ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಜತೆ ಒನ್ಇಂಡಿಯಾ ಕನ್ನಡ ಸಂದರ್ಶನ

ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿಕೊಂಡಿರುವ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಜತೆ ಒನ್ಇಂಡಿಯಾ ಕನ್ನಡ ಸಂದರ್ಶನ.

By ಶಂಶೀರ್, ಬುಡೋಳಿ
|
Google Oneindia Kannada News

ಉಡುಪಿ, ಮಾರ್ಚ್. 15 : ಬಹುಕಾಲ ಕಾಂಗ್ರೆಸ್ ನಲ್ಲಿದ್ದುಕೊಂಡು ಹಿರಿಯ ನಾಯಕರಾಗಿ ಗುರುತಿಸಿಕೊಂಡಿದ್ದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಪಕ್ಷದೊಳಗಿನ ಆಂತರಿಕ ಕಲಹದಿಂದ ಬೇಸತ್ತು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿರುವುದು ನಿಮಗೆಲ್ಲಾ ಗೊತ್ತೇ ಇದೆ.

ಹಲವು ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿದ್ದುಕೊಂಡು ಎಡಪಂಥೀಯ ಪರ ಧ್ವನಿ ಎತ್ತುತ್ತಿದ್ದ ಜಯಪ್ರಕಾಶ್ ಹೆಗ್ಡೆ ಅವರು, ದಿಢೀರ್ ನೇ ಬಿಜೆಪಿ ಸೇರಿದ್ದರಿಂದ ಆ ಪಕ್ಷದ ನೀತಿ-ನಿಯಮ, ಅಜೆಂಡಾಗಳಿಗೆ ಬದ್ಧರಾಗಲು ಕಷ್ಟ ಆಗಲ್ವಾ?.

ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ನೀಡಲಿದೆಯೇ? ಕೇಳಿದ ಎಲ್ಲ ಪ್ರಶ್ನೆಗಳಿಗೆಲ್ಲ ನಮ್ಮ ಒನ್ ಇಂಡಿಯಾ ಕನ್ನಡ ಜತೆ ಮುಕ್ತ ಮನಸ್ಸಿನಿಂದ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. [ಕೈಗೆ ಕೈಕೊಟ್ಟು ಬಿಜೆಪಿಗೆ ಜೈ ಎಂದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ]

Ex MP Jayaprakash Hegde exclusive interview by oneindia kannada

ಪ್ರಶ್ನೆ: ಜನಪರ,ಪ್ರಗತಿಪರ,ಎಡಪಂಥೀಯ ಮೇಲೆ ನಂಬಿಕೆ ಇರುವ ನಿಮಗೆ ಹಿಂದುತ್ವದ ಆಶಯ ಹೊಂದಿರುವ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಅಜಾಗಜಾಂತರ ವ್ಯತ್ಯಾಸ ಇದೆ ಅಲ್ವಾ?

ಉತ್ತರ: 'ನಾನು ನನ್ನ ಆತ್ಮಸಾಕ್ಷಿಯಂತೆ ಬದುಕುತ್ತಿದ್ದೇನೆ. ಯಾವ ಪಕ್ಷ ನನಗೆ ಗೌರವ ನೀಡುತ್ತದೆಯೋ, ಅಂತಹ ಪಕ್ಷದಲ್ಲಿ ಗುರುತಿಸಿಕೊಳ್ಳಲು ಇಚ್ಛಿಸುತ್ತೇನೆ. ಅಷ್ಟೇ ಅಲ್ಲ, ಆ ಪಕ್ಷದ ಸಿದ್ದಾಂತಕ್ಕೆ ನಾನು ಸಹ ಗೌರವ ನೀಡುತ್ತೇನೆ.

'ಬದಲಾವಣೆ ಅನ್ನುವುದು ಸಹಜ. ಹೀಗಾಗಿ ಕಾಲಘಟ್ಟದಲ್ಲಿ ಘಟಿಸುವ ಇಂತಹ ಬದಲಾವಣೆಯನ್ನ ಸ್ವೀಕರಿಸುವುದು, ಬದಲಾವಣೆಗೆ ಹೊಂದಿಕೊಳ್ಳುವುದು ಅಗತ್ಯ' ಎಂದರು.

ಪ್ರಶ್ನೆ: ಇನ್ನು ನಿಮ್ಮ ಬೆಂಬಲಿಗರು ಬಿಜೆಪಿ ಸೇರುತ್ತಾರೆಯೇ?
ಉತ್ತರ: 'ಬೆಂಬಲಿಗರಲ್ಲಿ ಹೆಚ್ಚಿನವರು ಬಿಜೆಪಿ ಸೇರುತ್ತಾರೆ. ಎಲ್ಲರೂ ಸೇರಬೇಕೋ? ಬೇಡವೋ? ಎಂಬುದು ಅವರವರ ಇಚ್ಛೆ. ಇದರಲ್ಲಿ ನನ್ನ ಅಭ್ಯಂತರವಿಲ್ಲ'. ಜೆ.ಹೆಚ್.ಪಾಟೀಲ್, ವಿ.ಎಸ್.ಆಚಾರ್ಯ ರಂತಹ ಹಿರಿಯ ನಾಯಕರು ನನ್ನನ್ನ ಗುರುತಿಸಿ ಪ್ರೋತ್ಸಾಹ ನೀಡಿದ್ದರು. ಅಂದಹಾಗೇ ಬಿಜೆಪಿ ನಿಲುವು ಕಠಿಣವಾಗಿದೆ, ಆದರ್ಶವಾಗಿದೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ'. ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಶೀಘ್ರವೇ ' ಪರಿವರ್ತನಾ ರ್ಯಾಲಿ' ಆರಂಭಿಸಲಿದ್ದೇವೆ' ಎಂದು ಹೇಳಿದರು.

English summary
Ex MP Jayaprakash Hegde exclusive interview with Oneindia Kannada. He answered various questions and allegations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X