ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಗೌಡರು

|
Google Oneindia Kannada News

ತುಮಕೂರು, ಏ,27 : ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಸೋಮವಾರ ಕೂದಲೆಳೆ ಅಂತರದಲ್ಲಿ ಬಹುದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಜಿಲ್ಲೆಯ ತುರುವೇಕೆರೆಯ ಅಮ್ಮಸಂದ್ರ ಹೆಗ್ಗೆರೆಯಲ್ಲಿ ಕೆಂಪಮ್ಮ ಹಾಗೂ ವೀರಭದ್ರೇಶ್ವರ ಸ್ವಾಮಿಯ ನೂತನ ರಥಗಳ ಉದ್ಘಾಟನೆಗೆ ಆಗಮಿಸಿದ್ದಾಗ ಅವಘಡ ಸಂಭವಿಸಿದೆ.

ಮೊದಲು ದೇವರಿಗೆ ಪೂಜೆ ಸಲ್ಲಿಸಿದ ದೇವೆಗೌಡರು ರಥ ಎಳೆಯುವುದಕ್ಕೆ ಚಾಲನೆ ನೀಡಿದರು. ಆದರೆ ಅವಸರ ಮಾಡಿದ ಭಕ್ತರು ರಥ ಎಳೆದೇ ಬಿಟ್ಟರು. ಆಗ ಅಲ್ಲೇ ಇದ್ದ ದೇವೇಗೌಡರು ರಥದ ಅಡಿಗೆ ಸಿಲುಕಿಬಿಡುತ್ತಿದ್ದರು. ಆದರೆ ಈ ವೇಳೆ ಸಮಯಪ್ರಜ್ಞೆ ಮೆರೆದ ದೇವೇಗೌಡ ಅಂಗರಕ್ಷಕ ಮಾಜಿ ಪ್ರಧಾನಿ ಅವರನ್ನು ಪಕ್ಕಕ್ಕೆ ಸರಿಸಿದ್ದಾರೆ.["ಜನತಾ ಪರಿವಾರ ಉದಯ ಮೋದಿ ಸರ್ಕಾರ ಪತನಕ್ಕಲ್ಲ"]

deve gowda

ಈ ವೇಳೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ಒಮ್ಮೆಲೆ ಕೂಗಿದರು. ಒಮ್ಮೆ ಏನಾಗುತ್ತಿದೆ ಎಂಬುದು ಯಾರಿಗೂ ಗೊತ್ತಾಲಿಲ್ಲ. ನಂತರ ರಥವನ್ನು ನಿಲ್ಲಿಸಿ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆಯಲಾಯಿತು.[ಬಿಬಿಎಂಪಿ ಚುನಾವಣೆ : ಸಿದ್ದರಾಮಯ್ಯಗೆ ಗೌಡರ ಪ್ರಶ್ನೆಗಳು]

ತುಮಕೂರಿನ ತುರುವೇಕೆರೆಯ ಅಮ್ಮಸಂದ್ರ ಹೆಗ್ಗೆರೆಯಲ್ಲಿ ಕೆಂಪಮ್ಮ ಹಾಗೂ ವೀರಭದ್ರೇಶ್ವರ ಸ್ವಾಮಿ ದೇವರಿಗೆ ನೂತನವಾಗಿ ನಿರ್ಮಿಸಿರುವ ರಥ ಉದ್ಘಾಟನೆ ಮತ್ತು ಚಾಲನೆಗೆ ಮಾಜಿ ಪ್ರಧಾನಿ ಅವರಿಗೆ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮ ಬೆಳಗ್ಗೆಯೇ ನಿಗದಿಯಾಗಿದ್ದರೂ ಸ್ವಲ್ಪ ತಡವಾಗಿ ತೆರಳಿದ ಗೌಡರು ತರಾತುರಿಯಲ್ಲಿ ಚಾಲನೆ ನೀಡಿದ್ದು ಎಡವಟ್ಟಿಗೆ ಕಾರಣವಾಯಿತು ಎನ್ನಲಾಗಿದೆ.

English summary
Former Prime Minister H.D.Deve Gowda escape from a unhurt in Tumakuru district on Monday. Deve Gowda inaugurate two new chariot at Turuvekere. On the same time people try to pull the chariot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X