ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್ ಫೋರ್ಸ್ ನಲ್ಲಿ ತರಬೇತಿ ಸೀಟು: ಯುವತಿಗೆ ವಂಚಿಸಿ ನಾಪತ್ತೆ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಉಡುಪಿ, ಅಕ್ಟೋಬರ್ 12: ಏರ್ ಹೋಸ್ಟೆಸ್ ತರಬೇತಿ ಮಾಡಿದ್ದ ಯುವತಿಗೆ ಏರ್‌ಫೋರ್ಸ್‌ನಲ್ಲಿ ತರಬೇತಿ ಸೀಟು ಕೊಡಿಸುವುದಾಗಿ 1.2 ಲಕ್ಷ ರು. ಪಡೆದು, ಕರೆದುಕೊಂಡು ಹೋಗಿ ಅಶ್ಲೀಲವಾಗಿ ವರ್ತಿಸಿ ವಂಚನೆ ಮಾಡಿದ ಪ್ರಕರಣವೊಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮಂದಾರ್ತಿ ಮೂಡುಬಾರಾಳಿ ದಿ.ರಮೇಶ್ ಭಂಡಾರಿ ಅವರ ಪತ್ನಿ ಎಚ್.ಪಿ.ರೇವತಿ ದೂರು ನೀಡಿದವರು. ಅವರ ಮಗಳು ನಿಧಿ (20) ಮಂಗಳೂರು ಹಂಪನಕಟ್ಟೆಯಲ್ಲಿ ಏರ್ ಹೋಸ್ಟೆಸ್ ತರಬೇತಿ ಪಡೆದಿದ್ದರು. ಆ ಸಮಯದಲ್ಲಿ ರಜತ್ ಎಂಬಾತ ಮೊಬೈಲ್ ಮೂಲಕ ಪರಿಚಯ ಆಗಿದ್ದ.[ಆರೋಪಿಯಿಂದ ಹಣ ಪೀಕಿ, ಬಿಟ್ಟು ಕಳಿಸಿದ ಹೆಡ್ ಕಾನ್ ಸ್ಟೇಬಲ್!]

Young girl cheated: Case registered in Udupi

2015ರ ಆಗಸ್ಟ್‌ನಲ್ಲಿ ಉಡುಪಿ ಸರ್ವೀಸ್ ಬಸ್ ನಿಲ್ದಾಣದಲ್ಲಿ ತಾಯಿಗೆ ಆತನನ್ನು ನಿಧಿ ಪರಿಚಯಿಸಿದ್ದಳು. ನಿಧಿಗೆ ಏರ್‌ಫೋರ್ಸ್ ನಲ್ಲಿ ತರಬೇತಿ ಸೀಟು ಕೊಡಿಸುವುದಾಗಿ ಭರವಸೆ ನೀಡಿ, 1.2 ಲಕ್ಷ ರು. ಹಣ ಪಡೆದಿದ್ದ. ಬಳಿಕ ನಿಧಿಯನ್ನು ಬೆಂಗಳೂರಿನ ಜೆ. ಪಿ. ನಗರದಲ್ಲಿರುವ ಅವನ ಮನೆಗೆ ಕರೆದುಕೊಂಡು ಹೋಗಿ, ಅಶ್ಲೀಲವಾಗಿ ವರ್ತಿಸಿದ್ದ. ಮತ್ತೆ ಬೆಂಗಳೂರಿಗೆ ಬರಲು ಒತ್ತಾಯಿಸಿದ್ದ.

