ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಜ್ರಿವಾಲ್ ಗೆ ನಡುಕ ಹುಟ್ಟಿಸುತ್ತಿರುವ ನೂಪುರ್

By Mahesh
|
Google Oneindia Kannada News

ನವದೆಹಲಿ, ಜ.30: ದೆಹಲಿ ಚುನಾವಣೆ ಕಣ ರಂಗೇರುತ್ತಿದ್ದಂತೆ ಆಮ್ ಆದ್ಮಿ ಪಕ್ಷ ಹಾಗೂ ಬಿಜೆಪಿ ನಡುವಿನ ವಾಕ್ಸಮರ ಜೋರಾಗುತ್ತಿದೆ. ಸಮೀಕ್ಷೆಗಳ ಸರಮಾಲೆಯನ್ನು ಮತದಾರ ಕುತೂಹಲದಿಂದ ವೀಕ್ಷಿಸುತ್ತಿದ್ದಾನೆ. ಇದೆಲ್ಲದರ ಜೊತೆಗೆ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮಣಿಸಲು ಬಿಜೆಪಿ ಬಳಸುತ್ತಿರುವ ಯುವ ಅಸ್ತ್ರ ನೂಪುರ್ ಶರ್ಮ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಅರವಿಂದ್ ಕೇಜ್ರಿವಾಲ್ ವಿರುದ್ಧ ಹೊಸ ಮುಖವನ್ನು ಬಿಜೆಪಿ ಏಕೆ ತಂದಿದೆ ಎಂಬುದು ಇನ್ನೂ ಅರ್ಥವಾಗಿಲ್ಲ. ಇತ್ತೀಚೆಗೆ ಬಿಜೆಪಿ ಸೇರಿದ ಶಾಜಿಯಾ ಇಲ್ಮಿ ಅಥವಾ ದೆಹಲಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಅವರನ್ನು ಏಕೆ ಕೇಜ್ರಿವಾಲ್ ವಿರುದ್ಧ ನಿಲ್ಲಿಸಿಲ್ಲ ಎಂಬ ಮಾತುಗಳು ಸಾಮಾನ್ಯವಾಗಿ ಕೇಳಿ ಬಂದಿವೆ.

ಇವರಲ್ಲದೆ, ದೆಹಲಿಯಲ್ಲಿ ಡಾ. ಹರ್ಷವರ್ಧನ್, ಮಹೇಶ್ ಗಿರಿ, ವಿಜಯ್ ಗೋಯಲ್ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸತೀಶ್ ಉಪಾಧ್ಯಾಯ ಅವರು ಕೂಡಾ ಸಮರ್ಥ ಎದುರಾಳಿಯಾಗಬಹುದಿತ್ತು.

Nupur Sharma?

ಅದರೆ, ಈಗಷ್ಟೇ ವ್ಯಾಸಂಗ ಮುಗಿಸಿ ಬಂದಿರುವ ನೂಪುರ್ ಶರ್ಮ ಅವರು ಅರವಿಂದ್ ರಷ್ಟೇ ಶೈಕ್ಷಣಿಕವಾಗಿ, ರಾಜಕೀಯವಾಗಿ ಸಮರ್ಥ ಅಭ್ಯರ್ಥಿಯಾಗಿದ್ದಾರೆ.

ಹೀಗಾಗಿ ಬಿಜೆಪಿ ಯುವ ಮೋರ್ಚಾದ ನಾಯಕಿ ನೂಪುರ್ ಅವರ ರಾಜಕೀಯ ಭವಿಷ್ಯಕ್ಕೆ ಉತ್ತಮ ವೇದಿಕೆ ಇದಾಗಿದ್ದು, ಒಂದು ವೇಳೆ ಸೋತರೂ ಕೂಡಾ ಸಮರ್ಥ ಎದುರಾಳಿ ವಿರುದ್ಧ ಸೋಲು ಅನುಭವಿಸಿದಂತಾಗುತ್ತದೆ ಎಂಬ ಲೆಕ್ಕಾಚಾರ ಚಾಣಕ್ಷ ಅಮಿತ್ ಶಾ ಅವರದ್ದಾಗಿದೆ.ಅಲ್ಲದೆ, ನೂಪುರ್ ಪ್ರಚಾರ ವೈಖರಿ ಅರವಿಂದ್ ಅವರಿಗೂ ತಕ್ಕಮಟ್ಟಿನ ಹೊಡೆತ ನೀಡುತ್ತಿದೆಯಂತೆ. ನೂಪುರ್ ಶರ್ಮಾ ಹಿನ್ನೆಲೆ ಏನು? ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ:

