ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಜೋಡಿಯ ಅಪರೂಪದ ಲಗ್ನ

ಆದಿ ಉಡುಪಿಯ ಅಂಬೇಡ್ಕರ್ ಭವನದಲ್ಲಿ ಜೋಡಿಯೊಂದು ಬೌದ್ಧ ಧರ್ಮ ಪದ್ಧತಿಯಂತೆ ದಾಂಪತ್ಯ ಜೀವನಕ್ಕೆ ಭಾನುವಾರ ಕಾಲಿಟ್ಟಿತು. ಇದೇನು ಅಚ್ಚರಿಯ ವಿಷಯವೇ? ಅಂದರೆ ಖಂಡಿತ ಹೌದು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 22: ಆದಿ ಉಡುಪಿಯ ಅಂಬೇಡ್ಕರ್ ಭವನದಲ್ಲಿ ಜೋಡಿಯೊಂದು ಬೌದ್ಧ ಧರ್ಮ ಪದ್ಧತಿಯಂತೆ ದಾಂಪತ್ಯ ಜೀವನಕ್ಕೆ ಭಾನುವಾರ ಕಾಲಿಟ್ಟಿತು.

ಇದೇನು ಅಚ್ಚರಿಯ ವಿಷಯವೇ? ಅಂದರೆ ಖಂಡಿತ ಹೌದು. ಏಕೆಂದರೆ ಉಡುಪಿಯಲ್ಲಿ ಬೌದ್ಧ ಸಂಪ್ರದಾಯದಂತೆ ನಡೆದ ಮೊದಲ ವಿವಾಹ ಇದಾಗಿದೆ. ಈ ಅಪರೂಪದ ಮದುವೆಯನ್ನು ಉಡುಪಿ ಹಾಗು ದಕ್ಷಿಣ ಕನ್ನಡ ಜಿಲ್ಲೆ ಬೌದ್ಧ ಮಹಾಸಭಾ ಏರ್ಪಡಿಸಿತ್ತು.

ಉಡುಪಿಯ ರವೀಂದ್ರ ಬಂಟಕಲ್ ಹಾಗೂ ಕುಶಲ ಹಸೆಮಣೆಗೇರಿದ ದಂಪತಿ. ಕುಂದಾಪುರ ಕೆ ಎಸ್ ಆರ್ ಟಿ ಸಿಯಲ್ಲಿ ಉದ್ಯೋಗಿಯಾಗಿರುವ ರವೀಂದ್ರ ಮತ್ತು ಗೇರು ಬೀಜ ಫ್ಯಾಕ್ಟರಿಯಲ್ಲಿ ಕೆಲಸದಲ್ಲಿದ್ದ ಕುಶಲ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸಿ ಮನೆಯಲ್ಲಿ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.[ಕುಂದಾಪುರದಲ್ಲಿ "ಸಿಂಪಲ್ಲಾಗ್ ಒಂದು ಮದುವೆ ಸ್ಟೋರಿ"]

Udupi has witnessed to a rare marriage

ದಲಿತ ಹೋರಾಟದಲ್ಲಿ ಸಕ್ರಿಯವಾಗಿದ್ದ ಇವರಿಬ್ಬರು ಬೌದ್ಧ ಸಂಪ್ರದಾಯದಂತೆ ಮದುವೆಯಾದರು. 2012ರಲ್ಲಿ ರವೀಂದ್ರ ಬೌದ್ಧ ಧರ್ಮ ಸ್ವೀಕರಿಸಿದ್ದರೆ, ಕುಶಲ ಮದುವೆಗೂ ಮುನ್ನ ಬೌದ್ಧ ಧರ್ಮ ಸ್ವೀಕರಿಸಿದರು. ಮೈಸೂರಿನ ಬೌದ್ಧ ಬಿಕ್ಷು ಗೌತಮಿ ಮಾತಾಜಿ ಪ್ರವಚನ ಹಾಗೂ ಬೌದ್ಧ ಸಂದೇಶ ನೀಡಿದರು. ವಿವಾಹದಲ್ಲಿ ಪಾಳಿ ಭಾಷೆಯಲ್ಲೆ ಮಂತ್ರ ಪಠಿಸಲಾಯಿತು. ಬಳಿಕ ನೋಂದಾಯಿಸಿ ಬೌದ್ಧ ಮಹಾಸಭಾದಿಂದ ಪ್ರಮಾಣ ಪತ್ರ ನೀಡಲಾಯಿತು.

{promotion-urls}

English summary
Udupi has witnessed to a rare marriage. Buddhism style of marriage took place at Ambedkar Bhavan Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X