ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದ ರಾಜಾರಾಮ್ ಆಗಸದಲ್ಲಿ ಹಾರಿದ ಕಥೆ

By ಅನಂತಕೃಷ್ಣ
|
Google Oneindia Kannada News

ಅದು 70ರ ದಶಕದ ಮಾತು. ಭಾರತೀಯ ವಾಯುಪಡೆ ಬಗ್ಗೆ ಪತ್ರಿಕೆಗಳಲ್ಲಿ ಚಿಕ್ಕ ವರದಿ ಬಂದರೂ ಅದನ್ನು ಕತ್ತರಿಸಿ ಇಟ್ಟುಕೊಳ್ಳುವ ಹುಡುಗರ ಗುಂಪೊಂದು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿತ್ತು. ಚಿಕ್ಕ ವರದಿ ಒಬ್ಬ ಹುಡುಗನ ಕಣ್ತಪ್ಪಿದರೆ ಅದನ್ನು ಮತ್ತೊಬ್ಬರು ಕತ್ತರಿಸಿ ಸಂಗ್ರಹಿಸುತ್ತಿದ್ದರು.

ವಾಯುಪಡೆಗೆ ಸೇರಿ ಪೈಲೆಟ್ ಆಗಿ ವಿಮಾನ ಹಾರಿಸುವುದು ಆ ಹುಡುಗರ ಕಣ್ಣಲ್ಲಿ ತುಂಬಿದ್ದ ಕನಸು. ಪೈಲೆಟ್ ಆಗಿ ದೇಶ ಸೇವೆ ಮಾಡುವ ಜೊತೆಗೆ ಕುಟುಂಬಕ್ಕೂ ಆಧಾರವಾಗುವುದು ಹುಡುಗರ ಗುರಿ. ಕನಸಿನ ಬೆನ್ನತ್ತಿದ ಹುಡುಗರು ಅವರ ಗುರಿ ಸಾಧಿಸಿದ್ದಾರೆ, ಆಗಸದಲ್ಲಿ ಹಾರಾಡಿದ್ದಾರೆ.

Rajaram

ವಾಯುಪಡೆ ನೇಮಕಾತಿ ಜಾಹೀರಾತು ನೋಡಿದ್ದ ಹೊಸನಗರದ ಹುಡುಗರ ಗುಂಪು ಅದಕ್ಕೆ ಅರ್ಜಿ ಹಾಕಿತು. ಆಕಾಶದಲ್ಲಿ ಹಾರುವ ಕನಸಿನೊಂದಿಗೆ ದೆಹಲಿಯ ರೈಲು ಹತ್ತಲು ಸಿದ್ಧವಾಯಿತು. ಕನಸಿನ ಹುಡುಗರ ಗುಂಪಿನ ಒಬ್ಬ ಸದಸ್ಯ ರಾಜಾರಾಮ್, ಇಂದು ನಿವೃತ್ತರಾಗಲಿರುವ ಏರ್ ಮಾರ್ಷಲ್ ಎಚ್.ಬಿ.ರಾಜಾರಾಮ್.

ಸುಮಾರು 38 ವರ್ಷಗಳ ಸೇವೆಯ ನಂತರ ರಾಜಾರಾಮ್ ಇಂದು ವಾಯುಪಡೆಯಲ್ಲಿನ ಉನ್ನತ ಹುದ್ದೆಯಾದ Air Officer-In-Charge, Administration (AOA) ನಿಂದ ನಿವೃತ್ತರಾಗಲಿದ್ದಾರೆ. ರಾಜಾರಾಮ್ ಜತೆ ವಾಯುಪಡೆಗೆ ಸೇರಿದವರು ಇಂದು ನೇಪಾಳದಲ್ಲಿ ಭೂಕಂಪಕ್ಕೆ ಸಿಲುಕಿದವರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಆಕಾಶದೆತ್ತರದ ಕನಸು : ರಾಜಾರಾಮ್ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಅವರ ತಂದೆ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಕುಟುಂಬದ ಏಳು ಜನ ಮಕ್ಕಳ ಪೈಕಿ ಇವರು ಹಿರಿಯರು. ಆಕಾಶದಲ್ಲಿ ಹಾರಾಡುವ ಕನಸಿನ ಜೊತೆ ಕುಟುಂಬದ ಜವಾಬ್ದಾರಿಯೂ ರಾಜಾರಾಮ್ ಅವರ ಹೆಗಲ ಮೇಲಿತ್ತು.

1976ರಲ್ಲಿ ರಾಜಾರಾಮ್ ಮತ್ತು ಹುಡುಗರ ತಂಡ ವಾಯುಪಡೆ ನೇಮಕಾತಿ ಪರೀಕ್ಷೆ ಮತ್ತು ಸಂದರ್ಶನಕ್ಕಾಗಿ ದೆಹಲಿಗೆ ಹೋಗಲು ಕಾತುರದಲ್ಲಿ ಕಾಯುತ್ತಿತ್ತು. ಮನೆಗೆ ಬಂದ ನೇಮಕಾತಿ ಪತ್ರದಲ್ಲಿ ಪರೀಕ್ಷೆಯ ಸ್ಥಳ ಮೈಸೂರು ಎಂದು ದಾಖಲಾಗಿತ್ತು.

ತರಬೇತಿ ಮುಗಿಸಿ ರಾಜಾರಾಮ್ 1997ರಲ್ಲಿ ವಾಯುಪಡೆಗೆ ಸೇರ್ಪಡೆಗೊಂಡರು. ಮೊದಲ ಹಂತದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್‌ ಆಗಿ ಸೇವೆ ಸಲ್ಲಿಸಿದರು. ಏರ್‌ ಪೋರ್ಸ್ ಇನ್‌ ಚಾರ್ಚ್ ಆಗಿ ರಾಜಾರಾಮ್ ವಸತಿ, ವೈದ್ಯಕೀಯ ಸೇವೆ, ಹಣಕಾಸು, ಶಿಕ್ಷಣ, ಕಾನೂನು, ಕ್ರೀಡೆ ಮುಂತಾದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರು.

ರಾಜಾರಾಮ್ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುವಾಗ ಭಾರತದ ಶಾಂತಿ ರಕ್ಷಕ ದಳ (ಐಪಿಕೆಎಫ್‌) ಬಗ್ಗೆ ಮಾತನಾಡುವುದನ್ನು ಮರೆಯಲಿಲ್ಲ. ಹಲವಾರು ಘಟನೆಗಳ ಜೊತೆ ಶಾಂತಿ ರಕ್ಷದ ದಳವನ್ನು ಶ್ರೀಲಂಕಾಕ್ಕೆ ಕಳುಹಿಸಿದ್ದು ಸವಾಲಿನ ಕೆಲಸವಾಗಿತ್ತು ಎಂದು ರಾಜಾರಾಮ್ ವಿವರಿಸಿದರು.

English summary
In the early 70s, a young man and his handful of friends made a habit of cutting and keeping every bit of news that appeared on the Indian Air Force (IAF) in the local dailies. Among them Rajaram, Shivamogga’s Rajaram, now Air Marshal H.B.Rajaram, will land his IAF flight after 38 years of eventful mission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X