ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲ ಮನ್ನಾದ ಹಣೆ ಬರಹ ಇನ್ನೊಂದು ತಿಂಗಳಲ್ಲಿ ಗೊತ್ತಾಗುತ್ತೆ - ಎಚ್‍ಡಿಕೆ

|
Google Oneindia Kannada News

ಉಡುಪಿ, ಜೂನ್ 26: "ಸಿದ್ಧರಾಮಯ್ಯ ರಾಜ್ಯದ ರೈತರಿಗೆ ಕೊಟ್ಟ ಬಳುವಳಿ ಏನು ಎಂಬುದನ್ನು ಅವರ ಕಾಲದಲ್ಲಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಇತಿಹಾಸ ಹೇಳುತ್ತದೆ," ಹೀಗಂಥ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಲ್ಲಿ ಬಿಜೆಪಿ, ಅಲ್ಲಿ ಕಾಂಗ್ರೆಸ್ ಗೆ ಬೆಂಬಲ; ಇದು ಜೆಡಿಎಸ್ ರಾಜಕೀಯಇಲ್ಲಿ ಬಿಜೆಪಿ, ಅಲ್ಲಿ ಕಾಂಗ್ರೆಸ್ ಗೆ ಬೆಂಬಲ; ಇದು ಜೆಡಿಎಸ್ ರಾಜಕೀಯ

ಪತ್ನಿ, ಮಗನೊಂದಿಗೆ ಭಾನುವಾರ ಸಂಜೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

'I am a real farmer but not Siddaramaiah' said Kumaraswamy, attacks CM on loan waiver

"ಸಿದ್ದರಾಮಯ್ಯ ಮಾಡಿದ 50,000ರೂ. ಸಾಲಮನ್ನಾದ ಹಣೆಬರಹ ಇನ್ನೊಂದು ತಿಂಗಳಲ್ಲಿ ಗೊತ್ತಾಗುತ್ತದೆ," ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಹೇಳಿದರು.

ರಾಷ್ಟ್ರಪತಿಗಳು ಇತ್ತೀಚೆಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದಾಗ ಬಾರದ ಸಿದ್ಧರಾಮಯ್ಯರ ನಡೆಯನ್ನು ತೀವ್ರವಾಗಿ ಟೀಕಿಸಿದ ಕುಮಾರಸ್ವಾಮಿ, ಪೇಜಾವರ ಶ್ರೀಗಳು ಖುದ್ದಾಗಿ ನೀಡಿದ ಆಹ್ವಾನವನ್ನು ತಿರಸ್ಕರಿಸಿ ಉಡುಪಿಗೆ ಬಾರದಿರುವುದನ್ನು ಉದ್ದಟತನವೆಂದು ಬಣ್ಣಿಸಿದ್ದಾರೆ.

ಉಡುಪಿ ಕೃಷ್ಣ ಮಠದಲ್ಲಿ ಪೇಜಾವರರಿಂದ ಐತಿಹಾಸಿಕ ಇಫ್ತಾರ್ ಕೂಟಉಡುಪಿ ಕೃಷ್ಣ ಮಠದಲ್ಲಿ ಪೇಜಾವರರಿಂದ ಐತಿಹಾಸಿಕ ಇಫ್ತಾರ್ ಕೂಟ

ನಷ್ಟವಿರುವುದು ಸಿದ್ಧರಾಮಯ್ಯರಿಗೆ ಹಾಗೂ ಪಕ್ಷಕ್ಕೆ. ಸಿಎಂರ ಈ ಉದ್ಧಟತನದಿಂದಲೇ ರಾಜ್ಯಕ್ಕೆ ಇಂಥ ಕೆಟ್ಟ ಸ್ಥಿತಿ ಬಂದಿದೆ. ಇದರಿಂದ ಮಠಕ್ಕಾಗಲೀ, ಪೇಜಾವರ ಶ್ರೀಗಳಿಗಾಗಲೀ ನಷ್ಟವಿಲ್ಲ ಎಂದರು.

'I am a real farmer but not Siddaramaiah' said Kumaraswamy, attacks CM on loan waiver

ಮೀರಾ ಕುಮಾರ್ ಗೆ ಬೆಂಬಲ

ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ತನಗೆ ಹಾಗೂ ತಂದೆ ಎಚ್.ಡಿ.ದೇವೇಗೌಡರಿಗೆ ದೂರವಾಣಿ ಕರೆ ಮಾಡಿ ಮಾತನಾಡಿ ಮೀರಾ ಕುಮಾರ್ ಅವರಿಗೆ ಬೆಂಬಲವನ್ನು ಯಾಚಿಸಿದ್ದರು. ಹೀಗಾಗಿ 17 ಪಕ್ಷಗಳ ಅಭ್ಯರ್ಥಿಯಾಗಿರುವ ಅವರಿಗೆ ಪಕ್ಷದ ಬೆಂಬಲ ನೀಡಲು ನಿರ್ಧರಿಸಿದ್ದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಮೀರಾ ಕುಮಾರ್ ಅವರು ಹಲವು ಹುದ್ದೆಗಳಲ್ಲಿ ಅತ್ಯುತ್ತಮ ಕಾರ್ಯಗಳನ್ನು ಮಾಡಿದ್ದು, ಅಲ್ಲದೇ ಬಾಬು ಜಗಜೀವನ್‌ರಾಂ ಅವರ ಮಗಳಾಗಿ ಅವರ ಕೊಡುಗೆಯ ಹಿನ್ನೆಲೆಯಲ್ಲಿ ಹಾಗೂ 17 ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿರುವ ಅವರಿಗೆ ಬೆಂಬಲ ನೀಡಲಿದ್ದೇವೆ ಎಂದರು.

English summary
H D Kumaraswamy during his visit to Sri Krishna Math took a dig at the state government's recent announcement of loan waiver to farmers and said that chief minister Siddaramaiah was a 'superficial farmer' while he was a 'real' one.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X