ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈಡೇನಹಳ್ಳಿ ಗ್ರಾಮಸ್ಥರನ್ನು ಒಂದುಗೂಡಿಸಿದ ಹನುಮಂತ

By ಲಿಂಗದೇವರು ಕೊತ್ತಲುಮನೆ
|
Google Oneindia Kannada News

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಈಡೇನಹಳ್ಳಿ ಗ್ರಾಮದಲ್ಲಿ ವೀರಶೈವರು, ಪರಿಶಿಷ್ಟರು ಮತ್ತು ಕೆಲವು ವಿಶ್ವಕರ್ಮ ಸಮುದಾಯದ ಜನರು ದಶಕಗಳಿಂದ ಅನ್ಯೋನ್ಯತೆಯಿಂದ ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ಸದ್ಯ, ಗ್ರಾಮದ ಶ್ರೀ ರಂಗನಾಥ ದೇವಾಲಯದ ಆವರಣದಲ್ಲಿರುವ ಹನುಮಂತ ದೇವಸ್ಥಾನವನ್ನು ಗ್ರಾಮದ ಯುವಕರು ದೇಣಿಗೆ ಸಂಗ್ರಹಿಸಿ ನವೀಕರಿಸಿದ್ದಾರೆ.

ಬೇರೆ-ಬೇರೆ ಕಡೆ ಉದ್ಯೋಗದಲ್ಲಿರುವ ಈಡೇನಹಳ್ಳಿ ಗ್ರಾಮದ ಯುವಕರು ಹಬ್ಬಗಳಂದು ಊರಿನಲ್ಲಿ ಒಂದಾಗುತ್ತಿದ್ದರು. ಈ ಬಾರಿ ಎಲ್ಲರೂ ಹನುಮಂತ ದೇವರ ದೇವಾಲಯದ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮಕ್ಕಾಗಿ ಒಗ್ಗಟ್ಟಾಗಿದ್ದರು. ಗ್ರಾಮದ ಶ್ರೀ ರಂಗನಾಥ ದೇವಾಲಯದ ಆವರಣದಲ್ಲಿ ಇರುವ ಹನುಮಂತ ದೇವಾಲಯವನ್ನು ಯುವಕ ಮುಂದಾಳತ್ವದಲ್ಲಿ ನವೀಕರಿಸಲಾಗಿದೆ.

ಹನುಮಂತ ದೇವಾಲಯ ಶಿಥಿಲಗೊಂಡಿದ್ದನ್ನು ಗಮನಿಸಿದ ಗ್ರಾಮದ ಯುವಕರು, ಗ್ರಾಮದ ಹಿರಿಯರ ಅನುಮತಿ ಪಡೆದು ತಾವೇ ದೇಣಿಗೆ ಸಂಗ್ರಹಿಸಿ ದೇವಾಲಯವನ್ನು ನವೀಕರಿಸಿ ಜೂ.21ರಂದು ತಮ್ಮಡಿಹಳ್ಳಿ ಶ್ರೀಮಠದ ಶ್ರೀ.ಪ್ರಣವ ಸ್ವರೂಪಿ ಡಾ.ಅಭಿನವ ಮಲ್ಲಿಕಾರ್ಜುನ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನಾ ಕಾರ್ಯವನ್ನು ಮಾಡಿಸಿದ್ದಾರೆ.

ಚುನಾವಣೆ, ಪಕ್ಷ ಮುಂತಾದ ಕಾರಣಗಳಿಂದಾಗಿ ಜನರು ಬೇರೆ-ಬೇರೆ ಪಂಗಡಗಳಾಗುತ್ತಿರುವ ಈಡೇನಹಳ್ಳಿ ಗ್ರಾಮದ ಎಲ್ಲಾ ಜನರು ಒಟ್ಟಾಗಿ, ಹನುಮಂತ ದೇವರ ದೇವಾಲಯವನ್ನು ಒಟ್ಟಾಗಿ ನವೀಕರಿಸಿದ್ದಾರೆ ಮತ್ತು ಗ್ರಾಮದ ಜನರೆಲ್ಲಾ ಮತ್ತೊಮ್ಮೆ ಒಂದು ಕಡೆ ಸೇರಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟು ಇತರ ಗ್ರಾಮಗಳಿಗೆ ಮಾದರಿಯಾಗಿದ್ದಾರೆ.

