ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ ಸಿಐಡಿ ತನಿಖೆಗೆ

By Madhusoodhan
|
Google Oneindia Kannada News

ಉಡುಪಿ, ಆಗಸ್ಟ್, 16: ಉದ್ಯಮಿ ಭಾಸ್ಕರ ಶೆಟ್ಟಿ ನಿಗೂಢ ನಾಪತ್ತೆ ಹಾಗೂ ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಒಪ್ಪಿಸುವ ನಿರ್ಧಾರಕ್ಕೆ ಮಂಗಳವಾರ ಬಂದಿದೆ.

ಉದ್ಯಮಿ ಭಾಸ್ಕರ ಶೆಟ್ಟಿಯವರು ಉಡುಪಿಯ ಇಂದ್ರಾಳಿಯಲ್ಲಿರುವ ತನ್ನ ಮನೆಯಿಂದ ನಾಪತ್ತೆಯಾಗಿ ಎಂಟು ದಿನಗಳ ಬಳಿಕ ಅವರ ಪತ್ನಿ ಮತ್ತು ಮಗನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ ಸಂದರ್ಭ ಕೊಲೆ ವಿಚಾರ ಹೊರಕ್ಕೆ ಬಂದಿತ್ತು.[ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ಪೊಲೀಸರ ಹೊಸ ಅವಾಂತರ?]

udupi

ಭಾಸ್ಕರ ಶೆಟ್ಟಿಯವರನ್ನು ತಾವೇ ಕೊಲೆ ಮಾಡಿರುವುದಾಗಿ ಪತ್ನಿ ಮತ್ತು ಮಗ ತಪ್ಪೊಪ್ಪಿಕೊಂಡಿದ್ದರು ಅಲ್ಲದೇ ಜ್ಯೋತಿಷಿ ನಿರಂಜನ ಭಟ್ಟ ಎಂಬಾತನ ಸಹಾಯದಿಂದ ಹೋಮಕುಂಡದಲ್ಲಿ ಶೆಟ್ಟಿಯವರ ಶವವನ್ನುಸುಟ್ಟುಹಾಕಿದ್ದೇವೆ ಎಂದು ಹೇಳಿದ್ದರು.

ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಬೇಡಿಕೆಯನ್ನು ಪುಸರಸ್ಕರಿಸಿದ ರಾಜ್ಯ ಸರ್ಕಾರ ಮುಂದೆ ಮತ್ತೂ ಹೆಚ್ಚಿನ ಗೊಂದಲಕ್ಕೆ ಆಸ್ಪದ ಇರಬಾರದು ಎಂಬ ಕಾರಣಕ್ಕೆ ಸಿಐಡಿಗೆ ವಹಿಸುವ ನಿರ್ಧಾರಕ್ಕೆ ಬಂದಿದೆ. ಪೊಲೀಸರು ಅಪಾರ ಪ್ರಮಾಣದ ಮಾಹಿತಿ ಕಲೆಹಾಕಿದ್ದು ಇನ್ನು ಮುಂದೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ವಹಿಸಿಕೊಳ್ಳಲಿದ್ದಾರೆ. [ಶಾಕಿಂಗ್ : ಪತಿಯನ್ನು ಯಜ್ಞಕುಂಡದಲ್ಲಿ ಹಾಕಿ ಸುಟ್ಟಳೇ ಪತ್ನಿ]

ಭಾಸ್ಕರ ಶೆಟ್ಟಿ ಹತ್ಯೆ :
ಜುಲೈ 28ರಂದು ನಾಪತ್ತೆಯಾಗಿದ್ದ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆಯಾದ ವಿಚಾರ ಆಗಸ್ಟ್ 6 ರಂದು ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಮತ್ತು ಪುತ್ರ ನವನೀತ್‌ನನ್ನು ಬಂಧಿಸಲಾಗಿತ್ತು.[ಭಾಸ್ಕರ ಶೆಟ್ಟಿ ಹತ್ಯೆ: ಜ್ಯೋತಿಷಿ ನಿರಂಜನ್ ಭಟ್ ಅನ್ನೋ ಪ್ರಳಯಾಂತಕ]

ಈ ಪ್ರಕರಣದಲ್ಲಿ 3ನೇ ಆರೋಪಿಯಾದ ಜ್ಯೋತಿಷಿ ನಿರಂಜನ್ ಭಟ್ ನನ್ನು ನಂತರ ಬಂಧಿಸಲಾಗಿತ್ತು. ಪೊಲೀಸರ ವಶದಲ್ಲಿರುವಾಗಲೇ ಭಟ್ ಆತ್ಮಹತ್ಯೆಗೆ ಯತ್ನಿಸಿದ್ದರು.

English summary
Karnataka State government has decided to hand over the sensational Bhasker Shetty murder case to Criminal Investigation Department(CID) on Tuesday, August 16. The decision comes after several members of Bunt Community had urged district-incharge minister Pramod Madhwaraj to hand over the case to the CID following ongoing baised investigation in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X