ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್‌ ನಿದ್ದೆ ಓಡಿಸಲು ಬಿಜೆಪಿಯಿಂದ 75 ಸಮಾವೇಶ

|
Google Oneindia Kannada News

ಶಿವಮೊಗ್ಗ, ಆಗಸ್ಟ್ 7 : ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ ಆತ್ಮಸ್ಥೈರ್ಯ ತುಂಬಲು ಹಾಗೂ ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸಲು ಕರ್ನಾಟಕ ಬಿಜೆಪಿ 75 ತಾಲೂಕುಗಳಲ್ಲಿ ಸಮಾವೇಶಗಳಲ್ಲಿ ಹಮ್ಮಿಕೊಂಡಿದೆ. ಆ.31ರಿಂದ ಸಮಾವೇಶಗಳು ಆರಂಭವಾಗಲಿವೆ.

ಶಿವಮೊಗ್ಗದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಈ ಕುರಿತು ಮಾಹಿತಿ ನೀಡಿದರು. ಈ ಸಮಾವೇಶದಲ್ಲಿ ರಾಜ್ಯದ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. [ಈಶ್ವರಪ್ಪ ಅವರು ಹೇಳಿದ ಕಥೆ ಓದಿ]

ks eshwarappa

'ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸರ್ಕಾರ ಮಲಗಿದ್ದು ಅದನ್ನು ಎಚ್ಚರಿಸಲು ಬಿಜೆಪಿಯಿಂದ 75 ತಾಲೂಕುಗಳಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಆ.31ರಿಂದ ಸೆಪ್ಟೆಂಬರ್ 14 ರವರೆಗೆ ಈ ಸಮಾವೇಶಗಳು ನಡೆಯಲಿವೆ. ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಜೊತೆಗೆ, ಸರ್ಕಾರಕ್ಕೆ ಎಚ್ಚರಿಕೆ ನೀಡಲು ಈ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ' ಎಂದರು. [ರೈತ ಆತ್ಮಹತ್ಯೆ, ಲೋಕಸಭೆಯಲ್ಲಿ ಯಡಿಯೂರಪ್ಪ ಘರ್ಜನೆ]

ಬರಪೀಡಿತ ತಾಲೂಕು ಘೋಷಣೆ ಮಾಡಿ : ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ ಆದ್ದರಿಂದ ಸರ್ಕಾರ ಕೂಡಲೇ ಎಷ್ಟು ತಾಲೂಕುಗಳು ಬರಪೀಡಿತವಾಗಿದೆ ಎನ್ನುವುದನ್ನು ಘೋಷಣೆ ಮಾಡಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.

ಬಂಧನ ಭೀತಿಯಿಂದ ರಾಜೀನಾಮೆ ಕೊಡುತ್ತಿಲ್ಲ : 'ಲೋಕಾಯುಕ್ತ ಸಂಸ್ಥೆ ಜನರ ನಂಬಿಕೆಯನ್ನು ಕಳೆದುಕೊಂಡಿದೆ ಎಂದು ಹೇಳಿದ ಈಶ್ವರಪ್ಪ ಅವರು, ರಾಜೀನಾಮೆ ಕೊಟ್ಟರೆ ಬಂಧನವಾಗುತ್ತೇನೆ ಎಂಬ ಭಯದಲ್ಲಿ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ರಾಜೀನಾಮೆ ಕೊಡುತ್ತಿಲ್ಲ' ಎಂದು ಈಶ್ವರಪ್ಪ ಆರೋಪಿಸಿದರು.

English summary
Legislative council leader of opposition KS Eshwarappa on Friday said, Karnataka BJP will organize 75 rallies in state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X