ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆಯಲ್ಲಿ ಅಸಹಿಷ್ಣುತೆ : ರಾಜನಾಥ್ vs ಖರ್ಗೆ

By Mahesh
|
Google Oneindia Kannada News

ನವದೆಹಲಿ, ನ. 27: ದೇಶದ ಸಂವಿಧಾನದ ರೂವಾರಿಯಾಗುವ ಮೂಲಕ ಬಿ.ಆರ್. ಅಂಬೇಡ್ಕರ್ ಭಾರತಕ್ಕಾಗಿ ''ಬೆಸೆಯುವ ಶಕ್ತಿ''ಯೊಂದನ್ನು ಸೃಷ್ಟಿಸಿದರು ಎಂದು ಗೃಹ ಸಚಿವ ರಾಜ್‌ನಾಥ್ ಸಿಂಗ್ ಗುರುವಾರ ಹೇಳಿದರು.

ಅದರೆ, ಸದನದಲ್ಲಿ ಮಾತನಾಡುವಾಗ ಮೂಲ ಸಂವಿಧಾನದಲ್ಲಿ 'ಜಾತ್ಯತೀತ 'ಶಬ್ದವೇ ಇರಲಿಲ್ಲ ಎಂದು ಹೇಳಿದ್ದು ಕೇಳಿಸಿಕೊಂಡ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೆಂಡಾಮಂಡಲವಾದರು. ರಾಜನಾಥ್ ಸಿಂಗ್ ಅವರಿಗೆ ಖರ್ಗೆ ಅವರು ನೀಡಿದ ಖಡಕ್ ಉತ್ತರ ಹೇಗಿತ್ತು ವಿಡಿಯೋದಲ್ಲಿ ನೋಡಿ...

ಅಂಬೇಡ್ಕರ್‌ರ 125ನೇ ಜನ್ಮ ವಾರ್ಷಿಕ ದಿನದ ಭಾಗವಾಗಿ ಸಂವಿಧಾನಕ್ಕೆ ಬದ್ಧತೆ ಎಂಬ ವಿಷಯದ ಕುರಿತು ಚರ್ಚಿಸಲು ಏರ್ಪಡಿಸಲಾದ ಎರಡು ದಿನಗಳ ಅವಯ ಸಂಸತ್ತಿನ ವಿಶೇಷ ಅವೇಶನದಲ್ಲಿ ಲೋಕಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

Rajnath Singh Vs Mallikarjuna Kharge

ಅಸಹಿಷ್ಣುತೆ ವಿರುದ್ಧ ಅಮೀರ್ ಖಾನ್ ನೀಡಿದ ಹೇಳಿಕೆಯನ್ನು ರಾಜ್‌ನಾಥ್ ಅವರು ಪರೋಕ್ಷವಾಗಿ ಟೀಕಿಸಿದರು. 'ಅಂಬೇಡ್ಕರ್ ತಾರತಮ್ಯಗಳನ್ನು ಅನುಭವಿಸಿದಾಗಲೂ ದೇಶ ಬಿಟ್ಟು ಹೋಗುವುದಾಗಿ ಎಂದೂ ಹೇಳಲಿಲ್ಲ'ಎಂದರು.

ಇದಕ್ಕೆ ಪ್ರತಿಯಾಗಿ ಮಲ್ಲಿಕಾರ್ಜುನ್ ಖರ್ಗೆ ಅವರು ಎದ್ದು ನಿಂತು 'ಡಾ. ಅಂಬೇಡ್ಕರ್ ಮತ್ತು ನಾವು ಈ ದೇಶದ ಪ್ರಜೆಗಳು. ಆರ್ಯರು ಹೊರಗಿನಿಂದ ಬಂದವರು. ನಾವು ಈ ನೆಲದ ಮೂಲ ನಿವಾಸಿಗಳು. ಐದು ಸಾವಿರಾರು ವರ್ಷಗಳ ಕಾಲ ಅವಮಾನವನ್ನು ಎದುರಿಸಿದ ಹೊರತಾಗಿಯೂ ನಾವಿಲ್ಲಿದ್ದೇವೆ. ಹಾಗೂ ಈ ದೇಶದಲ್ಲಿ ವಾಸಿಸುವುದನ್ನು ಮುಂದುವರಿಸುತ್ತೇವೆ ಎಂದು ತಿರುಗೇಟು ನೀಡಿದರು.

ಖರ್ಗೆ ಹೇಳಿದ ಪದ ಡಿಲೀಟ್: ಮೋದಿ ಸರಕಾರವು ಸಂವಿಧಾನದ ಮರು ವಿಮರ್ಶೆಗೆ ಮುಂದಾದರೆ ರಕ್ತಪಾತ ಸಂಭವಿಸಲಿದೆ ಎಂದು ಗುಡುಗಿದ್ದಾರೆ. ಅದರ ಬೆನ್ನಿಗೇ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಖರ್ಗೆ ಬಳಸಿದ 'ರಕ್ತ ಪಾತ' ಶಬ್ದವನ್ನು ಕಡತದಿಂದ ಅಳಿಸುವಂತೆ ಆದೇಶಿಸಿದರು.

ಸರಕಾರವು ಜಾತ್ಯತೀತ ಮತ್ತು ಸಮಾಜವಾದಿ ಎಂಬ ಪದಗಳನ್ನು ಸಂವಿಧಾನದಿಂದ ತೆಗೆದು ಹಾಕುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿತು. ಇದೇ ಮಾತನ್ನು ಪ್ರಧಾನಿ ಮೋದಿ ಅವರು ಶುಕ್ರವಾರ ತಮ್ಮ ಭಾಷಣದಲ್ಲಿ ಹೇಳಿದರು.

ಖರ್ಗೆ ಅವರ ಹೇಳಿಕೆಗೆ ಭಾರಿ ಪ್ರತಿಕ್ರಿಯೆಗಳು ಬಂದಿದ್ದು, ಆರ್ಯರು, ದ್ರಾವಿಡರು, ಅಂಬೇಡ್ಕರ್ ಅವರ ಪಾತ್ರ, ಇಂಗ್ಲೀಷರು ನಮ್ಮನ್ನು ಆಳಲು ಬರುವ ಎಷ್ಟೋ ಮುಂಚೆ ನಾವು ನಾಗರಿಕತೆಯ ತುತ್ತತುದಿ ಮುಟ್ಟಿದ್ದೆವು ಎಂದು ಸಾರ್ವಜನಿಕರು ಪ್ರತಿಕ್ರಿಯಿಸಿದ್ದಾರೆ.

English summary
Union Minister Rajnath Singh and Congress MP and leader of opposition Mallikarjuna Kharge engaged in a heated debate over religious intolerance issue in Lok Sabha. Rajnath Singh and Kharge debated on the importance of adding the word Secularism in Indian Constitution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X