ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ ಎಸ್‌ಪಿ ವರ್ಗಾವಣೆ ಖಂಡಿಸಿ ಪ್ರತಿಭಟನೆ

|
Google Oneindia Kannada News

ಶಿವಮೊಗ್ಗ, ಆಗಸ್ಟ್ 23 : ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಖಂಡಿಸಿ ನಗರದಲ್ಲಿ ಸೋಮವಾರ ಆಟೋ ಚಾಲಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕ ಸರ್ಕಾರ ಸೋಮವಾರ ಮೂವರು ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಶಿವಮೊಗ್ಗ ಎಸ್‌ಪಿ ರವಿ ಡಿ. ಚನ್ನಣ್ಣನವರ್‌ ಅವರನ್ನು ಮೈಸೂರು ಎಸ್‌ಪಿಯಾಗಿ ವರ್ಗಾವಣೆ ಮಾಡಿದ್ದು, ಮೈಸೂರು ಎಸ್‌ಪಿಯಾಗಿದ್ದ ಅಭಿನವ್‌ ಖರೆ ಅವರನ್ನು ಶಿವಮೊಗ್ಗ ಎಸ್‌ಪಿಯಾಗಿ ನೇಮಕ ಮಾಡಲಾಗಿದೆ. [ಶಿವಮೊಗ್ಗ ಎಸ್ಪಿ ಕೈಗೆ ಇನ್ಸ್ ಪೆಕ್ಟರ್ ಸಿಕ್ಕಿಬಿದ್ದದ್ದು ಹೇಗೆ?]

Ravi D Channannavar

ರವಿ ಡಿ. ಚನ್ನಣ್ಣನವರ್‌ ವರ್ಗಾವಣೆ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಆಟೋ ಚಾಲಕರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ನಗರದ ಖಾಸಗಿ ಬಸ್ ನಿಲ್ದಾಣ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಜನರ ಕಷ್ಟಕ್ಕೆ ಸ್ಪಂದಿಸುವ ಎಸ್‌ಪಿ ಅವರ ವರ್ಗಾವಣೆ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.[ತುಂಬಿ ಹರಿಯುವ ತುಂಗಾನದಿಯಲ್ಲಿ ಶಿವಮೊಗ್ಗ ಎಸ್ಪಿ ಸಾಹಸ]

ವಿಡಿಯೋ : ರವಿ ಡಿ. ಚನ್ನಣ್ಣನವರ್‌ ಅವರ ಸ್ಫೂರ್ತಿ ತುಂಬುವ ಮಾತುಗಳು

ಮಂಗಳವಾರವೂ ವಿವಿಧ ಸಂಘಟನೆಗಳು ಶಿವಮೊಗ್ಗದಲ್ಲಿ ರವಿ ಡಿ. ಚನ್ನಣ್ಣನವರ್‌ ವರ್ಗಾವಣೆ ಖಂಡಿಸಿ ಪ್ರತಿಭಟನೆ ನಡೆಸಲಿವೆ. ಎಸ್‌ಪಿ ವರ್ಗಾವಣೆ ಹಿಂದೆ ಜಿಲ್ಲೆಯ ಜನಪ್ರತಿನಿಧಿಗಳ ಕೈವಾಡವಿದೆ ಎಂದು ಜನರು ಆರೋಪ ಮಾಡುತ್ತಿದ್ದಾರೆ.

ವರ್ಗಾವಣೆಗೊಂಡ ಅಧಿಕಾರಿಗಳು

* ಸಿಐಡಿ ಎಸ್‌ಪಿ ಡಾ. ಡಿ.ಸಿ.ರಾಜಪ್ಪ - ಬೆಂಗಳೂರು ರೈಲ್ವೆ ಎಸ್‌ಪಿ
* ಮೈಸೂರು ಎಸ್‌ಪಿ ಅಭಿನವ್‌ ಖರೆ - ಶಿವಮೊಗ್ಗ ಎಸ್‌ಪಿ
* ಶಿವಮೊಗ್ಗ ಎಸ್‌ಪಿ ಎಸ್‌ಪಿ ರವಿ ಡಿ. ಚನ್ನಣ್ಣನವರ್‌ - ಮೈಸೂರು ಎಸ್‌ಪಿ

English summary
Auto drivers and other organizations members took out a rally in Shivamogga city on Monday August 22, 2016 condemning the transfer of Ravi D.Channannavar Shivamogga Superintendent of Police (SP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X