ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಾಕ್ ಒಬಾಮಾ ತಾಜ್ ಭೇಟಿ ರದ್ದು ಸಾಧ್ಯತೆ

|
Google Oneindia Kannada News

ನವದೆಹಲಿ, ಜ.24 : ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಭಾನುವಾರ ಭಾರತಕ್ಕೆ ಆಗಮಿಸಲಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ತಾಜ್‌ಮಹಲ್ ಭೇಟಿಯನ್ನು ರದ್ದುಗೊಳಿಸುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕೃತವಾದ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ.

ಬರಾಕ್ ಒಬಾಮಾ ಅವರು ಜ.27ರಂದು ತಾಜ್‌ ಮಹಲ್‌ಗೆ ಭೇಟಿ ಕೊಡುವ ಕಾರ್ಯಕ್ರಮವಿತ್ತು. ಆದರೆ, ಸದ್ಯ ಅವರ ಭೇಟಿ ರದ್ದಾಗುವ ಸಾಧ್ಯತೆ ಇದ್ದು, ಮುಂಚಿತವಾಗಿ ಅವರು ಅಮೆರಿಕಾಕ್ಕೆ ಮರಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. [ಒಬಾಮಾ ಭಾರತ ಪ್ರವಾಸ ವೇಳಾಪಟ್ಟಿ]

Barack Bbama

ಆದರೆ, ಈ ಕುರಿತು ಅಮೆರಿಕಾ ಮತ್ತು ಭಾರತ ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಈಗಾಗಲೇ ಭಾರತ ಒಬಾಮಾ ಅವರು ತಾಜ್‌ಗೆ ಭೇಟಿ ನೀಡಲಿದ್ದಾರೆ ಎಂದು ಅಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಆದರೆ, ಇಂದು ಅವರ ಭೇಟಿ ರದ್ದಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಹೊರಬಿದ್ದಿದೆ. [ಒಬಾಮಾರಿಂದ ಭಾರತದ ನಿರೀಕ್ಷೆಗಳೇನು?]

ದೆಹಲಿ ಮತ್ತು ಆಗ್ರಾ ನಡುವಿನ ದೂರ 165 ಕಿ.ಮೀ ಆಗಿದ್ದು ಎರಡು ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗಿದೆ. ಒಬಾಮಾ ಅವರು ರಸ್ತೆ ಮಾರ್ಗದ ಮೂಲಕವೇ ಆಗ್ರಾ ತಲುಪುವುದಾದದರೆ ದೆಹಲಿ-ಆಗ್ರಾ ಹೆದ್ದಾರಿಯನ್ನು ಒಂದೆರೆಡು ಗಂಟೆಯ ಮುಂಚೆಯೇ ಭದ್ರತಾ ಪಡೆಗಳು ಕಾವಲು ಕಾಯಲಿದ್ದು, ಅಗತ್ಯವಾದರೆ ಸಾರ್ವಜನಿಕ ಸಂಚಾರವನ್ನೂ ಬಂದ್ ಮಾಡಲು ಚಿಂತನೆ ನಡೆಸಲಾಗಿದೆ.

ಅಮೆರಿಕದಿಂದ ಆಗಮಿಸಿರುವ ಒಬಾಮಾ ಭದ್ರತಾ ಸಿಬ್ಬಂದಿಯೂ ಸಹ ತಾಜ್‌ಗೆ ಭೇಟಿ ನೀಡಿ ಅಲ್ಲಿನ ಭದ್ರತಾ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದ್ದವು. ಭಾರತ ಮತ್ತು ಅಮೆರಿಕದ ಭದ್ರತಾ ಸಂಸ್ಥೆಗಳ ಕಮಾಂಡೋಗಳು ದೆಹಲಿ ಮತ್ತು ಆಗ್ರಾದಲ್ಲಿ ಬೀಡುಬಿಟ್ಟು ಭದ್ರತಾ ಪರಿಶೀಲನೆ ನಡೆಸುತ್ತಿವೆ.

English summary
Just a day before the arrival of US President Barack Obama to India, reports suggest that Obama may cancel his trip to Taj Mahal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X