ಶಿವಕುಮಾರ ಸ್ವಾಮೀಜಿ ಗುಣಮುಖ, ಬಂದ ಭಕ್ತರಿಗೆ ದರ್ಶನ
ತುಮಕೂರು, ಮೇ 25 : ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಸಂಪೂರ್ಣ ಗುಣಮುಖರಾಗಿದ್ದಾರೆ.
ಸೂಕ್ತ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಶತಾಯುಷಿ ಶಿವಕುಮಾರ ಸ್ವಾಮೀಜಿಗಳು ಬುಧವಾರ ತಮ್ಮನ್ನು ನೋಡಲು ಬಂದ ಭಕ್ತರಿಗೆ ಲವಲವಿಕೆಯಿಂದ ದರ್ಶನ ನೀಡಿ ಆಶೀರ್ವಾದಿಸಿದರು.[ಸಿದ್ಧಗಂಗಾ ಶ್ರೀ ಡಿಸ್ ಜಾರ್ಜ್: ಮಠದತ್ತ ಪ್ರಯಾಣ ಬೆಳೆಸಿದ ಶ್ರೀ]
ಶ್ರೀಗಳಿಗೆ ನ್ಯುಮೋನಿಯಾ ಮತ್ತು ಮೂತ್ರನಾಳದ ಸೋಂಕು ಉಂಟಾಗಿತ್ತು. ಇದರಿಂದಾಗಿ ಕೆಲ ದಿನಗಳ ಹಿಂದೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು.
Comments
shivakumar swamiji health siddaganga mutt tumakuru ಶಿವಕುಮಾರ ಸ್ವಾಮೀಜಿ ಸಿದ್ಧಗಂಗಾ ಮಠ ತುಮಕೂರು ಜಿಲ್ಲಾಸುದ್ದಿ
English summary
The Siddaganga Mutt seer Shivakumar Swamiji recovered for his health issue, seer interacting with devotees on May 24 in Mutt.
Story first published: Thursday, May 25, 2017, 10:49 [IST]