ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಟ್ಟುಹಬ್ಬದ ದಿನ(ಜುಲೈ 30)ದಂದೇ ಯಾಕೂಬ್ ಗೆ ಗಲ್ಲು ಶಿಕ್ಷೆ

By Mahesh
|
Google Oneindia Kannada News

ಮುಂಬೈ, ಜುಲೈ 21: 1993ರ ಸರಣಿ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ ಯಾಕೂಬ್ ಅಬ್ದುಲ್ ರಜಾಕ್ ಮೆಮನ್ ಗೆ ಜುಲೈ 30ರಂದು ಗಲ್ಲಿಗೇರಿಸಲು ಇದ್ದ ಅಡ್ಡಿ ದೂರಾಗಿದೆ. ಮೆಮನ್ ಸಲ್ಲಿಸಿದ್ದ ಕ್ಯೂರೇಟರ್ ಅರ್ಜಿ ಸುಪ್ರೀಂಕೋರ್ಟಿನಲ್ಲಿ ಮಂಗಳವಾರ ವಜಾಗೊಂಡಿದೆ. ಜುಲೈ 30-ಮೆಮನ್ ಹುಟ್ಟುಹಬ್ಬದ ದಿನಾಂಕವಾಗಿದ್ದು, ಅಂದೇ ಆತ ನೇಣಿಗೇರಬೇಕಿದೆ.

ಮಹಾರಾಷ್ಟ್ರದ ನಾಗ್ಪುರ ಜೈಲಿನಲ್ಲಿ ಜುಲೈ 30ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೇರಿಸಲು ಮುಹೂರ್ತ ಫಿಕ್ಸ್ ಆಗಿದೆ. 1993ರಲ್ಲಿ ನಡೆದಿದ್ದ ಮುಂಬೈ ಸರಣಿ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ವಿಶೇಷ ಟಾಡಾ ನ್ಯಾಯಾಲಯ ಮೆಮನ್ ಸೇರಿದಂತೆ 10 ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. [1993ರ ಮುಂಬೈ ಸ್ಫೋಟ 2 ದಶಕದ ನಂತರ ತೀರ್ಪು]

ಮರಣದಂಡನೆ ಶಿಕ್ಷೆ ಪ್ರಶ್ನಿಸಿ ಮೆಮೊನ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಏಪ್ರಿಲ್ 9, 2015 ರಂದು ಅರ್ಜಿ ತಿರಸ್ಕರಿಸಿತ್ತು. [ಗಲ್ಲಿಗೇರಿಕೆ ಎಂಬ ಡೆಡ್ಲಿ ಪ್ರೊಸೀಜರ್]

Yakub Memon

ನಂತರ ರಾಷ್ಟ್ರಪತಿಗಳಿಗೆ ಕ್ಷಮಾದಾನ ನೀಡುವಂತೆ ಮೆಮನ್ ಬೇಡಿಕೊಂಡಿದ್ದ ಅರ್ಜಿ ಕೂಡಾ ಜೀವದಾನ ನೀಡಲಿಲ್ಲ. ಈಗ ಕ್ಯೂರೇಟರ್ ಅರ್ಜಿ ಕೂಡಾ ವಜಾಗೊಂಡಿದ್ದು, ಮೆಮನ್ ಗಲ್ಲಿಗೇರುವುದು ಖಚಿತವಾಗಿದೆ.

ಮೌನಕ್ಕೆ ಶರಣಾದ ಯಾಕೂಬ್: ಮಹಾರಾಷ್ಟ್ರ ಸರ್ಕಾರ ಕಳೆದ ವಾರ ಗಲ್ಲಿಗೇರಿಸುವ ದಿನಾಂಕ ಪ್ರಕಟಿಸುತ್ತಿದ್ದಂತೆ ಯಾಕೂಬ್ ಮೌನಕ್ಕೆ ಶರಣಾಗಿದ್ದಾನೆ. ತನ್ನ ವಕೀಲರೊಡನೆ ಕೂಡಾ ಮಾತನಾಡುತ್ತಿಲ್ಲ.

ರಾಷ್ಟ್ರಪತಿಗಳಿಂದ ಕ್ಷಮಾದಾನ ಅರ್ಜಿ ತಿರಸ್ಕಾರಗೊಂಡ ಮೇಲೆ ಮರಣದಂಡನೆ ಶಿಕ್ಷೆ ರದ್ದು ಕೋರಿ ಸುಪ್ರೀಂಕೋರ್ಟಿನಲ್ಲಿ ಕ್ಯೂರೇಟರ್ ಅರ್ಜಿ ಸಲ್ಲಿಸಿದ್ದು ಬಿಟ್ಟರೆ ಯಾಕೂಬ್ ಬೇರೆ ಯಾವುದೇ ದಾರಿ ಇರಲಿಲ್ಲ. ಈಗ ಇದ್ದ ಏಕೈಕ ದಾರಿಯೂ ಮುಚ್ಚಿದೆ. ಈಗಾಗಲೇ ಆತನ ಕುಟುಂಬಕ್ಕೆ ಗಲ್ಲುಶಿಕ್ಷೆ ಬಗ್ಗೆ ತಿಳಿಸಲಾಗಿದೆ ಎಂದು ನಾಗ್ಪುರ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನಲ್ಲಿ 1993 ಮಾರ್ಚ್ 12 ನಡೆದಿದ್ದ ಸರಣಿ ಬಾಂಬ್ ಸ್ಫೋಟದಲ್ಲಿ 257 ಮಂದಿ ಮೃತಪಟ್ಟು, 713 ಮಂದಿ ಗಾಯಗೊಂಡಿದ್ದರು. ಸಿಬಿಐ ಇದರ ತನಿಖೆ ನಡೆಸಿ ದಾವೂದ್ ಇಬ್ರಾಹಿಂ ಸೇರಿದಂತೆ ಹಲವರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು.

ಟೈಗರ್ ಮೆಮನ್ ನ ಸೋದರನಾದ ಯಾಕೂಬ್ ಮೆಮನ್(53) ಚಾರ್ಟೆಡ್ ಅಕೌಂಟೆಂಟ್ ಕೆಲಸ ಮಾಡುತ್ತಿದ್ದ. ತನ್ನ ಅಣ್ಣನಿಗೆ ಈತ ಭಯೋತ್ಪಾದನೆಗೆ ಸಹಕಾರಿಯಾಗಿದ್ದ ಎಂದು ಪೊಲೀಸರು ಈತನನ್ನು 1994ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ಬಂಧಿಸಲಾಗಿತ್ತು. (ಒನ್ ಇಂಡಿಯಾ ಸುದ್ದಿ)

English summary
Yakub Memon will be hanged on July 30th as the Supreme Court rejected his curative petition. The Maharashtra government had indicated last week that Memon who was convicted for his role in the 1993 serial would be hanged at the Nagpur jail on July 30th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X