ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಕುಮಾರ ಶ್ರೀಗಳಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ

|
Google Oneindia Kannada News

ತುಮಕೂರು, ಮೇ 13 : ನಡೆದಾಡುವ ದೇವರು ಎಂದೇ ಪ್ರಸಿದ್ಧಿ ಪಡೆದಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಬುಧವಾರ ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಜನರು ಪರೋಪಕಾರ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸ್ವಾಮೀಜಿ ಈ ಸಂದರ್ಭದಲ್ಲಿ ಕರೆ ನೀಡಿದ್ದಾರೆ.

ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮೇಶ್ ಸಿದ್ದಗಂಗಾ ಮಠದಲ್ಲಿ ಸ್ವಾಮೀಜಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. [ನೂರೆಂಟು ವಸಂತ ಕಂಡ ತ್ರಿವಿಧ ದಾಸೋಹಿಗೆ ಕೋಟಿ ವಂದನೆ]

Shivakumar Swamiji

ಪ್ರಶಸ್ತಿ ಸ್ವೀಕರಿಸಿದ ನಂತರ ಸಂದೇಶ ನೀಡಿದ ಶಿವಕುಮಾರ ಸ್ವಾಮೀಜಿಗಳು, 'ಮನುಷ್ಯನಿಗೆ ಪ್ರಶಸ್ತಿ ಮುಖ್ಯವಲ್ಲ. ಪ್ರಶಸ್ತಿ ಪಡೆಯುವುದರಿಂದ ಘನತೆ, ಗೌರವ ಹೆಚ್ಚಾಗುವುದಿಲ್ಲ. ನಾನೆಂದೂ ಪ್ರಶಸ್ತಿಗಾಗಿ ಆಸೆ ಪಟ್ಟಿಲ್ಲ. ಸರ್ಕಾರ ನೀಡಿರುವ ಪ್ರಶಸ್ತಿಯನ್ನು ಸ್ವೀಕರಿಸಿರುವೆ' ಎಂದು ಹೇಳಿದರು. [ರಾಷ್ಟ್ರಪತಿಯಿಂದ ಬುಧವಾರ 'ಪದ್ಮ' ಪ್ರಶಸ್ತಿ ಪ್ರದಾನ]

'ಮನುಷ್ಯ ಜೀವನದಲ್ಲಿ ಪರೋಪಕಾರದ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ' ಎಂದು ಸ್ವಾಮೀಜಿ ಹೇಳಿದರು. [ಲೋಕ ಜಂಗಮ: ಸಿದ್ದಗಂಗಾಶ್ರೀ ಸಾಕ್ಷ್ಯಚಿತ್ರ ಲೋಕಾರ್ಪಣೆ]

Padma bhushan

ಏಪ್ರಿಲ್‌ ತಿಂಗಳಿನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪದ್ಮ ಪ್ರಶಸ್ತಿಗಳನ್ನು ದೆಹಲಿಯಲ್ಲಿ ಪ್ರದಾನ ಮಾಡಿದ್ದರು. 108 ವರ್ಷದ ಶಿವಕುಮಾರ ಸ್ವಾಮಿಗಳು ದೆಹಲಿಗೆ ತೆರಳು ಸಾಧ್ಯವಾಗದ ಕಾರಣ ಸರ್ಕಾರದ ಪರವಾಗಿ ಇಂದು ಮಠದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

English summary
Tumakuru siddaganga mutt shree Dr. Shivakumara Swamiji (108) conferred with Padma Bhushan award on Wednesday in mutt by V.Umesh, additional chief secretary of Karnataka government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X