ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

5 ವರ್ಷಗಳ ಕಾಲ ಗೊರವನಹಳ್ಳಿ ದೇಗುಲ ಸರ್ಕಾರದ ವಶಕ್ಕೆ

By Mahesh
|
Google Oneindia Kannada News

ಕೊರಟಗೆರೆ, ಸೆ. 05: ತುಮಕೂರು ಜಿಲ್ಲೆಯ ಪ್ರಸಿದ್ದ ಶ್ರೀಗೊರವನಹಳ್ಳಿ ಲಕ್ಷ್ಮಿದೇವಸ್ಥಾನದ ಆಸ್ತಿ ಹಾಗೂ ಆಡಳಿತವನ್ನು ಸಂಪೂರ್ಣವಾಗಿ ಸರ್ಕಾರ ವಶಕ್ಕೆ ತೆಗೆದುಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಶ್ರೀ ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆ ವಶಕ್ಕೆ ತೆಗೆದುಕೊಳ್ಳಲಾಗಿದೆ. ಐದು ವರ್ಷಗಳ ಕಾಲ ಇಲಾಖೆಯ ವಶದಲ್ಲಿರುತ್ತದೆ ಎಂದು ಹೇಳಿದರು.

ಐದು ವರ್ಷಕ್ಕೆ ಮುನ್ನ ಗ್ರಾಮಸ್ಥರು ಹಾಗೂ ದೇವಾಲಯದ ಟ್ರಸ್ಟ್‌ನವರು ಯಾವುದೇ ವಿವಾದವಿಲ್ಲ, ನಾವು ಸಮರ್ಥವಾಗಿ ದೇವಸ್ಥಾನವನ್ನು ನಡೆಸಿಕೊಂಡು ಹೋಗುತ್ತೇವೆ ಎಂದು ಒಮ್ಮತದ ನಿರ್ಧಾರದಿಂದ ಸರ್ಕಾರದ ಮುಂದೆ ಬಂದರೆ ದೇವಸ್ಥಾನವನ್ನು ಟ್ರಸ್ಟ್ ವಶಕ್ಕೆ ಒಪ್ಪಿಸಲಾಗುವುದು ಎಂದು ತಿಳಿಸಿದರು. [ದೇಗುಲದ ವಿವಾದವೇನು?]

Goravanahalli Maha Lakshmi temple will be under Muzrai department for next 5 Years

ತುಮಕೂರು ಅಥವಾ ಮಧುಗಿರಿ ಉಪವಿಭಾಗಾಧಿಕಾರಿಯನ್ನು ದೇವಾಲಯಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗುವುದು ರಾಜ್ಯವಷ್ಟೇ ಅಲ್ಲದೆ, ಹೊರಗಿನ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ. ಭಕ್ತ ಸಂದಣಿ ಹೆಚ್ಚಾಗುವುದರಿಂದ ಯಾರಿಗೂ ತೊಂದರೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ.

ಜಿಲ್ಲೆಗೆ ನೂತನವಾಗಿ ಬಂದ ಜಿಲ್ಲಾಧಿಕಾರಿ ಪಲ್ಲವಿ ಅಕುರತಿ ದೀರ್ಘ ರಜೆ ಮೇಲೆ ತೆರಳಿದ್ದಾರೆ. ಹಾಗಾಗಿ ಪರ್ಯಾಯವಾಗಿ ಬೇರೆ ಜಿಲ್ಲಾಧಿಕಾರಿಯನ್ನು ಶೀಘ್ರವೇ ನೇಮಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ ಎಂದು ಸಚಿವರು ತಿಳಿಸಿದರು.

ಶ್ರೀ ಮಹಾಲಕ್ಷ್ಮೀ ದೇವಿದೇವಾಲಯ: ಇತಿಹಾಸ ಹೇಳುವಂತೆ ಬಡವರಾಗಿದ್ದ ಅಬ್ಬಯ್ಯ ಎಂಬುವವರು ಮೊದಲು ಶ್ರೀ ಮಹಾಲಕ್ಷ್ಮೀ ದೇವಿಯ ವಿಗ್ರಹವನ್ನು ಪಡೆದು ಪೂಜೆ ಮಾಡಲು ಆರಂಭಿಸಿದರು. ಮಹಾಲಕ್ಷ್ಮೀ ಪೂಜೆ ಮಾಡಿದ ನಂತರ ಅಬ್ಬಯ್ಯ ಶ್ರೀಮಂತರಾದರು ಮತ್ತು ಸಮಾಜ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡರು. ಆದ್ದರಿಂದ, ಅವರ ಮನೆ 'ಲಕ್ಷ್ಮೀ ನಿವಾಸ' ಎಂದು ಪ್ರಸಿದ್ಧವಾಯಿತು.[ಮಾಹಿತಿ ದೇವಾಲಯದ ವೆಬ್ ಸೈಟ್]

ಮಹಾಲಕ್ಷ್ಮೀ ದೇವಾಲಯದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಹಾಗು ಭಾನುವಾರಗಳಂದು ವಿಶೇಷ ಪೂಜೆ ಇರುತ್ತದೆ. ಕಾರ್ತಿಕಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಲಕ್ಷಾಂತರ ಭಕ್ತರು ಈ ಸಮಯದಲ್ಲಿ ದೇವಿಯ ದರ್ಶನಕ್ಕಾಗಿ ಆಗಮಿಸುತ್ತಾರೆ.

English summary
Goravanahalli Maha Lakshmi templem, Koratagere, Tumakuru will be under Muzrai department for next 5 Years said district in charge minister TB Jayachandra today. Government decide to take over the temple administration after the 2013 stampede.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X