ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಬ್ರವರಿ 27ರಂದು ಸಂಜಯ್ ದತ್ ಗೆ ಜೈಲಿನಿಂದ ಬಿಡುಗಡೆ

By Mahesh
|
Google Oneindia Kannada News

ಮುಂಬೈ, ಜ.06: 1993ರ ಮುಂಬೈ ಸರಣಿ ಸ್ಫೋಟದ ಆರೋಪ ಹೊತ್ತು ಜೈಲುವಾಸಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ಅವರು ಅವಧಿಗೆ ಮುನ್ನ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಕಂಡು ಬಂದಿದೆ. ಸನ್ನಡತೆ ಆಧಾರದ ಮೇಲೆ ಸಂಜಯ್ ದತ್ ಅವರನ್ನು ಫೆಬ್ರವರಿ 27ರಂದು ಬಿಡುಗಡೆಯಾಗಲಿದ್ದಾರೆ ಎಂಬ ಸುದ್ದಿ ಬಂದಿದೆ.

56 ವರ್ಷ ವಯಸ್ಸಿನ ಸಂಜಯ್ ದತ್ ಅವರು ಸದ್ಯ ಪುಣೆಯ ಯೆರವಾಡಾ ಜೈಲಿನಲ್ಲಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಅವರ ಜೈಲುವಾಸದ ಅವಧಿ ಮುಕ್ತಾಯವಾಗಲಿದೆ. [ಮುಂಬೈ ಸರಣಿ ಸ್ಫೋಟದ ಹಿನ್ನೋಟ ]


ಕಳೆದ ವರ್ಷ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2013ರಲ್ಲಿ ಕ್ಷಮಾದಾನ ಕೋರಿ ಸಂಜಯ್ ದತ್ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತು. ಆದರೆ, ಮೇ 2013 ರಿಂದ 2014ರ ಅವಧಿಯಲ್ಲಿ ದತ್ ಅವರು ಸುಮಾರು 118 ದಿನಗಳ ಕಾಲ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದರು. [ಭಾರತದಲ್ಲಿ ಸಂಭವಿಸಿದ ಪ್ರಮುಖ ಬಾಂಬ್ ಸ್ಫೋಟಗಳು]

ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಕಾರಣಕ್ಕೆ ನಟ ಸಂಜಯ್‌ದತ್‌ ಅವರಿಗೆ ಮುಂಬೈನ ಟಾಡಾ ನ್ಯಾಯಾಲಯ ಮೂರೂವರೆ ವರ್ಷ ಜೈಲು ಶಿಕ್ಷೆ ವಿಧಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರಕರಣದಲ್ಲಿ ಅಬು ಸಲೇಂ ಜತೆಗೆ ರಿಯಾಜ್ ಸಿದ್ದಿಕಿ , ಕರೀಂ ಉಲ್ಲಾ ಖಾನ್, ಫೆರೋಜ್ ಅಬ್ದುಲ್ ರಸೀದ್, ತಾಹಿರ್ ಮರ್ಚೆಂಟ್ ಮತ್ತು ಮುಸ್ತಫ ಜೋಸಾ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.[ಸಂಜಯ್ ದತ್‌ಗೆ ಕ್ಷಮಾದಾನ ಏಕೆ ಸಿಗಲಿಲ್ಲ?]

ಸಂಜಯ್ ದತ್‌ ಅವರಿಗೆ ಎರಡು ಎಕೆ-47 ಬಂದೂಕು, ಗ್ರಾನೈಡ್ ಬಾಂಬ್‌ಗಳನ್ನು ಪೂರೈಕೆ ಮಾಡಿರುವ ಆರೋಪ ನಿಜವಲ್ಲ. ನಾನು ಯಾವುದೇ ಸ್ಫೋಟಕ ವಸ್ತುಗಳನ್ನು ನೀಡಿರಲಿಲ್ಲ ಎಂದು ಟಾಡಾ ನ್ಯಾಯಾಲಯದ ಮುಂದೆ ಅಬು ಸಲೇಂ ನೀಡಿದ ಹೇಳಿಕೆ ಸಂಜಯ್ ದತ್ ಗೆ ವರವಾಗಿ ಪರಿಣಮಿಸಿತು.

1993ರ ಸರಣಿ ಸ್ಫೋಟದಲ್ಲಿ 257ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು, 750ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಮೂಲಗಳ ಪ್ರಕಾರ 103 ದಿನಗಳಿಗೂ ಮುನ್ನ ಸಂಜಯ್ ದತ್ ಅವರು ಬಿಡುಗಡೆಯಾಗುತ್ತಿದ್ದಾರೆ. ಫೆ.25ಕ್ಕೆ ಬಿಡುಗಡೆ ಮಾಡುವ ಸಾಧ್ಯತೆಯಿದ್ದರೂ ಪೆರೋಲ್ ಮೇಲೆ ಅಧಿಕ ಕಾಲ ಕಳೆದ ದತ್ ಅವರು ಫೆ.27ರ ತನಕ ಕಾಯಬೇಕಿದೆ.
(ಒನ್ ಇಂಡಿಯಾ ಸುದ್ದಿ)

English summary
Actor Sanjay Dutt, jailed in an arms case related to the 1993 Mumbai blasts, will be released on February 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X