ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಣ್ಣ ಬ್ರಿಗೇಡ್ ಕಥೆ ಮುಗೀತು, ಪದಾಧಿಕಾರಿಗಳು ಬಿಜೆಪಿಗೆ: ಈಶು

|
Google Oneindia Kannada News

ಶಿವಮೊಗ್ಗ್, ಜೂನ್ 12: ರಾಯಣ್ಣ ಬ್ರಿಗೇಡ್ ಸಂಘಟನೆಯ ಕಥೆ ಮುಗಿದಿದೆ. ಈ ಬಗ್ಗೆ ಸ್ವತಃ ಕೆಎಸ್ ಈಶ್ವರಪ್ಪನವರು ಮಾತು ಕೊಟ್ಟಿದ್ದಾರೆ. ಅವರು ಮಾತ್ರ ಬ್ರಿಗೇಡ್ ನಿಂದ ಹಿಂದೆ ಸರಿಯುತ್ತಿರುವುದಲ್ಲ. ಸಂಘಟನೆಯೇ ಕೊನೆಯಾಗಿದೆ.

ಈ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ಬ್ರಿಗೇಡ್ ನಿಂದ ಹಿಂದಕ್ಕೆ ಬಂದಿದ್ದೇನೆ. ಇನ್ನು ಬ್ರಿಗೇಡ್ ನ ಪದಾಧಿಕಾರಿಗಳು ಬಿಜೆಪಿ ಸೇರುವುದಕ್ಕೆ ವರಿಷ್ಠರು ಸಮ್ಮತಿಸಿದ್ದಾರೆ ಎಂದಿದ್ದಾರೆ.

[ಅಕ್ರಮ ಆಸ್ತಿ ಗಳಿಕೆ, ಈಶ್ವರಪ್ಪ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು]

Rayanna Brigade is closed chapter: KS Eshwarappa

ಅಷ್ಟೇ ಅಲ್ಲ, ಬ್ರಿಗೇಡ್ ನ ಮುಖಂಡರಿಗೆ ಬಿಜೆಪಿಯಲ್ಲಿ ಸೂಕ್ತವಾದ ಸ್ಥಾನಮಾನ ಕೂಡ ಕೊಡ್ತಾರಂತೆ. ಹಾಗಂತ ಅಮಿತ್ ಶಾ ಭರವಸೆ ಕೂಡ ನೀಡಿರುವುದಾಗಿ ಹೇಳಿದ್ದಾರೆ. ಇನ್ನು ಮುಂದೆ ಬಿಜೆಪಿ ಒಬಿಸಿ ಮೋರ್ಚಾ ಮೂಲಕ ಹಿಂದುಳಿದ ವರ್ಗದವರ ಸಂಘಟನೆ ಮಾಡುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಇಲ್ಲಿವರೆಗೆ ಈಶ್ವರಪ್ಪ ಅವರೇ ಹೇಳಿರುವ ಮಾಹಿತಿ. ಆದರೆ ರಾಜಕೀಯೇತರ ಸಂಘಟನೆಯಾಗಿದ್ದ ರಾಯಣ್ಣ ಬ್ರಿಗೇಡ್ ನ ಪದಾಧಿಕಾರಿಗಳು ಸಾರಾಸಗಟಾಗಿ ಬಿಜೆಪಿಗೆ ಸೇರಿಬಿಡ್ತಾರಾ? ಅಥವಾ ಬ್ರಿಗೇಡ್ ನ ನಿಲ್ಲಿಸಿದರೆ ಬಿಜೆಪಿಯಲ್ಲಿ ವ್ಯವಸ್ಥೆ ಮಾಡಿಕೊಡುವುದಾಗಿ ಈಶ್ವರಪ್ಪ ಮಾತು ಕೊಟ್ಟಿದ್ದರಾ ಎಂಬುದಷ್ಟೇ ಗೊತ್ತಾಗಬೇಕಿದೆ.
[ಕಾರ್ಯಕರ್ತನ ಮಾತಿಗೆ ಒಟ್ಟಿಗೆ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ ಬಿಎಸ್ ವೈ-ಈಶು]

ಇನ್ನು ಅಕ್ರಮ ಆಸ್ತಿ ಗಳಿಕೆ ಆರೋಪ ಮಾಡಿ, ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ ವಕೀಲ ವಿನೋದ್ ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ವಿನೋದ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದ್ದಾರೆ.

English summary
Rayanna Brigade is closed chapter. Iam anymore not a part of it, said by BJP leader KS Eshwarappa in Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X