸಂಭ್ರಮ. ಪಾಸ್‌ಗಳನ್ನು ಪಡೆದವರಷ್ಟೇ ಅಲ್ಲದೆ ನಮ್ಮ ಕೂಟದ ಸದಸ್ಯರು ಮತ್ತು ಮಕ್ಕಳೆಲ್ಲ ಸೇರಿ ಕಾಶ್ಮೀರದಲ್ಲಿ ನೆರೆಪೀಡಿತರಿಗೆ ಧನಸಹಾಯಕ್ಕಾಗಿ ದುಡ್ಡು ಸಂಗ್ರಹಿಸಿ ಅದನ್ನೂ ಪ್ರಧಾನಿಯವರಿಗೆ ಒಪ್ಪಿಸಲು ತೆಗೆದುಕೊಂಡು ಹೋಗುವವರಿದ್ದೆವು. ನಮ್ಮ ಮನೆಯಿಂದ ಮ್ಯಾಡಿಸನ್ ಸ್ಕ್ವೇರ್ ಸುಮಾರು 40 ಮೈಲು ದೂರ. ಟ್ರಾಫಿಕ್ ದಟ್ಟಣೆ ಇರುತ್ತದೆಂದು ಗೊತ್ತಿದ್ದರಿಂದ ಕಾರಲ್ಲಿ ಹೋಗುವಂತಿಲ್ಲ.

American Indian at Mad Madison Square Garden - NY (part 2)

ನಾವಿಬ್ಬರೂ ರೈಲಿನಲ್ಲಿ ಹೋಗಿ ಸಭಾಂಗಣ ತಲುಪಿ, ಭದ್ರತಾ ತಪಾಸಣೆಯನ್ನೆಲ್ಲ ದಾಟಿ ಒಳಹೋಗುವಷ್ಟಕ್ಕೆ ಹತ್ತು ಗಂಟೆ ಆಗಿತ್ತು. ಸಭಾಂಗಣ ಹೆಚ್ಚೂಕಡಿಮೆ ತುಂಬಿತ್ತು. ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಜನರು ಸೇರಿಯಾಗಿತ್ತು. ಪ್ರತಿಯೊಬ್ಬರ ಮುಖದಲ್ಲೂ ಸಂಭ್ರಮ ಎದ್ದುಕಾಣುತ್ತಿತ್ತು. ನಮ್ಮ ಕೂಟದ ಸದಸ್ಯರೂ ಒಬ್ಬೊಬ್ಬರಾಗಿ ಬರತೊಡಗಿದರು. ವೇದಿಕೆಗೆ ತುಂಬಾ ಹತ್ತಿರದಲ್ಲೇ, ಅಂದರೆ ಮೋದಿಯವರು ನಿಂತು ಭಾಷಣ ಮಾಡಲಿರುವ ಸ್ಟ್ಯಾಂಡ್‌ನಿಂದ ಹತ್ತಿಪ್ಪತ್ತು ಅಡಿಗಳ ಅಂತರದೊಳಗೆ ನಮಗೆಲ್ಲರಿಗೆ ಆಸನವ್ಯವಸ್ಥೆ ಸಿಕ್ಕಿತು.

ಹನ್ನೊಂದು ಗಂಟೆ ಸುಮಾರಿಗೆ ಸಮೂಹ ನೃತ್ಯಗಳು ಮತ್ತಿತರ ಸಾಂಸ್ಕೃತಿಕ ಪ್ರದರ್ಶನಗಳು ಶುರುವಾದವು. ಅವು ಚೆನ್ನಾಗಿಯೇನೋ ಇದ್ದವು, ಆದರೆ ನಮಗೋ ಮೋದಿಯವರದೇ ಧ್ಯಾನ, ಅವರ ಆಗಮನದ್ದೇ ನಿರೀಕ್ಷೆ. ಕೊನೆಗೂ ಹನ್ನೆರಡರ ಸುಮಾರಿಗೆ ಮೋದಿ ಬಂದರು! ಅದೇ ಟ್ರೇಡ್‌ಮಾರ್ಕ್ ನಸುಕೇಸರಿ ಬಣ್ಣದ ಕುರ್ತಾ. ಮುಖದಲ್ಲಿ ಅದೇ ಚಿರಪರಿಚಿತ ಗಾಂಭೀರ್ಯದ ನಗು. ಕಣ್ಣುಗಳಲ್ಲಿ ಹೊಳೆಯುವ ಮಿಂಚು. ಇಷ್ಟು ಹತ್ತಿರದಿಂದ ನೋಡುತ್ತಿದ್ದೇವಲ್ಲ ಈ ಪುಣ್ಯಪುರುಷನನ್ನು ಎಂದು ಒಮ್ಮೆ ನಮ್ಮ ಮೈ ಚಿವುಟಿ ನೋಡುವಂಥ ಸನ್ನಿವೇಶ. ಅಷ್ಟು ಹೊತ್ತಿಗೆ ಅಲ್ಲಿ ನೆರೆದಿದ್ದ ಅಮೆರಿಕದ ಸಂಸದರು ಮತ್ತು ಜನಪ್ರತಿನಿಧಿಗಳನ್ನು ವೇದಿಕೆಯ ಮೇಲೆ ಆಹ್ವಾನಿಸಿ ಪರಿಚಯಿಸಲಾಯ್ತ್ತು. ಅಮೆರಿಕದ ರಾಷ್ಟ್ರಗೀತೆಯನ್ನೂ ಹಾಡಲಾಯಿತು. ಮೋದಿಯವರ ಆಗಮನವಾದ ಮೇಲೆ ಮತ್ತೊಮ್ಮೆ ಅಮೆರಿಕದ ರಾಷ್ಟ್ರಗೀತೆ ಮೊಳಗಿತು.

English summary
Kiss like you only have one moment : Usha Prasanna Kumar, President Brindavana Kannada Koota New Jersey records her one of the most memorable experiences - visit to Madison Square Garden, New york to attend Public reception to visiting India PM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X