ಗ್ರಾಮದ ಕುರಿತು : ಈಡೇನಹಳ್ಳಿ ಗ್ರಾಮ ಹಿಂದಿನ ಕಾಲದದಲ್ಲಿ ಕೋಟೆಯನ್ನು ಹೊಂದಿತ್ತು ಮತ್ತು ತಿಪಟೂರು ಪಟ್ಟಣಕ್ಕಿಂತ ಮುಂಚೆಯೇ ಇಲ್ಲಿ ಜನರು ನೆಲೆಸಿ ಸಮೃದ್ದಿ ಜೀವನ ನಡೆಸುತ್ತಿದ್ದರು ಎಂಬ ಮಾತುಗಳಿವೆ. ಈ ಗ್ರಾಮದಲ್ಲಿರುವ ಶ್ರೀ ರಂಗನಾಥ ದೇವಾಲಯ ಮತ್ತು ಕಲ್ಲೇಶ್ವರ ದೇವಾಲಯಗಳು ಗ್ರಾಮದ ಅಂದವನ್ನು ಹೆಚ್ಚಿಸಿರುವ ಜತೆಗೆ ಜನರ ಜೀವನದೊಂದಿಗೆ ಬೆರೆತು ಹೋಗಿವೆ.

Edenahalli

ಗ್ರಾಮದ ಜನರು ವಿಶೇಷವಾಗಿ ಆಚರಿಸುವ ದಸರಾ ಹಬ್ಬ ಗ್ರಾಮದ ದೊಡ್ಡ ಹಬ್ಬವಾಗಿದೆ. ಉದ್ಯೋಗ ನಿಮಿತ್ತ ಪರ ಊರುಗಳಲ್ಲಿ ನೆಲೆಸಿರುವ ಎಲ್ಲರನ್ನು ಗ್ರಾಮಕ್ಕೆ ಸೆಳೆಯುವ ಹಬ್ಬ ಎಂದರೆ ಅದು ದಸರಾ. ದಸರೆಯ ಸಂದರ್ಭದಲ್ಲಿ ಶ್ರೀ ರಂಗನಾಥನ ಅಂಬು ನಡೆಯುವುದು ಮತ್ತು ಬನ್ನಿ ಮರದ ಪೂಜೆ ನಡೆಯುತ್ತದೆ, ಗ್ರಾಮಸ್ಥರ ಸಂಭ್ರಮ ಮುಗಿಲು ಮುಟ್ಟಿರುತ್ತದೆ.

ಮನಸ್ತಾಪದಿಂದ ನಿಂತ ಆಚರಣೆಗಳು : ಸುಮಾರು ಒಂದು ದಶಕದ ಹಿಂದೆ ಗ್ರಾಮದಲ್ಲಿ ಕೆಲವರ ಮಧ್ಯೆ ಮನಸ್ತಾಪಗಳು ಬಂದು ಊರಿನ ಆಚರಣೆಗಳು ನಿಂತುಹೋಗಿದ್ದವು ನಂತರದ ತಲೆಮಾರಿನ ಹುಡುಗರು ಮತ್ತು ಹಿರಿಯರು ಎಲ್ಲರೂ ಸೇರಿ ಹಿಂದಿನ ಮನಸ್ತಾಪ ಮತ್ತು ವಿರೋಧಗಳನ್ನು ಸರಿಪಡಿಸಿ, ಗ್ರಾಮದ ಪೂರ್ವಜರ ಆಚರಣೆಗಳನ್ನು ಮತ್ತೆ ಆರಂಭಿಸಿದ್ದಾರೆ. ಈಗ ಹನುಮಂತ ದೇವಾಲಯವನ್ನು ನವೀಕರಿಸುವ ಕಾರ್ಯದಲ್ಲಿ ಗ್ರಾಮದ ಯುವಕರೆಲ್ಲಾ ಒಟ್ಟಾಗಿ ಗ್ರಾಮದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

English summary
Edenahalli villagers restored Hanuman temple with all community support. Edenahalli village in Tiptur taluk of Tumkur District in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X