ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಗೆ ಬಂದ ಜರ್ಮನಿ ವಿದ್ಯಾರ್ಥಿಗಳು

ಭಾರತೀಯ ವಿಭಿನ್ನ ಹಳ್ಳಿ ಬದುಕನ್ನು, ಗ್ರಾಮೀಣ ಸೊಗಡನ್ನು ಅಧ್ಯಯನ ಮಾಡುವುದಕ್ಕಾಗಿ ಜರ್ಮನಿಯ ಮೂವರು ವಿದ್ಯಾರ್ಥಿಗಳು ಉಡುಪಿಗೆ ಆಗಮಿಸಿದ್ದಾರೆ.

By ಶಂಶೀರ್ ಬುಡೋಳಿ
|
Google Oneindia Kannada News

ಮಂಗಳೂರು, ಎಪ್ರಿಲ್ 18 : ಭಾರತ ದೇಶದ ಗ್ರಾಮೀಣ ಬದುಕು, ಸಂಸ್ಕೃತಿಯನ್ನು ಅಧ್ಯನ ಮಾಡುವ ಮದಾಸೆ ಹೊತ್ತು ಜರ್ಮನಿಯ ಮೂವರು ವಿದ್ಯಾರ್ಥಿಗಳು ಉಡುಪಿಗೆ ಆಗಮಿಸಿದ್ದಾರೆ. ಜರ್ಮನಿಯ ಸೆಬಾಸ್ಟಿಯನ್ ಮುಲ್ಲರ್ , ಡೇನಿಯಲ್ ಹಿರ್ಲೆ ಹಾಗೂ ಅರಿಯಾನೆ ವಿಯಾಸ್ಕೆ ಎಂಬುವವರು ಎನ್ ಜಿಓ ಸಂಸ್ಥೆಯೊಂದರ ಮೂಲಕ ಕುಂದಾಪುರಕ್ಕೆ ಬಂದಿದ್ದಾರೆ.

ಎಫ್ ಎಸ್ ಎಲ್ ಇಂಡಿಯಾ ( ಫೀಲ್ಡ್ ಸರ್ವಿಸಸ್ ಆಂಡ್ ಇಂಟರ್ ಕಲ್ಚರಲ್ ಲರ್ನಿಂಗ್) ಹಾಗೂ ಮಂದಾರ್ತಿಯಲ್ಲಿರುವ ಎಸ್ ಐ ಎನ್ ಡಿಎಸ್ - ಸೋಶಿಯಲ್ ಇನ್ಫಾಸ್ಚಕ್ಟ್ರರ್ ಡೆವಲಪಿಂಗ್ ಸೊಸೈಟಿ ಇವರ ಅಧ್ಯಯನಕ್ಕೆ ಸಹಕಾರ ನೀಡಲಿದೆ.[ಮಂಗಳೂರು: ಖುರೇಷಿ ಮೇಲಿನ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ]

Germen students in Udupi district

ಭಾರತದ ಜೀವನ ಕ್ರಮ ಜರ್ಮನಿಗಿಂತ ಬಹಳ ವಿಭಿನ್ನ ಮತ್ತು ವಿಶೇಷವಾಗಿದೆ. ಇಲ್ಲಿ ಹಸುಗಳನ್ನ ಹೇಗೆ ಸಾಕುತ್ತಾರೆ ಅನ್ನುವುದು ನಮಗೆ ಕುತೂಹಲ ಮೂಡಿಸಿದೆ. ಇಲ್ಲಿ ಸಿಗುವ ಶುದ್ಧ ಹಾಲು, ತರಕಾರಿ ತಿನ್ನಬೇಕೆಂಬ ಆಸೆ ಮೂಡಿದೆ' ಅನ್ನುತ್ತಾರೆ ಸೆಬಾಸ್ಟಿಯನ್.
ಬೇರೆ ದೇಶದ ಬಗ್ಗೆ ಅಧ್ಯಯನ ಮಾಡಲು ಜರ್ಮನಿ ಸರ್ಕಾರ ಪ್ರೋತ್ಸಾಹ ನೀಡುತ್ತದೆಯಂತೆ. ಅಲ್ಲದೇ ಆಸಕ್ತರಿಗೆ ಜರ್ಮನಿ ಸರ್ಕಾರವೇ ಸಂಬಂಧಪಟ್ಟ ಇಲಾಖೆ ಗಳ ಮೂಲಕ ಭಾರತದಲ್ಲಿರುವ ಎನ್ ಜಿಓಗಳನ್ನ ಪರಿಚಯಿಸುತ್ತದೆಯಂತೆ.[ಉಡುಪಿ: ಅಂಬೇಡ್ಕರ್ ಗೆ ಅವಮಾನ, ಆರೋಪಿಗಾಗಿ ಶೋಧ]

'ನನಗೆ ಉಡುಪಿ ಜಿಲ್ಲೆಯ ಪ್ರತಿ ಗ್ರಾಮಗಳಿಗೆ ಹೋಗಿ ರೈತರನ್ನ ಭೇಟಿ ಮಾಡಬೇಕು. ಈ ಮೂಲಕ ಸ್ವತಃ ಗ್ರಾಮೀಣ ಜೀವನದ ಸೊಗಡನ್ನ ಅನುಭವಿಸಿ, ಸವಿಯಬೇಕು' ಅನ್ನುತ್ತಾರೆ ಡೇನಿಯಲ್ . ಇನ್ನೋರ್ವ ವಿದ್ಯಾರ್ಥಿ ಅರಿಯಾನೆಗೆ ಇಲ್ಲಿನ ಶಿಕ್ಷಣ ಪದ್ದತಿ ಬಗ್ಗೆ ಹೆಚ್ಚಿನ ಆಸಕ್ತಿ ಇದೆಯಂತೆ.
'ನಾವು ನಮ್ಮ ಎನ್ ಜಿಓ ಮೂಲಕ ಈ ಮೂರು ವಿದ್ಯಾರ್ಥಿಗಳನ್ನು ರೈತರ ಬಳಿಗೆ ಕರೆದುಕೊಂಡು ಹೋಗುತ್ತೇವೆ. ಅವರಿಗೆ ಬೇಕಾದ ಮಾಹಿತಿಯನ್ನ ನಾವು ನೀಡಲು ವ್ಯವಸ್ಥೆ ಮಾಡಿದ್ದೇವೆ ಎನ್ನುತ್ತಾರೆ, ಇವರುಗಳ ಉಸ್ತುವಾರಿ ಹೊಣೆ ಹೊತ್ತ ಸಿಂಡ್ಸ್ ಎನ್ ಜಿಓ ಸಂಸ್ಥೆಯ ಟ್ರಸ್ಟಿ ಕುಮಾರೇಶ್ವರ ಭಟ್

English summary
3 Germen students have come to Udupi to studay about Indian rural life. We are really enjoying the way of living in India, students told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X