ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಬೆಲ್ಲಾ ಅಭಿಯಾನ: ಉಡುಪಿಯಲ್ಲಿ 2, 993 ಬೂತುಗಳು

|
Google Oneindia Kannada News

ಉಡುಪಿ, ಫೆಬ್ರವರಿ 6 : ಇದೇ ಬರುವ ಫೆಬ್ರವರಿ 7ರಿಂದ 28ರವರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಿಸೆಲ್ಸ್ ರಬೆಲ್ಲಾ ಚುಚ್ಚುಮದ್ದು ಅಭಿಯಾನವನ್ನು ಆಯೋಜಿಸಿದೆ.

ಇದರ ಅಂಗವಾಗಿ ಉಡುಪಿ ಜಿಲ್ಲೆಯಲ್ಲಿ 2,993 ಬೂತುಗಳನ್ನು ನಿರ್ಮಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ರೋಹಿಣಿ ಹೇಳಿದ್ದಾರೆ.

ಎಲ್ಲೆಲ್ಲಿ ಬೂತುಗಳು: ಈ ಅಭಿಯಾನದಲ್ಲಿ 9 ತಿಂಗಳಿಂದ ಆರಂಭಿಸಿ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಈ ಚುಚ್ಚುಮದ್ದನ್ನು ಕಡ್ಡಾಯವಾಗಿ ನೀಡಬೇಕಾಗಿದೆ. ಹಾಗೂ ಚುಚ್ಚುಮದ್ದು ಹಿಂದೊಮ್ಮೆ ಹಾಕಿಸಿದ್ದರೂ ಮತ್ತೊಮ್ಮೆ ಹಾಕಿಸಲೇಬೇಕು ಎಂದು ಅವರು ಹೇಳಿದ್ದಾರೆ.

rubella campaign in Udupi

ಎಲ್ಲಾ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಅಲ್ಲದೇ ಈ ಕುರಿತಾಗಿ ತೆರೆದ ಕೇಂದ್ರಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ನಡೆಯಲಿದೆ. ಇದೇ ಉದ್ದೇಶಕ್ಕೆ ಜಿಲ್ಲೆಯಲ್ಲಿ 2,993 ಬೂತುಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ 2015ರಲ್ಲಿ ಸುಮಾರು 68 ಮಿಸೆಲ್ಸ್ ಪ್ರಕರಣಗಳು ಮತ್ತು ಎರಡು ರಬೆಲ್ಲಾ ಪ್ರಕರಣಗಳು ದಾಖಲಾಗಿವೆ.

ಇದೇ ವೇಳೆ 2016ರಲ್ಲಿ 16 ಮಿಸೆಲ್ಸ್ ಮತ್ತು ಒಂದು ರಬೆಲ್ಲಾ ಪ್ರಕರಣ ದಾಖಲಾಗಿದೆ. ಈ ವರ್ಷ ಇದುವರೆಗೆ ಸುಮಾರು ನಾಲ್ಕು ಮಿಸೆಲ್ಸ್ ಮತ್ತು ಒಂದು ರಬೆಲ್ಲಾ ಪ್ರಕರಣ ದಾಖಲಾಗಿದೆ. 2020ಕ್ಕೆ ದೇಶವನ್ನು ಮಿಸೆಲ್ಸ್ ಮತ್ತು ರಬೆಲ್ಲಾ ಕಾಯಿಲೆ ಮುಕ್ತ ದೇಶವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೂಪಿಸಿದ ತಂತ್ರ ಇದು ಎಂಬ ಮಾತು ಕೇಳಿ ಬರುತ್ತಿದೆ.

English summary
In order to support the Central government's rubella vaccination programe, Udupi district governance has installed 2,933 vaccination booth across the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X