ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಔಟ್ ಲುಕ್' ಸ್ಥಾಪಕ, ಹಿರಿಯ ಪತ್ರಕರ್ತ ವಿನೋದ್ ಮೆಹ್ತಾ ನಿಧನ

By Mahesh
|
Google Oneindia Kannada News

ನವದೆಹಲಿ, ಮಾ.8 : ಹಿರಿಯ ಪತ್ರಕರ್ತ ಹಾಗೂ ಔಟ್ ಲುಕ್ ವಾರಪತ್ರಿಕೆ ಸಮೂಹ ಸಂಸ್ಥೆ ಸ್ಥಾಪಕ ಅಧ್ಯಕ್ಷ ವಿನೋದ್ ಮೆಹ್ತಾ ಅವರು ಭಾನುವಾರ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತ ಅಂತ್ಯಕ್ರಿಯೆಯನ್ನು ಲೋಧಿ ಚಿತಾಗಾರದಲ್ಲಿ ನೆರವೇರಿಸಲಾಗುತ್ತದೆ.

73 ವರ್ಷ ವಯಸ್ಸಿನ ವಿನೋದ್ ಮೆಹ್ತಾ ಅವರು ಪತ್ನಿ ಹಾಗೂ ಪತ್ರಕರ್ತೆ ಸುಮಿತಾ ಪಾಲ್ ಸೇರಿದಂತೆ ಪುತ್ರಿ ಹಾಗೂ ಅಪಾರ ಸಂಖ್ಯೆ ಅಭಿಮಾನಿಗಳನ್ನು ಅಗಲಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಏಮ್ಸ್ ಗೆ ಸೇರಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ಏಮ್ಸ್ ವಕ್ತಾರ ಅಮಿತ್ ಗುಪ್ತಾ ಹೇಳಿದ್ದಾರೆ.

Veteran journalist Vinod Mehta passes away at 73

ರಾವಲ್ಪಿಂಡಿ(ಪಾಕಿಸ್ತಾನ)ಯಲ್ಲಿ ಫೆ.1, 1942ರಂದು ಜನಿಸಿದ ಮೆಹ್ತಾ ಅವರು ಔಟ್ ಲುಕ್ ಮ್ಯಾಗಜೀನ್ ನ ಸ್ಥಾಪಕ, ಸಂಪಾದಕರಾಗಿ ಹಾಗೂ ಮುಖ್ಯಸ್ಥರಾಗಿ 2012ರ ತನಕ ಕಾರ್ಯನಿರ್ವಹಿಸಿದರು.

ದಿ ಇಂಡಿಪೆಂಡೆಂಟ್, ಡಬೋನೇರ್, ಸಂಡೇ ಅಬ್ಸರ್ವರ್, ಪಯನಿಯರ್, ಇಂಡಿಯನ್ ಪೋಸ್ಟ್ ಸೇರಿದಂತೆ ದೇಶದ ಪ್ರತಿಷ್ಠಿತ ದಿನಪತ್ರಿಕೆ ಮತ್ತು ವಾರಪತ್ರಿಕೆಗಳ ಸಂಪಾದಕರಾಗಿದ್ದ ವಿನೋದ್ ಮೆಹ್ತಾ ಅವರ ನಿಧನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ಮಾಧ್ಯಮಗಳ ಮುಖ್ಯಸ್ಥರು ಶೋಕ ವ್ಯಕ್ತಪಡಿಸಿದ್ದಾರೆ.


ಹಿಂದಿ ಚಿತ್ರರಂಗದ ಪ್ರಬುದ್ಧ ನಟಿ ಮೀನಾಕುಮಾರಿ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುತ್ರ ಸಂಜಯ್‌ಗಾಂಧಿ ಅವರ ಜೀವನಚರಿತ್ರೆಯ ಪುಸ್ತಕ ಬರೆದು ವಿನೋದ್ ಮೆಹ್ತಾ ಜನಪ್ರಿಯರಾಗಿದ್ದರು.



ದೇಶದ ಪ್ರಚಲಿತ ವಿದ್ಯಮಾನಗಳು, ಅಂತಾರಾಷ್ಟ್ರೀಯ ರಾಜತಾಂತ್ರಿಕ ಸಂಬಂಧಗಳ ಕುರಿತು ಮೆಹ್ತಾ ಅವರು ಖಡಕ್ ಆಗಿ ತಮ್ಮ ವಾದ ಮಂಡಿಸುತ್ತಿದ್ದರು.ದೇಶದ ಅನೇಕ ಪ್ರಧಾನಿ ಹಾಗೂ ರಾಷ್ಟ್ರಪತಿಗಳ ಉತ್ತಮ ಒಡನಾಟ ಹೊಂದಿದ್ದ ಮೆಹ್ತಾ ಅವರು ಮಾಧ್ಯಮ ಜಗತ್ತಿನ ದಿಗ್ಗಜರಲ್ಲಿ ಒಬ್ಬರಾಗಿ ಸದಾ ಕಾಲ ಸ್ಮರಿಸಲ್ಪಡುತ್ತಾರೆ.

English summary
Veteran journalist Vinod Mehta passed away at the All India Institute of Medical Sciences (AIIMS) here on Sunday morning. He was 73.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X