ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸಿದ್ದರಾಮಯ್ಯರಿಂದ ಹಿಂದೂ-ಮುಸ್ಲಿಮರ ಮಧ್ಯೆ ಬೆಂಕಿ ಹಚ್ಚುವ ಕೆಲಸ'

|
Google Oneindia Kannada News

ಶಿವಮೊಗ್ಗ, ಜುಲೈ 25: ಹಿಂದೂ-ಮುಸ್ಲಿಮರ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ-ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಆರೋಪ ಮಾಡಿದ್ದಾರೆ.

ಮಲೆನಾಡಿನಲ್ಲಿ ಈಗ ಮಳೆಯೋಗ, ಧುಮ್ಮಿಕ್ಕುತ್ತಿದೆ ಜೋಗಮಲೆನಾಡಿನಲ್ಲಿ ಈಗ ಮಳೆಯೋಗ, ಧುಮ್ಮಿಕ್ಕುತ್ತಿದೆ ಜೋಗ

ಸಮಾಜದ ಎಲ್ಲರನ್ನೂ ಸಮಾನವಾಗಿ ಕಾಣಬೇಕಾದ ಮುಖ್ಯಮಂತ್ರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಮತಗಳಿಕೆಗಾಗಿ ಮುಸ್ಲಿಮರ ಓಲೈಕೆಯಲ್ಲಿ ತೊಡಗಿದ್ದಾರೆ. ಈವರೆಗೂ ಕಾಂಗ್ರೆಸ್‌ ಮತ ಬ್ಯಾಂಕ್‌ ಆಗಿದ್ದ ಮುಸ್ಲಿಮರ ಮತಗಳು ಕೈತಪ್ಪುತ್ತಿವೆ ಎಂಬ ಭಯ ಸಿದ್ದರಾಮಯ್ಯರನ್ನು ಕಾಡುತ್ತಿದೆ ಎಂದು ಹೇಳಿದರು.

CM Siddaramaiah is dividing Hindu- Muslim: Eshwarappa

ಆರೆಸ್ಸೆಸ್, ಹಿಂದೂ ಸಮಾಜದ ಮುಖಂಡರ ಕೊಲೆಯಾಗುತ್ತಿದ್ದರೂ ಆರೋಪಿಗಳನ್ನು ರಕ್ಷಿಸಲಾಗುತ್ತಿದೆ. ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿಂದುತ್ವದ ಆಲೋಚನೆಯ ಅಧಿಕಾರಿಗಳನ್ನೂ ಹತ್ತಿಕ್ಕುವ ಮಾತಾಡುತ್ತಿದ್ದಾರೆ ಎಂದರು.

'ಸಿದ್ದರಾಮಯ್ಯ ಬತ್ತಿದ ಕೆರೆಗಳನ್ನು ಮಾರಲು ಮುಂದಾಗಿರುವುದು ಸರಿಯಲ್ಲ''ಸಿದ್ದರಾಮಯ್ಯ ಬತ್ತಿದ ಕೆರೆಗಳನ್ನು ಮಾರಲು ಮುಂದಾಗಿರುವುದು ಸರಿಯಲ್ಲ'

ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಬೇಡ್ಕರ್‌ ಸಮಾವೇಶ ದುರುಪಯೋಗ ಮಾಡಿಕೊಂಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಈಗ ಅವರಿಗೆ ಅಂಬೇಡ್ಕರ್ ನೆನಪಾಗುತ್ತಿದ್ದಾರೆ. ಇದೇ ಕಾಂಗ್ರೆಸ್ ನಾಯಕರು ಅಂದು ಅಂಬೇಡ್ಕರ್ ಅವರನ್ನೇ ಚುನಾವಣೆ ಯಲ್ಲಿ ಸೋಲಿಸಿದ್ದರು. ಅವರು ನಿಧನರಾದಾಗ ಅಂತ್ಯಸಂಸ್ಕಾರಕ್ಕೂ ದೆಹಲಿಯಲ್ಲಿ ಜಾಗ ನೀಡಲಿಲ್ಲ ಎಂದು ಟೀಕಿಸಿದರು.

ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್‌ಗೆ ದಲಿತರು, ಹಿಂದುಳಿದ ವರ್ಗದ ಜನರು ನೆನಪಾಗುತ್ತಾರೆ. ಮೊಸಳೆ ಕಣ್ಣೀರು ಸುರಿಸುತ್ತಾರೆ. ಹಿಂದುಳಿದ ವರ್ಗಗಳ ಆಯೋಗದ ವರದಿ ಇಂದಿಗೂ ಬಿಡುಗಡೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

English summary
CM Siddaramaiah is dividing Hindu- Muslim, alleged by BJP leader KS Eshwarappa in Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X