ಶೈಕ್ಷಣಿಕ ಹಿನ್ನೆಲೆ:
* ಎಲ್ಎಲ್ ಎಂ(ಅಂತಾರಾಷ್ಟ್ರೀಯ ವ್ಯಾಪಾರ ಕಾನೂನು), ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್, 2011
* ಎಲ್ಎಲ್ ಬಿ, ಫ್ಯಾಕಲ್ಟಿ ಆಫ್ ಲಾ, ದೆಹಲಿ ವಿಶ್ವವಿದ್ಯಾಲಯ, 2010
* ಬಿಎ ಆನರ್ಸ್ (ಎಕಾನಾಮಿಕ್ಸ್), ಹಿಂದೂ ಕಾಲೇಜ್, ದೆಹಲಿ ವಿಶ್ವವಿದ್ಯಾಲಯ, 2006
* ದೆಹಲಿ ಪಬ್ಲಿಕ್ ಸ್ಕೂಲ್, ಮಥುರಾ ರಸ್ತೆ, 2003

Who is Arvind Kejriwals rival Nupur Sharma?

ರಾಜಕೀಯ ಹಿನ್ನೆಲೆ:
* ಬಿಜೆಪಿ ಅಭ್ಯರ್ಥಿ, ನವದೆಹಲಿ ಅಸೆಂಬ್ಲಿ ಕ್ಷೇತ್ರ
* ರಾಷ್ಟೀಯ ಮಾಧ್ಯಮ ಉಸ್ತುವಾರಿ, ಭಾರತೀಯ ಜನತಾ ಯುವ ಮೋರ್ಚಾ(ಬಿಜೆವೈಎಂ)
* ಬಿಜೆಪಿ ದೆಹಲಿ ಘಟಕದ ಕಾರ್ಯಕಾರಿ ಸಮಿತಿ ಸದಸ್ಯೆ
* ಬಿಜೆಪಿ ಯುವ ಕಾರ್ಯಕಾರಿ ಸಮಿತಿ ಸದಸ್ಯೆ
* ರಾಷ್ತ್ರೀಯ ಯುವ ಕಾರ್ಯಕಾರಿ ಸಮಿತಿ ಸದಸ್ಯೆ
* ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಯೂನಿಯನ್ ಮಾಜಿ ಅಧ್ಯಕ್ಷೆ
* ಟೀಚ್ ಫಾರ್ ಇಂಡಿಯಾದ ರಾಯಭಾರಿ

ಪ್ರಶಸ್ತಿ, ಗೌರವ:
* ಟೈಮ್ಸ್ ಆಫ್ ಇಂಡಿಯಾ ಗಣರಾಜ್ಯೋತ್ಸವ ವಿಶೇಷ ಸಂಚಿಕೆಯಲ್ಲಿ ಅತಿಥಿ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದರು.
* ಹಿಂದೂಸ್ತಾನ್ ಟೈಮ್ಸ್ 2009ರ ಮಾರ್ಚ್ ನಲ್ಲಿ ದೇಶದ ಸ್ಪೂರ್ತಿದಾಯಕ ಮಹಿಳೆಯರ ಪಟ್ಟಿಯಲ್ಲಿ ನೂಪುರ್ ಅವರನ್ನು ಹೆಸರಿಸಿತ್ತು.

ಚುನಾವಣೆ ಬಗ್ಗೆ ನೂಪುರ್: ನಾನು ಇಲ್ಲಿ ಬಲಿ ಕಾ ಬಕ್ರಾ ಆಗಲು ಬಂದಿಲ್ಲ. ಕೇಜ್ರಿವಾಲ್ ಚುನಾವಣೆ ಗೆದ್ದು ಓಡಿ ಹೋದವರು. ಜನಕ್ಕೆ ಅವರ ಆಡಳಿತ ವೈಖರಿ ಚೆನ್ನಾಗಿ ಅರ್ಥವಾಗಿದೆ. ಚುನಾವಣೆ ಯಿಂದ ಚುನಾವಣೆಗೆ ಹಾರುವ ಮಂಗ ನಾನಲ್ಲ. ಅದು ಯಾರು ಎಂದು ಎಲ್ಲರಿಗೂ ಗೊತ್ತಿದೆ. ನಂಬಿಕೆ ದ್ರೋಹ ಮಾಡಿದವರಿಗೆ ಜನರೇ ಪಾಠ ಕಲಿಸುತ್ತಾರೆ.

English summary
Even if Arvind Kejriwal fall flat on his face during the upcoming Delhi Assembly elections, he should bask in pride for his young, dynamic opponent-Nupur Sharma from BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X