ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾಭಾರತದ ಅಭಿಮನ್ಯುವಿನಂತಾಗಿದೆ ಬಿಜೆಪಿ ಅತೃಪ್ತರ ಸ್ಥಿತಿ: ಸೊಗಡು ಶಿವಣ್ಣ

ಬಿಜೆಪಿಯಲ್ಲಿನ ಕೆಲವು ಅವ್ಯವಸ್ಥೆ ಬಗ್ಗೆ ಅಸಮಾಧಾನ ಹೊರ ಹಾಕಿದವರ ಸ್ಥಿತಿ ಮಹಾಭಾರತದಲ್ಲಿನ ಅಭಿಮನ್ಯುವಿನ ರೀತಿ ಆಗಿದೆ ಎಂದು ಹೇಳಿರುವ ಮಾಜಿ ಸಚಿವ ಸೊಗಡು ಶಿವಣ್ನ ಅವರ ಮಾತಿನ ಅರ್ಥ ಏನು?

By ಕುಮಾರಸ್ವಾಮಿ
|
Google Oneindia Kannada News

ತುಮಕೂರು, ಏಪ್ರಿಲ್ 30: ಬಿಜೆಪಿಯ ಆಂತರಿಕ ಬಿಕ್ಕಟ್ಟು ತಕ್ಷಣಕ್ಕೆ ತಮಣಿಯಾಗುವಂತೆ ಕಾಣುತ್ತಿಲ್ಲ. ತುಮಕೂರಿನಲ್ಲಿ ಎಂ.ಬಿ.ನಂದೀಶ್ ಅವರ ಮನೆ ಗೃಹ ಪ್ರವೇಶಕ್ಕೆ ಭಾನುವಾರ ವಿಧಾನಪರಿಷತ್ ವಿಪಕ್ಷ ನಾಯಕ-ಬಿಜೆಪಿಯ ಅತೃಪ್ತರ ಮುಂಚೂಣಿಯಲ್ಲಿರುವ ಕೆಎಸ್ ಈಶ್ವರಪ್ಪ ಭೇಟಿ ನೀಡಿದ್ದಾರೆ.

ಇದೇ ವೇಳೆ ಸಭೆ ನಡೆಸಿದ ಬಗ್ಗೆ ಕೂಡ ಸುದ್ದಿ ಕೇಳಿಬರುತ್ತಿದೆ. ಅದರೆ ಈ ಬಗ್ಗೆ ಮಾಜಿ ಸಚಿವ ಸೊಗಡು ಶಿವಣ್ಣ ಒನ್ಇಂಡಿಯಾ ಕನ್ನಡದ ಜತೆ ಮಾತನಾಡಿದ್ದಾರೆ. " ನಂದೀಶ್ ಅವರ ಮನೆ ಗೃಹಪ್ರವೇಶಕ್ಕಾಗಿ ಈಶ್ವರಪ್ಪನವರು ಬಂದಿದ್ದರು ಬಿಟ್ಟರೆ ಬೇರೆ ಯಾವುದೇ ವಿಶೇಷ ಈ ಭೇಟಿಯಲ್ಲಿಲ್ಲ" ಎಂದಿದ್ದಾರೆ.[ಈಶು-ಯಡ್ಡಿ ಬಣಕ್ಕೆ ಬಿಸಿ ಮುಟ್ಟಿಸಿದ ಮುರಳೀಧರ್ ರಾವ್!]

Our situation like a Abhimanyu in Mahabhartha: Sogadu Shivanna

ಇನ್ನು ಆರೆಸ್ಸೆಸ್ ನ ಸಂತೋಷ್ ಅವರ ಮೇಲೆ ಯಡಿಯೂರಪ್ಪ ಮಾಡಿದ ಆರೋಪದ ಬಗ್ಗೆ ಪ್ರಶ್ನಿಸಿದಾಗ, ಮಾರಿಕಣ್ಣು ಹೋತದ ಮೇಲೆ ಅನ್ನೋ ಮಾತಿದೆ. ಹಾಗೆ ಸಂಘಟನೆಯಲ್ಲಿ ತೊಡಗಿಕೊಂಡಿರುವ ಸಂತೋಷ್ ಜೀ ಅವರನ್ನು ಎಳೆದುತಂದಿದ್ದಾರೆ. ಇದೀಗ ಮುರಳೀಧರ ರಾವ್ ಅವರು ವರದಿ ಕಳಿಸುತ್ತಾರೆ. ಆ ನಂತರ ಏನು ಮಾಡಬೇಕು ಎಂಬುದರ ಮೇಲೆ ನಾವು ಮುಂದಿನ ಹೆಜ್ಜೆ ಇಡ್ತೀವಿ ಎಂದರು.[ಯಡಿಯೂರಪ್ಪ ಅವರು ಹೈಕಮಾಂಡ್ ಮಾತು ಕೇಳ್ತಿಲ್ಲ: ಈಶ್ವರಪ್ಪ]

ಈ ಮಧ್ಯೆ ನಮ್ಮ ಇಬ್ಬರು ನಾಯಕರನ್ನು ಹುದ್ದೆಯಿಂದ ತೆಗೆದುಹಾಕಿದ್ದಾರೆ. ಇದು ನಿಜಕ್ಕೂ ದುರದೃಷ್ಟದ ಸಂಗತಿ. ನಮ್ಮ ಸ್ಥಿತಿ ಈಗ ಮಹಾಭಾರತದಲ್ಲಿನ ಅಭಿಮನ್ಯು ಥರ ಆಗಿದೆ. ಇದು ಕಂಪ್ಯೂಟರ್ ಯುಗ. ಇಂಥ ಕಾಲಘಟ್ಟದಲ್ಲೂ ಎಂಥ ಪರಿಸ್ಥಿತಿಯಲ್ಲಿದ್ದೀವಿ ನೋಡಿ ಎಂದು ಮಾತು ಮುಗಿಸಿದರು.

English summary
Our situation like a Abhimanyu in Mahabhartha, said by ex minister Sogadu Shivanna to Oneindia Kannada. He speaks about BJP dissidents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X