ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಟ್ಕಳದ ಪಿಎಸ್ಐ ರೇವತಿ ರಾಜೀನಾಮೆ ನೀಡಿದ್ಯಾಕೆ?

|
Google Oneindia Kannada News

ಭಟ್ಕಳ, ಆಗಸ್ಟ್, 29: ಕರ್ನಾಟಕದಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿ ಹೊರಗೆ ಬಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಶಹರ ಠಾಣೆಯ ಪಿಎಸ್ಐ ರೇವತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಭಟ್ಕಳದ ಉದ್ಯಮಿಯೊಬ್ಬರು ನೀಡಿದ್ದ ಜೀವ ಬೆದರಿಕೆ ಇದೆ ಎಂಬ ದೂರುನ್ನು ದಾಖಲಿಸಿಕೊಳ್ಳದ ಆರೋಪದ ಮೇಲೆ ರೇವತಿ ಅವರನ್ನು ಅಮಾನತು ಮಾಡಲಾಗಿತ್ತು. ಇದಾದ ನಂತರ ರೇವತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Suspended Bhatkal PSI resigns from service

ಭಟ್ಕಳದ ಉದ್ಯಮಿ ಮೋಹ್ಸಿನ್ ಎಂಬುವರು ನೀಡಿದ್ದ ದೂರು ದಾಖಲಿಸಿಲ್ಲ ಎಂಬ ಆರೋಪ ರೇವತಿ ಅವರ ಮೇಲೆ ಕೇಳಿ ಬಂದಿತ್ತು. ಡಿಎಸ್ಪಿ ಅನುಪ್ ಶೆಟ್ಟಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣರಿಗೆ ಮಾಹಿತಿ ನೀಡಿದ್ದರು. ದೂರನ್ನು ಪರಿಶೀಲಿಸಿದ ವಂಶಿಕೃ್ಣ ಅವರು ಪಿಎಸ್ಐ ರೇವತಿಯವರನ್ನು ಅಮಾನತುಗೊಳಿಸಿ ಭಾನುವಾರ ಆದೇಶ ನೀಡಿದ್ದರು.

ಮೇಲಧಿಕಾರಿಗಳ ಕಿರುಕುಳ ಕಾರಣ?
ರೇವತಿ ರಾಜೀನಾಮೆ ಸಲ್ಲಿಸಲು ಮೇಲಧಿಕಾರಿಗಳ ಕಿರುಕುಳ ಕಾರಣ ಎಂಬ ಆರೋಪ ಸಹ ಕೇಳಿಬಂದಿದೆ. ಎಲ್ಲ ವಿವರಗಳನ್ನು ರೇವತಿ ರಾಜೀನಾಮೆ ಪತ್ರದಲ್ಲಿ ದಾಖಲಿಸಿದ್ದಾರೆ. ಅಲ್ಲದೇ ಇಲಾಖೆಯಲ್ಲಿ ನನಗೆ ಸೂಕ್ತ ಮಾರ್ಗದಶನವನ್ನು ಸಹ ನೀಡಲಾಗಿಲ್ಲ ಎಂಬ ಆರೋಪವನ್ನು ರೇವತಿ ಮಾಡಿದ್ದಾರೆ.

English summary
Uttara Kannada district, Bhatkal town police station sub-inspector Revati resigned after Uttara Kannada Superintendent of Police C. Vamshi Krishna suspended her on the charge of dereliction of duty. She submitted her resignation to the Circle Inspector of Police of Bhatkal Circle and went home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X