ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಕ್ಕ' ನಿರ್ದೇಶಕ ಚುನಾವಣೆ ಫಲಿತಾಂಶ

By Staff
|
Google Oneindia Kannada News

AKKA Director Elections 2009-results
ಬೆಂಗಳೂರು, ಡಿ. 22 : ಉತ್ತರ ಅಮೆರಿಕಾ ಕನ್ನಡ ಕೂಟಗಳ ಆಗರಕ್ಕೆ ಇತ್ತೀಚೆಗೆ ನಡೆದ ದ್ವೈವಾರ್ಷಿಕ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದೆ. ಡಿಸೆಂಬರ್ 2ರಿಂದ 19ರವರೆಗೆ ಇಮೇಲ್ ಅಥವಾ ಮತಪತ್ರದ ಮೂಲಕ ನಡೆದ ಚುನಾವಣೆಯಲ್ಲಿ ಅಕ್ಕ ನಿರ್ದೇಶಕ ಸ್ಥಾನಗಳಿಗೆ ಒಟ್ಟು 11 ಮಂದಿ ವಿಜೇತರಾಗಿದ್ದಾರೆ. ಈ ನಿರ್ದೇಶಕರ ಕಾರ್ಯಾವಧಿ 2009ರಿಂದ 2012.

ಚುನಾವಣೆಗಳನ್ನು ನಡೆಸಲು ಅಕ್ಕದ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಒಂದು ಸ್ವಾಯತ್ತ ಸಂಸ್ಥೆಯ ನೆರವು ಪಡೆಯಲಾಗಿತ್ತು. ಆ ಸಂಸ್ಥೆಯ ಹೆಸರು 'ಎಲೆಕ್ಷನ್ ಟ್ರಸ್ಟ್'. ಈ ಟ್ರಸ್ಟ್ ಮೂಲಕ ಚುನಾವಣೆಯ ಪ್ರತಿಯೊಂದು ಪ್ರಕ್ರಿಯೆಗಳು ಸುಗಮವಾಗಿ ಸಾಗಿತು. ಮುಕ್ತ, ನಿರ್ಭೀತ ಮತ್ತು ನಿಷ್ಕಳಂಕ ಚುನಾವಣೆಗೆ ದಾರಿಯಾಯಿತು ಎಂದು ಅಕ್ಕ ಅಧ್ಯಕ್ಷ ಸ್ಥಾನದಿಂದ ಇದೀಗ ನಿರ್ಗಮಿಸುತ್ತಿರುವ ರಮೇಶ್ ಗೌಡ ಭಾನುವಾರ ದಟ್ಸ್ ಕನ್ನಡ ಡಾಟ್ ಕಾಮ್ ಗೆ ತಿಳಿಸಿದರು.

ಅಮೆರಿಕಾದ ನಾನಾ ರಾಜ್ಯಗಳಿಂದ ಸ್ಪರ್ಧೆಗೆ ಒಟ್ಟು 20 ಮಂದಿ ಹುರಿಯಾಳುಗಳು ನುಗ್ಗಿದ್ದರು. ಕೆಲವು ಮಂದಿ ಹಾಲಿ ಸದಸ್ಯರ ಪುನರಾಯ್ಕೆ, ಕೆಲವು ಮಂದಿ ಹಾಲಿ ನಿರ್ದೇಶಕರ ಪರಾಭವ ಮತ್ತು ಚುನಾವಣಾ ಕಣಕ್ಕೆ ಧುಮುಕಿದ್ದ ಇಬ್ಬರೂ ಮಹಿಳೆಯರು ಸೋಲು ಅನುಭವಿಸಿರುವುದು ಈ ಫಲಿತಾಂಶದ ಮುಖ್ಯಾಂಶಗಳು.

ಗೆಲವು ಸಾಧಿಸಿದ ನಿರ್ದೇಶಕರ ಹೆಸರುಗಳು ಅಕಾರಾದಿಯಾಗಿ ಇಂತಿವೆ.

* ಬಸವರಾಜ್ ಶಿವಣ್ಣ (ಸಾಫ್ಟ್ ವೇರ್ ಉದ್ಯಮಿ)
* ದಯಾಶಂಕರ್ ಅಡಪ (ಸಾಫ್ಟ್ ವೇರ್ ಉದ್ಯಮಿ)
* ಮಾದೇಶ ಬಸವರಾಜು (ಸಾಫ್ಟ್ ವೇರ್ ಉದ್ಯಮಿ)
* ಮಂಜುನಾಥ ಭದ್ರಶೆಟ್ಟಿ (ಸಾಫ್ಟ್ ವೇರ್ ಉದ್ಯಮಿ)
* ಡಾ.ಮುರಳಿ ಕುದುರು (ಪಶು ಔಷಧ )
* ನಾಗಶಂಕರ್ ಚಂದ್ರಶೇಖರ್ (ಸಂಪರ್ಕ ಮತ್ತು ಡಿಜಿಟಲ್ ತಜ್ಞ)
* ರಮೇಶ್ ಮಂಜೇಗೌಡ (ಸಾಫ್ಟ್ ವೇರ್ ಉದ್ಯಮಿ)
* ಸಮಂತ್ ಲಕ್ಷ್ಮಣ್ (ಭದ್ರತೆ ಮತ್ತು ಪರಿಸರ ತಜ್ಞ)
* ಸತೀಶ ಗೆಜ್ಜನಹಳ್ಳಿ (ಸಾಫ್ಟ್ ವೇರ್ ಉದ್ಯಮಿ)
* ಶಿವಮೂರ್ತಿ ಕೀಲಾರ (ಸಾಫ್ಟ್ ವೇರ್ ಉದ್ಯಮಿ)
* ಸುಭಾಷ್ ಖೇರ್ (ನಿವೃತ್ತ ಇಂಜಿನಿಯರ್)

ಅಕ್ಕ ನಿರ್ದೇಶಕ ಮಂಡಳಿಯಲ್ಲಿ ಪ್ರಸ್ತುತ 52 ಮಂದಿ ನಿರ್ದೇಶಕರಿದ್ದಾರೆ. ಇವರುಗಳಲ್ಲಿ 20 ಮಂದಿ ಚುನಾಯಿತಗೊಂಡ ನಿರ್ದೇಶಕರಾದರೆ ಉಳಿದ 32 ಮಂದಿ ಅಮೆರಿಕಾದ ಕನ್ನಡ ಕೂಟಗಳನ್ನು ಪ್ರತಿನಿಧಿಸುವ ನಿರ್ದೇಶರಾಗಿರುತ್ತಾರೆ. ಚುನಾಯಿತ ನಿರ್ದೇಶಕರ ಸ್ಥಾನಗಳ ಪೈಕಿ ಅರ್ಧದಷ್ಟು ಸ್ಥಾನಗಳಿಗೆ ಎರಡು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ.

ಅಕ್ಕ ಅಧ್ಯಕ್ಷ, ಉಪಾಧ್ಯಕ್ಷ ಮುಂತಾದ ಪದಾಧಿಕಾರಿ ಸ್ಥಾನಗಳಿಗೆ 2009ರ ಜನವರಿಯಲ್ಲಿ ಚುನಾವಣೆ ನಡೆಯುತ್ತದೆ. ಈ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಮೇಲೆ ಹೇಳಿದ 52 ಮಂದಿ ನಿರ್ದೇಶಕರು ಮತದಾನ ಮಾಡುವರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X