ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ ಎಕ್ಸ್ ರೇ ಕೋಣೆವರೆಗೆ ಪತಿಯ ಕಾಲು ಹಿಡಿದು ಎಳೆದೊಯ್ದ ಪತ್ನಿ

By ಅನುಷಾ ರವಿ
|
Google Oneindia Kannada News

ಶಿವಮೊಗ್ಗ, ಜೂನ್ 2: ಬದುಕುವುದು ಸಾವಿಗಿಂತ ಕಷ್ಟವೇ ಎಂದೆನಿಸುವಂಥ ಘಟನೆ ಶಿವಮೊಗ್ಗದ ಮೆಗಾನ್ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಈ ಘಟನೆ ಬಗ್ಗೆ ವಿಡಿಯೋ ಹರಿದಾಡುತ್ತಿದ್ದು, ಹಿರಿಯ ಮಹಿಳೆಯೊಬ್ಬರು ತಮ್ಮ ಪತಿಯನ್ನು ಎಕ್ಸ್ ರೇ ಕೋಣೆಯೊಳಗೆ ಕರೆದೊಯ್ಯುತ್ತಿರುವ ರೀತಿ ಮನ ಕಲಕುವಂತಿದೆ.

ಆ ವಿಡಿಯೋದಲ್ಲಿರುವ ಮಹಿಳೆ ಹೆಸರು ಫಮೀದಾ. ಎಕ್ಸ್ ರೇ ಕೋಣೆಯೊಳಗೆ ಪತಿಯನ್ನು ಕರೆದೊಯ್ಯಬೇಕು, ಒಂದು ವ್ಹೀಲ್ ಛೇರೋ, ಸ್ಟ್ರೆಚರೋ ಕೊಡಿ ಎಂದು ಮೆಗಾನ್ ಆಸ್ಪತ್ರೆಯಲ್ಲಿ ಕೇಳಿಕೊಂಡಿದ್ದಾರೆ. ಆದರೆ ಸಿಬ್ಬಂದಿ ನಿರಾಕರಿಸಿದ್ದಾರೆ. ಆ ನಂತರ ನಡೆದ ಘಟನೆ ವಿಡಿಯೋ ಆಗಿದ್ದು, ಸರಕಾರಿ ಆಸ್ಪತ್ರೆಯ ದೈನೇಸಿ ಸ್ಥಿತಿಯನ್ನು ತೆರೆದಿಟ್ಟುತ್ತಿದೆ.[ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಛಾವಣಿ ಕುಸಿದು ಮೂರು ದಿನದ ಮಗುವಿಗೆ ಗಾಯ]

Denied a wheelchair, woman forced to drag ailing husband in Karnataka hospital

ಆಸ್ಪತ್ರೆ ಸಿಬ್ಬಂದಿಯ ಧೋರಣೆಯಿಂದ ಕಂಗೆಟ್ಟು, ತನ್ನ ಪತಿ ಅಮೀರ್ ಸಾಬ್ ರ ಕಾಲನ್ನು ಹಿಡಿದು ದರದರ ಎಕ್ಸ್ ರೇ ಕೋಣೆವರೆಗೆ ಎಳೆದೊಯ್ದಿದ್ದಾರೆ ಫಮೀದಾ. "ಈ ವಿಡಿಯೋ ಎರಡು ದಿನದ ಹಿಂದಿನದು. ನನ್ನ ಗಮನಕ್ಕೆ ಈ ಘಟನೆ ಬಂದಿದ್ದು, ಆಂತರಿಕ ತನಿಖೆಗೆ ಆದೇಶಿಸಿದ್ದೇನೆ. ಆಸ್ಪತ್ರೆಯಲ್ಲಿ ಸ್ಟ್ರೆಚರ್ ಅಥವಾ ವ್ಹೀಲ್ ಛೇರ್ ಗೆ ಕೊರತೆ ಇಲ್ಲ" ಎಂದು ಆಸ್ಪತ್ರೆ ನಿರ್ದೇಶಕ ಡಾ ಸುಶೀಲ್ ಕುಮಾರ್ ತಿಳಿಸಿದ್ದಾರೆ.['ಮೊದಲು ರೋಗಿಗಳಿಗೆ ಟ್ರೀಟ್ ಮೆಂಟ್ ನಂತರವೇ ಪೇಮೆಂಟ್']

ಅಂದಹಾಗೆ ಕರ್ನಾಟಕ ಸರಕಾರಿ ಆಸ್ಪತ್ರೆಗಳಲ್ಲಿ ಈ ರೀತಿಯ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಮೇ ಇಪ್ಪತ್ಮೂರರಂದು ಕೋಲಾರ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ಛಾವಣಿ ಕುಸಿದು ಐದು ದಿನದ ಮಗು ಹಾಗೂ ತಾಯಿಗೆ ಗಾಯವಾಗಿತ್ತು.

English summary
Tired by the apathy in a hospital in Karnataka's Shimoga, an aged couple was forced to fend for themselves. A video showing the woman drag her ailing husband to the X-ray room exposed the pathetic state of affairs in the Megan Government Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X