ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ : ಗ್ರಾಪಂ ಉಪಾಧ್ಯಕ್ಷೆ ಮನೆಗೆ ಅತಿಥಿಯಾಗಿ ಬಂದ ಚಿರತೆ

|
Google Oneindia Kannada News

ಉಡುಪಿ, ಆ.08 : ಅಲೆವೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮನೆಯಲ್ಲಿ ಚಿರತೆ ಕಾಣಿಸಿಕೊಂಡು ಜನರನ್ನು ಆತಂಕಗೊಳಿಸಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಕೋಲಾರ: ಚಿರತೆಯನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಜನತೆಕೋಲಾರ: ಚಿರತೆಯನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಜನತೆ

ಸೋಮವಾರ ರಾತ್ರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಲಕ್ಷ್ಮೀ ಅವರ ಮನೆಯ ನಾಯಿ ವಿಪರೀತವಾಗಿ ಬೊಗಳ ತೊಡಗಿತ್ತು. ಜಯಲಕ್ಷ್ಮೀ ಅವರ ಪತಿ ಹಂಸರಾಜ್ ಪರಿಶೀಲನೆ ನಡೆಸಿದಾಗ ಬಾತ್ ರೂಂನಲ್ಲಿ ಚಿರತೆ ಇರುವುದು ಕಂಡುಬಂದಿತು.

Leopard caught near Alevoor, Udupi

ಚಿರತೆ ಕಂಡು ಆತಂಕಗೊಂಡ ಹಂಸರಾಜ್ ಅವರು ಏನೂ ಮಾಡಲು ತೋಚದೆ ಹಿಂದಿನಿಂದ ಬಂದು ಬಾತ್ ರೂಂ ಬಾಗಿಲು ಬಂದ್ ಮಾಡಿದರು. ನಂತರ ಸ್ಥಳೀಯರಿಗೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಚಿರತೆಯಿಂದ ತಪ್ಪಿಕೊಳ್ಳುವ ಯತ್ನದಲ್ಲಿ ಬೋನಿನಲ್ಲಿ ಸಿಕ್ಕಿಬಿದ್ದ ಮೂವರು ಮಾಡಿದ್ದೇನು?ಚಿರತೆಯಿಂದ ತಪ್ಪಿಕೊಳ್ಳುವ ಯತ್ನದಲ್ಲಿ ಬೋನಿನಲ್ಲಿ ಸಿಕ್ಕಿಬಿದ್ದ ಮೂವರು ಮಾಡಿದ್ದೇನು?

ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳಾದ ದಯಾನಂದ, ಗಣಪತಿ ನಾಯಕ್, ಕೇಶವ ಪೂಜಾರಿ, ದೇವರಾಜ, ಪರಶುರಾಮ ಮೇಟಿ ಮುಂತಾದವರ ಸಹಕಾರದಿಂದ ಮಂಗಳವಾರ ಬೆಳಗ್ಗೆ ಚಿರತೆಯನ್ನು ಸೆರೆ ಹಿಡಿಯಲಾಯಿತು.

English summary
Udupi forest department team managed to trap a leopard that had entered the house of Alevoor Grama Panchayat vice president on Tuesday, August 8 morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X