ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶರಾವತಿ ವಿದ್ಯುದಾಗಾರದಲ್ಲಿ ಬೆಂಕಿ, ವಿಡಿಯೋ ನೋಡಿ

|
Google Oneindia Kannada News

ಶಿವಮೊಗ್ಗ, ಫೆಬ್ರವರಿ 19 : ಜೋಗ ಸಮೀಪದ ಶರಾವತಿ ವಿದ್ಯುದಾಗಾರದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮೂವರು ಇಂಜಿನಿಯರ್ ಸೇರಿದಂತೆ 20 ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, 10 ಘಟಕಗಳ ವಿದ್ಯುತ್ ವಿತರಣಾ ಕೇಬಲ್‌ ಜಾಲ ಸುಟ್ಟು ಭಸ್ಮವಾಗಿದ್ದು, ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.

ಗುರುವಾರ ಸಂಜೆ 4.30ರ ಸುಮಾರಿಗೆ 220 ಕೆ.ವಿ. ಸಾಮರ್ಥ್ಯದ ಶರಾವತಿ ಲೈನ್-2ರಲ್ಲಿ ಶಾರ್ಟ್‌ ಸರ್ಕ್ಯೂಟ್‌ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಟರ್ಬೈನ್‌, ವಿದ್ಯುತ್ ಪರಿವರ್ತಕಗಳಿಗೆ ಬೆಂಕಿಯಿಂದಾಗಿ ಯಾವುದೇ ಹಾನಿ ಉಂಟಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. [ವಿದ್ಯುತ್ ಕಳ್ಳತನದ ಬಗ್ಗೆ ಮೆಸ್ಕಾಂ ಮೌನವೇಕೆ?]

dk shivakumar

'ಎಲ್ಲಾ 10 ಘಟಕಗಳ ವಿದ್ಯುತ್ ವಿತರಣಾ ಕೇಬಲ್‌ ಜಾಲ ಸುಟ್ಟು ಭಸ್ಮವಾಗಿದೆ. ಕೇಬಲ್‌ ಜಾಲ ಸರಿಪಡಿಸಲು ಸುಮಾರು 1 ತಿಂಗಳು ಬೇಕಾಗಬಹುದು. ಅಲ್ಲಿಯ ತನಕ ನಿತ್ಯ 1,035 ಮೆಗಾವಾಟ್‌ ಉತ್ಪಾದನೆ ಸ್ಥಗಿತಗೊಳ್ಳಲಿದೆ' ಎಂದು ಮುಖ್ಯ ಎಂಜಿನಿಯರ್‌ ಕೆ.ಆರ್‌.ಶಿವಾಜಿ ಹೇಳಿದ್ದಾರೆ. [ಸೌರಶಕ್ತಿಯಿಂದ ಮನೆ ಬೆಳಗಿಸಿದ ಮೈಸೂರಿನ 'ಭಕ್ತವತ್ಸಲ']

ನಿನ್ನೆ ಸಂಜೆ 4ಗಂಟೆ ಸುಮಾರಿಗೆ ಬೆಂಕಿ ಅವಗಡ ನಡೆದ ಶರಾವತಿ ವಿದ್ಯುದಾಗಾರ. ಘಟನೆಯಲ್ಲಿ ನಿಯಂತ್ರಣ ಕೊಠಡಿ ಸಂಪೂರ್ಣ ಭಸ್ಮವಾಗಿದೆ.

Posted by Karnataka Varthe on Friday, February 19, 2016

ಇಂದು ಸಚಿವರ ಭೇಟಿ : ಶರಾವತಿ ವಿದ್ಯುದಾಗಾರಕ್ಕೆ ಶುಕ್ರವಾರ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಲಿದ್ದಾರೆ. ಅಗ್ನಿ ಅವಘಡದಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ನಷ್ಟದ ಅಂದಾಜು ಶುಕ್ರವಾರ ಅಧಿಕೃತವಾಗಿ ತಿಳಿದುಬರಲಿದೆ. [ಕರ್ನಾಟಕದಲ್ಲಿ ವಿದ್ಯುತ್ ಕೊರತೆ : ಶಾಶ್ವತ ಪರಿಹಾರಗಳು]

24 ಪೈಸೆ ವೆಚ್ಚವಾಗುತ್ತದೆ : ರಾಜ್ಯದ ಬೇಡಿಕೆಯ ಶೇ 22.34 ರಷ್ಟು ವಿದ್ಯುತ್ ಈ ಕೇಂದ್ರದಿಂದ ಪೂರೈಕೆ ಯಾಗುತ್ತದೆ. ಇಲ್ಲಿ ಪ್ರತಿ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲು 24.18 ಪೈಸೆ ವೆಚ್ಚವಾಗುತ್ತದೆ. [ರಾಜ್ಯದ ವಿದ್ಯುತ್ ಸಮಸ್ಯೆ ಏಕೆ, ನಿವಾರಣೆ ಹೇಗೆ?]

ಶರಾವತಿ ವಿದ್ಯುದಾಗಾರಕ್ಕೆ ಹಾನಿಯಾದರೂ ಶರಾವತಿ ಕಣಿವೆಯಲ್ಲಿರುವ ಲಿಂಗನಮಕ್ಕಿ, ಮಹಾತ್ಮ ಗಾಂಧಿ, ಗೇರುಸೊಪ್ಪ ವಿದ್ಯುದಾಗಾರಗಳು ಕಾರ್ಯನಿರ್ವಹಣೆ ಮಾಡುತ್ತಿವೆ.

English summary
Fire accident at the Sharavathi hydroelectric plant near Jog Falls in Sagar taluk, Shivamogga district on Thursday. Accident occurred around 4.30 pm when around 20 workers were busy generating power in the second floor of the plant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X