ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಧರ್ವಲೋಕಕ್ಕೆ ಕರೆದೊಯ್ದ ಸಂಗೀತ ಸಂಜೆ

By Prasad
|
Google Oneindia Kannada News

Harini Vasudevan and Suresh Ramachandran
ಸಂಗೀತ ಸಂಜೆಯ ಅಂಗವಾಗಿ ಸುರೇಶ್ ರಾಮಚಂದ್ರನ್ ಮತ್ತು ಹರಿಣಿ ವಾಸುದೇವನ್ ಅವರು ಕ್ಯಾರಿಒಕಿ ಹಿಮ್ಮೇಳದ ಸಹಾಯದಿಂದ ಜನಪ್ರಿಯ ಕನ್ನಡ ಸಿನಿಮಾ ಹಾಡುಗಳನ್ನು ಹಾಡುವುದರ ಮೂಲಕ ಜನಮನ ಸೂರೆಗೊಂಡರು. ಸುರೇಶ್ ಮತ್ತು ಹರಿಣಿ ಹಾಡಿದ ಹಾಡುಗಳಲ್ಲಿ ಹಳೆಯಕಾಲದ ಹಾಡುಗಳಿಂದ ಹಿಡಿದು ಇಂದಿನ ಹೊಸ ಹಾಡುಗಳು ಸೇರಿಕೊಂಡಿದ್ದವು.

ಹರಿಣಿಯವರು ಕನ್ನಡದವರಲ್ಲದಿದ್ದರೂ ಕಡಿಮೆ ಸಮಯದಲ್ಲಿ ಕನ್ನಡ ಹಾಡುಗಳನ್ನು ಅಭ್ಯಾಸ ಮಾಡಿ ಶ್ರೋತೃಗಳನ್ನು ಗೆಲ್ಲುವಲ್ಲಿ ಸಫಲರಾದರು. ಎಸ್. ಜಾನಕಿಯವರ ಅನೇಕ ಹಾಡುಗಳನ್ನು ಹಾಡಿದ ಅವರು, ತಮ್ಮ ಮೊದಲ ಹಾಡು - ಪೂಜಿಸಲೆಂದೇ ಹೂಗಳ ತಂದೆ, ಅದೊಂದರಲ್ಲೇ ತಮ್ಮ ಗಾನ ನೈಪುಣ್ಯತೆಯನ್ನು ಪ್ರದರ್ಶಿಸಿದರು. ಸುರೇಶ್ ಅವರು ಹಾಡಿದ ಎಲ್ಲೋ ಜೋಗಪ್ಪ, ಎಲ್ಲಕ್ಕಿಂತ ಹೆಚ್ಚು ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡಿದ್ದೂ ಅಲ್ಲದೇ ವೇದಿಕೆಯ ಮೇಲೆ ಮಕ್ಕಳೂ ಹಾಗೂ ದೊಡ್ಡವರಲೆಲ್ಲ ಕುಣಿಯುವಂತೆ ಮಾಡಿತು.

ಯೂಥ್ ಕಮಿಟಿ : ಈ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬೃಂದಾವನದ ಮೈತ್ರಿ ತಂಡದವರು ಹೊಸದಾಗಿ ಯೂತ್ ಕಮಿಟಿಯೊಂದನ್ನು ಆಯೋಜಿಸಿರುವುದು ವಿಶೇಷ. ಯೂತ್ ಕಮಿಟಿಯಲ್ಲಿ ಒಟ್ಟು ಹತ್ತು ಜನ ಕಾರ್ಯಕರ್ತರನ್ನು ಅವರವರ ಆಯ್ಕೆಗೆ ತಕ್ಕಂತೆ ಸಮಾರಂಭದ ಪ್ಲಾನಿಂಗ್‌ನಿಂದ ಹಿಡಿದು, ಪೂರ್ಣ ಸಮಾರಂಭವನ್ನು ಆಯೋಜಿಸಿ ನಡೆಸಿಕೊಡುವಲ್ಲಿ ಸಹಕಾರಿಯಾಗುವಂತೆ ಮಾರ್ಗದರ್ಶನ ನೀಡಲಾಗಿತ್ತು. ಯೂತ್ ಕಮಿಟಿಯ ಸದಸ್ಯರು ಬಹಳ ಉತ್ಸಾಹದಿಂದ ತಮ್ಮ ಪಾಲಿನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸುವಲ್ಲಿ ಕಾರಣಕರ್ತರಾಗಿದ್ದಾರೆ ಎಂದರೆ ತಪ್ಪಾಗಲಾರದು.

ಯೂತ್ ಕಮಿಟಿಯ ಸದಸ್ಯರುಗಳು: ಸಂಹಿತಾ ಮೂರ್ತಿ, ಸುಹಾಸ್ ಕುಮಾರ್, ಅಮೂಲ್ಯ ಕಟ್ಟಿಮನಿ, ಶಿವ ದರ್ಶನ್, ಅವಿನಾಶ್ ದರ್ಶನ್, ರುತ್ವಿಕ್ ಕುಮಾರ್, ಆಕಾಶ್ ಮುತ್ತು, ನೂಪುರ್ ಮೂರ್ತಿ, ಮತ್ತು ಅಭಯ್ ಆರಾಧ್ಯ.

English summary
Brindavana Kannada Koota in New Jersey, USA celebrated Childrens' day and Kannada Rajyotsava on December 10 in a grand fashion. Here is report of Kannada event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X