ಅನಂತರ ಆತ ತಲೆಮರೆಸಿಕೊಂಡಿದ್ದ. ರಜತ್ ಎಂಬಾತ ಉಡುಪಿಯ ಕಡೆಕಾರಿನವನು ಎಂದು ಗೊತ್ತಾಗಿರುವುದರಿಂದ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈಗ ದೂರು ನೀಡಿದ್ದೇವೆ ಎಂದು ರೇವತಿ ಅವರು ತಿಳಿಸಿದ್ದಾರೆ.[ದೂರವಾದ ಪ್ರಿಯಕರನ ಕೊಲ್ಲಲು ಆಕೆ ಸಿದ್ಧಪಡಿಸಿಕೊಂಡಿದ್ದು ನಾಡ ಬಾಂಬ್]

ಅಕ್ರಮ ಮರಳು ಅಡ್ಡೆ ಮೇಲೆ ದಾಳಿ: 12 ಬಂಧನ
ಮಂಗಳೂರು: ಕರಾವಳಿ ನಿಯಂತ್ರಣ ವಲಯದ (ಸಿಆರ್ ಜೆಡ್) ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದ ಎರಡು ಸ್ಥಳಗಳ ಮೇಲೆ ಮಂಗಳವಾರ ದಾಳಿ ಮಾಡಿದ ನಗರ ಪೊಲೀಸರು 12 ಮಂದಿಯನ್ನು ಬಂಧಿಸಿ ನಾಲ್ಕು ಲಾರಿ, ಒಂದು ಜೆಸಿಬಿ ಯಂತ್ರ , ಎರಡು ದೋಣಿ ವಶಪಡಿಸಿಕೊಂಡಿದ್ದಾರೆ.

Young girl cheated: Case registered in Udupi

ಜಿಲ್ಲಾಡಳಿತ ವಿಧಿಸಿರುವ ಷರತ್ತುಗಳನ್ನು ಪೂರೈಸುವ ಪರವಾನಗಿದಾರರಿಗೆ ಮಾತ್ರ ಸಿಆರ್ ಜೆಡ್ ವ್ಯಾಪ್ತಿಯ ಮರಳು ದಿಣ್ಣೆಗಳಿಂದ ಮರಳು ತೆಗೆಯುವ ಅವಕಾಶ ಕಲ್ಪಿಸಲಾಗಿದೆ. ಆದರೆ ಕೆಲವು ಕಡೆ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.[ಮಂಡ್ಯದಲ್ಲಿ ಅಣ್ಣನಿಂದ ಸಹೋದರಿಯ ಪ್ರಿಯತಮ ಕೊಲೆ]

ದಕ್ಷಿಣ ಉಪವಿಭಾಗದ ಎಸಿಪಿ ಎನ್.ಎಸ್.ಶ್ರುತಿ ನೇತೃತ್ವದ ತಂಡ ಜೆಪ್ಪಿನಮೊಗರು ಮರಳು ದಕ್ಕೆ ಬಳಿ ದಾಳಿ ನಡೆಸಿತು. ಅಲ್ಲಿ ಮರಳು ತುಂಬಿಸಿಕೊಂಡು ಹೋಗಲು ಬಂದಿದ್ದ ಎರಡು ಲಾರಿ ಮತ್ತು ಮರಳು ತುಂಬಿಸಲು ಬಳಸುತ್ತಿದ್ದ ಒಂದು ಜೆಸಿಬಿ ಯಂತ್ರವನ್ನು ವಶಕ್ಕೆ ಪಡೆದು, ಆರು ಮಂದಿಯನ್ನು ಬಂಧಿಸಲಾಯಿತು.

ಪಣಂಬೂರು ಮರಳು ದಕ್ಕೆ ಬಳಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಇನ್ ಸ್ಪೆಕ್ಟರ್ ಸುನೀಲ್ ನಾಯಕ್ ನೇತೃತ್ವದ ತಂಡ ಮರಳು ಗಣಿಗಾರಿಕೆ ನಡೆಸುತ್ತಿದ್ದ ಆರು ಮಂದಿಯನ್ನು ಬಂಧಿಸಿ, ಎರಡು ಲಾರಿ ಮತ್ತು ಎರಡು ದೋಣಿಗಳನ್ನು ವಶಕ್ಕೆ ಪಡೆದಿದೆ ಎಂದು ಡಿಸಿಪಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

English summary
Nidhi, Young girl cheated by Rajath, He assured Airforce seat to Nidhi by taking 1.2 lakhs. After that Rajath behaved rudely with her. So, case ragistered against him in Udupi city police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X