ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು : ಎಚ್‌ಎಎಲ್ ಹೆಲಿಕಾಪ್ಟರ್ ಘಟಕದ ವಿಶೇಷತೆಗಳು

By ಭಾಸ್ಕರ್ ಭಟ್
|
Google Oneindia Kannada News

ತುಮಕೂರು, ಡಿಸೆಂಬರ್ 17 : ಹಿಂದೂಸ್ತಾನ್‌ ಏರೋನಾ­ಟಿ­ಕಲ್‌ ಲಿಮಿಟೆಡ್‌ (ಎಚ್ಎಎಲ್‌) ಲಘು ಹೆಲಿಕಾಪ್ಟರ್ ಘಟಕವನ್ನು ತುಮಕೂರಿನಲ್ಲಿ ಸ್ಥಾಪನೆ ಮಾಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 3ರ ಭಾನುವಾರ ಘಟಕ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಘಟಕ ವಾರ್ಷಿಕ 2 ಸಾವಿರ ಕೋಟಿ ವಹಿವಾಟು ನಡೆಸಲಿದ್ದು, 3 ರಿಂದ 4 ಸಾವಿರ ನೇರ ಉದ್ಯೋಗ ಸೃಷ್ಟಿ­ಯಾ­ಗ­ಲಿದೆ ಎಂದು ಅಂದಾಜಿಸಲಾಗಿದೆ.

ಯುಪಿಎ ಸರ್ಕಾರದ 2ನೇ ಅವಧಿಯಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಎಚ್‌ಎಎಲ್ ಲಘು ಹೆಲಿ­ಕಾಪ್ಟ­ರ್‌­ ಘಟಕವನ್ನು ನಿರ್ಮಾಣ ಮಾಡಲು ಒಪ್ಪಿಗೆ ದೊರಕಿತ್ತು. ಘಟಕ ಸ್ಥಾಪನೆಗೆ ಬೀದರ್ ಮತ್ತು ತುಮಕೂರಿನ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ತುಮಕೂರು ಆಯ್ಕೆಯಾಗಿತ್ತು. [ಗುಬ್ಬಿಯಲ್ಲಿ ಹೆಲಿಕಾಪ್ಟರ್ ಘಟಕ ಸ್ಥಾಪನೆ]

hal

ಬಿದರೆಹಳ್ಳ ಕಾವಲ್‌ನಲ್ಲಿ ಎಚ್‌ಎಎಲ್ ಹೆಲಿ­ಕಾಪ್ಟ­ರ್‌­ ಘಟಕ ನಿರ್ಮಾಣ ಮಾಡುವ ಕಾರ್ಯಕ್ಕೆ ಈಗ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಸುಮಾರು 610 ಎಕರೆ ಜಾಗದಲ್ಲಿ ಘಟಕ ನಿರ್ಮಾಣಗೊಳ್ಳಲಿದೆ. ಘಟಕ ನಿರ್ಮಾಣಕ್ಕೆ ಸುಮಾರು 4000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ. [ತುಮಕೂರಿನ ಮೆಗಾ ಫುಡ್ ಪಾರ್ಕ್ ಬಗ್ಗೆ ಓದಿ]

ಸ್ಥಳಾಂತರದ ಸುದ್ದಿ : ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಕೇಂದ್ರ ರಕ್ಷಣಾ ಸಚಿವರಾದ ಬಳಿಕ ಈ ಘಟಕ ಗೋವಾಕ್ಕೆ ಸ್ಥಳಾಂತರಗೊಳ್ಳಲಿದೆ ಎಂಬ ಸುದ್ದಿ ಹಬ್ಬಿತ್ತು. ಡಿಸೆಂಬರ್ 14ರಂದು ಬೆಂಗಳೂರಿಗೆ ಬಂದಿದ್ದ ಪರಿಕ್ಕರ್ ಅವರು ಘಟಕ ಸ್ಥಳಾಂತರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. [ಪಾವಗಡದಲ್ಲಿ ಬೃಹತ್ ಸೌರ ಶಕ್ತಿ ಪಾರ್ಕ್ ಸ್ಥಾಪನೆಗೆ ಅಸ್ತು]

manohar parrikar

ಯಾವ ಹೆಲಿಕಾಪ್ಟರ್ ಉತ್ಪಾದನೆ? : ಗುಬ್ಬಿಯ ಉತ್ಪಾದನೆ ಘಟಕದಲ್ಲಿ 3000 ಕೆ.ಜಿ.ತೂಕದ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ನಿರ್ಮಾಣ ಮಾಡಲು ಎಚ್‌ಎಎಲ್ ಉದ್ದೇಶಿಸಿದೆ. 5 ರಿಂದ 6 ಜನರು ಪ್ರಯಾಣಿಸಬಹುದಾದದ ಈ ಹೆಲಿಕಾಪ್ಟರ್‌ ಅನ್ನು ಭೂ ಸೇನೆ ಮತ್ತು ವಾಯುಸೇನೆ ಬಳಸಲಿವೆ. ಭವಿಷ್ಯದಲ್ಲಿ ಈ ಘಟಕದಲ್ಲಿ 10 ರಿಂದ 12 ಸಾವಿರ ಟನ್ ತೂಕದ ಹೆಲಿಕಾಪ್ಟರ್ ನಿರ್ಮಾಣ ಮಾಡುವ ಗುರಿಯನ್ನು ಎಚ್‌ಎಎಲ್ ಹೊಂದಿದೆ.

ವಿದ್ಯುತ್ ಮಾರ್ಗ ಸ್ಥಳಾಂತರ : ಹೆಲಿಕಾಪ್ಟರ್ ಉತ್ಪಾದನಾ ಘಟಕಕ್ಕೆ ಗುರುತಿಸಿರುವ ಜಾಗದಲ್ಲಿ 220 ಕೆ.ವಿ.ಸಾಮರ್ಥ್ಯದ ಎರಡು ವಿದ್ಯುತ್ ಲೈನ್ ಹಾದು ಹೋಗಿದ್ದು, ಅದನ್ನು ಇಂಧನ ಇಲಾಖೆ ತೆರವುಗೊಳಿಸುತ್ತಿದೆ. ಘಟಕಕ್ಕೆ ಅಗತ್ಯವಾಗಿ ವಿದ್ಯುತ್ ಪೂರೈಕೆಗೆ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ನೀರಿನ ವ್ಯವಸ್ಥೆ : ಹೇಮಾವತಿ ನಾಲೆಯಿಂದ ಕೆರೆಗಳಿಗೆ ನೀರು ತುಂಬಿ, ಎಚ್‌ಎಎಲ್ ಘಟಕಕ್ಕೆ 0.43 ಟಿಎಂಸಿ ನೀರನ್ನು ಕೆರೆಗಳ ಮೂಲಕ ಪೂರೈಸಲಾಗುತ್ತದೆ. 2018-19ರ ವೇಳೆಗೆ ಘಟಕದಲ್ಲಿ ನಿರ್ಮಾಣಗೊಳ್ಳುವ ಹೆಲಿಕಾಪ್ಟರ್ ಸೇನೆಗೆ ಸೇರುವ ಸಾಧ್ಯತೆ ಇದೆ.

English summary
Hindustan Aeronautics Limited (HAL) will set up helicopter unit at Bidarehalla Kaval in Gubbi taluk of Tumakuru district. Karnataka Government sanctioned 610 acre of land for unit. Know about HAL helicopter unit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X