ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

0001 ಫ್ಯಾನ್ಸಿ ನಂಬರ್- ಲಕ್ಷಾಂತರ ಮೊತ್ತಕ್ಕೆ ಬಿಕರಿ!

By Mahesh
|
Google Oneindia Kannada News

ನವದೆಹಲಿ, ಜೂನ್ 23: ಐಷಾರಾಮಿ ವಾಹನ ಹೊಂದುವ ಕ್ರೇಜ್ ಜತೆಗೆ ಕಾರಿನ ವಿನ್ಯಾಸಕ್ಕೆ ಮೊತ್ತ ಖರ್ಚು ಮಾಡುವವರಿರುತ್ತಾರೆ. ಇದರ ಜತೆಗೆ ಫ್ಯಾನ್ಸಿ ನಂಬರ್ ಕ್ರೇಜ್ ಹೆಚ್ಚಾಗಿದ್ದು, ಹರಾಜಿನ ಮೂಲಕ ನಂಬರ್ ಗೆಲ್ಲುವುದೇ ಪ್ರತಿಷ್ಠೆ ವಿಷಯವಾಗಿದೆ.

ದೆಹಲಿ ಸಾರಿಗೆ ಇಲಾಖೆ ಫ್ಯಾನ್ಸಿ ನಂಬರ್ ಗಳ ಇ- ಹರಾಜಿನಲ್ಲಿ 0001 ನಂಬರ್ ಗೆ ಬರೋಬ್ಬರಿ 16 ಲಕ್ಷ ರೂ ಸಿಕ್ಕಿದೆ. ಪಾಮ್ ಲ್ಯಾಂಡ್ ಹಾಸ್ಪಿಟಲ್ ಪ್ರೈ ಲಿಮಿಟೆಡ್ ಸಂಸ್ಥೆಯ ಪಾಲಾಗಿದೆ. ಸುಮಾರು 30ಕ್ಕೂ ಅಧಿಕ ಮಂದಿ ಈ ನಂಬರ್ ಗಾಗಿ ಬಿಡ್ ಮಾಡಿದ್ದರು.

Vehicle number "0001" auctioned for Rs 16 lakh in Delhi

2014 ರ ಸೆಪ್ಟೆಂಬರ್ ನಲ್ಲಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕರೊಬ್ಬರು 0001 ಸಂಖ್ಯೆಗಾಗಿ 12.5 ಲಕ್ಷ ರೂ. ಪಾವತಿಸಿದ್ದು, ಇದೀಗ 0001 ಸಂಖ್ಯೆ 16 ಲಕ್ಷಕ್ಕೆ ಹರಾಜಾಗುವ ಮೂಲಕ ಸಾರಿಗೆ ಇಲಾಖೆಗೆ ಅತಿ ಹೆಚ್ಚು ಅದಾಯ ತಂದುಕೊಟ್ಟಿದೆ. ಕಳೆದ ವರ್ಷ 51 ಫ್ಯಾನ್ಸಿ ನಂಬರ್ ಹರಾಜು ಹಾಕಿ 2.93 ಕೋಟಿ ರು ಗಳಿಸಲಾಗಿದೆ.

ಬಿಡ್ಡಿಂಗ್ ಮೊತ್ತ : ಫ್ಯಾನ್ಸಿ ನಂಬರ್ ಗಳ ಹರಾಜು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್ ಲೈನ್ ಮೂಲಕ ನಡೆಸಲಾಗಿದ್ದು, 0001 ಸಂಖ್ಯೆಗೆ ಬಿಡ್ ಮೊತ್ತ 5 ಲಕ್ಷ ರೂ., 0002 ರಿಂದ 0009 ರವರೆಗೆ 3 ಲಕ್ಷ ರೂ., 0010 ರಿಂದ 0099, 0786, 1000, 1111, 7777 ಹಾಗೂ 9999 ಗೆ 2 ಲಕ್ಷ ರೂ., 0100, 0111, 0300, 0333 ಮೊದಲಾದ ನಂಬರ್ ಗಳಿಗೆ 1 ಲಕ್ಷ ರೂ. ಹಾಗೂ ಇತರೆ ಫ್ಯಾನ್ಸಿ ನಂಬರ್ ಗಳಿಗೆ 20 ಸಾವಿರ ರೂ. ಬಿಡ್ ಮೊತ್ತ ನಿಗದಿಪಡಿಸಲಾಗಿತ್ತು.

English summary
A VIP car numbered "0001" has been auctioned off for Rs 16 lakh in Delhi this year.A private hospitality company called Palm Land Hospitality Pvt. Ltd became the owner of this unique numbered car during the Delhi government’s e-auction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X