ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಮಾರ್ಚ್ 2 ರವರೆಗೆ ನಿಷೇಧಾಜ್ಞೆ ಮುಂದುವರಿಕೆ

|
Google Oneindia Kannada News

ಶಿವಮೊಗ್ಗ, ಫೆ.26: ಕೋಮು ಗಲಭೆ ನಂತರ ಶಿವಮೊಗ್ಗ ಶಾಂತವಾಗಿದ್ದರೂ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಮಾರ್ಚ್ 2ರ ವರೆಗೆ ನಿಷೇಧಾಜ್ಞೆ ವಿಸ್ತರಣೆಗೊಳಿಸಲಾಗಿದೆ ಎಂದು ಎಂದು ಐಜಿಪಿ ನಂಜುಂಡಸ್ವಾಮಿ ತಿಳಿಸಿದ್ದಾರೆ.

ಮಾರ್ಚ್ 6 ರಂದು ಹೋಳಿ ಹಬ್ಬ ನಡೆಯಲಿದ್ದು ನಿಷೆಧಾಜ್ಞೆಯಲ್ಲಿ ಕೆಲವೊಂದು ಸಡಿಲಿಕೆ ಮಾಡಲಾಗಿದೆ. ನಿಷೇಧಾಜ್ಞೆ ಮುಗಿಯುವರೆಗೆ ಅಂದರೆ ಮಾರ್ಚ್ 2 ರವರೆಗೆ ರಾತ್ರಿ 9.30ರಿಂದ ಮುಂಜಾನೆ ಐದು ಗಂಟೆವರೆಗೆ ನಗರದಲ್ಲಿ ದ್ವಿಚಕ್ರ ವಾಹನ ಓಡಾಟ ನಿಷೇಧಿಸಲಾಗಿದೆ. ಅತಿ ಅಗತ್ಯವಾದರೆ ಸಂಬಂಧಿಸಿದವರು ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಪಾಸ್ ಪಡೆಯಬೇಕು ಎಂದು ತಿಳಿಸಲಾಗಿದೆ.[ಶಿವಮೊಗ್ಗ ಗಲಭೆ: ವಿಶ್ವನಾಥ್ ಕೊಲೆ ಆರೋಪಿಗಳ ಬಂಧನ]

shivamogga

ರಾತ್ರಿ ಬೈಕ್ ಗಳಲ್ಲಿ ಮಾರಕಾಸ್ತ್ರ ಇಟ್ಟುಕೊಂಡು ಸಂಚರಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಹಗಲು ವೇಳೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದ್ದು ವ್ಯಾಪಾರ ವಹಿವಾಟಿಗೆ ತೊಂದರೆಯಿಲ್ಲ ಎಂದು ತಿಳಿಸಿದ್ದಾರೆ.

ನೇರವಾಗಿ ಗಲಭೆಯಲ್ಲಿ ಪಾಲ್ಗೊಂಡವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿದವರ ವಿರುದ್ಧವೂ ಸೈಬರ್ ಅಪರಾಧ ಅಡಿಯಲ್ಲಿ ತನಿಖೆ ಮಾಡಲಾಗುತ್ತದೆ ಎಂದು ಐಜಿಪಿ ತಿಳಿಸಿದ್ದಾರೆ.[ಶಿವಮೊಗ್ಗ ಗುಂಪು ಘರ್ಷಣೆಗೆ ಕಾರಣಗಳೇನು]

ನಿಷೇಧಾಜ್ಞೆ ನಿಯಮಾವಳಿಗಳು ಯಾವವು?
* ಬೆಳಗ್ಗೆ 6 ರಿಂದ ಸಂಜೆ 6 ವರೆಗೆ ನಿಷೇಧಾಜ್ಞೆ ಇರುವುದಿಲ್ಲ.
* ಅಂಗಡಿ ಮುಂಗಟ್ಟುಗಳನ್ನು ರಾತ್ರಿ 9 ಕ್ಕೆ ಮುಚ್ಚಬೇಕು
* ಚಿತ್ರಮಂದರಿಗಳು ಸಹ ರಾತ್ರಿ 9 ಗಂಟೆಗೆ ಪ್ರದರ್ಧಶಮ ಬಂದ್ ಮಾಡಬೇಕು.
* ರಾತ್ರಿ ದ್ವಿಚಕ್ರ ವಾಹನದಲ್ಲಿ ಓಡಾಡುವವರು ಸಂಬಂಧಿಸಿದ ಠಾಣೆಯಿಂದ ಪಾಸ್ ಪಡೆದಿರಬೇಕು
* ಬಸ್ ನಿಲ್ದಾಣಗಳಲ್ಲೂ ಪಾಸ್ ನೀಡಿಕೆ ವ್ಯವಸ್ಥೆ ಮಾಡಲಾಗಿದ್ದು ಪ್ರಯಾಣಿಕರ ಹಿತ ಕಾಪಾಡಲಾಗುತ್ತಿದೆ.

English summary
Shivamogga: Section 144 to continue in Shivamogga town till March 2nd an account of Holi ( Friday 6 March). Movement of 2 wheeler vehicles are restricted from 9.30 PM to 6 AM, said IGP Nanjundaswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X