ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಹಾರ್ ದುರಂತ: ಅನ್ಸಾಲ್ ಸೋದರರಿಗೆ ದಂಡ

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 19: 1997ರಲ್ಲಿ ಸಂಭವಿಸಿದ ಉಪಹಾರ್ ಚಿತ್ರಮಂದಿರದ ಅಗ್ನಿ ಅನಾಹುತಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಿಂದ ಬುಧವಾರ ಮಹತ್ವದ ಆದೇಶ ಹೊರಡಿಸಿದೆ. ಚಿತ್ರಮಂದಿರದ ಮಾಲೀಕರಾದ ಅನ್ಸಾಲ್ ಬ್ರದರ್ಸ್ 60 ಕೋಟಿ ರು ದಂಡ ವಿಧಿಸಿದೆ. ಅದರೆ, ಆನ್ಸಾಲ್ ಸೋದರರು ಜೈಲಿಗೆ ಹೋಗುವ ಅವಶ್ಯಕತೆ ಇಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ಆರೋಪಿಗಳಾದ ಸುಶೀಲ್ ಅನ್ಸಾಲ್ ಹಾಗೂ ಗೋಪಾಲ್ ಅನ್ಸಾಲ್ ಅವರು ಮುಂದಿನ ಮೂರು ತಿಂಗಳಿನಲ್ಲಿ ತಲಾ 30 ಕೋಟಿ ರು ಪಾವತಿಸುವಂತೆ ಸೂಚಿಸಲಾಗಿದೆ.

ಈ ಹಿಂದೆ ಉಪಹಾರ್ ದುರಂತದ ಸಂತ್ರಸ್ತರಿಗೆ ನೀಡಬೇಕಾದ ಪರಿಹಾರ ಹೈಕೋರ್ಟ್ ಆದೇಶಿಸಿದ್ದ ಪರಿಹಾರ ಧನವನ್ನು ಸುಮಾರು ಅರ್ಧಕ್ಕೆ ಇಳಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು, ಇದರಿಂದ ಸಂತ್ರಸ್ತ ಕುಟುಂಬಗಳಿಗೆ ಭಾರೀ ಹಿನ್ನಡೆಯಾಗಿತ್ತು.

Ansal brothers walk free; SC imposes Rs 60 crore fine

ಚಿತ್ರಮಂದಿರದ ಮಾಲಕರಾದ ಅನ್ಸಾಲ್ ಸೋದರಿಗೆ ವಿಧಿಸಲಾಗಿದ್ದ ಹಾನಿ ಪರಿಹಾರವನ್ನು ಅದು ರೂ. 25 ಕೋಟಿಯಿಂದ ರೂ. 25 ಲಕ್ಷಕ್ಕೆ ಇಳಿಸಿತ್ತು. ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ನೇತೃತ್ವದ ಪೀಠವೊಂದು 20 ವರ್ಷ ಮೇಲ್ಪಟ್ಟ ಮೃತರ ಕುಟುಂಬಗಳಿಗೆ ಹೈಕೋರ್ಟ್ ನಿಗದಿಗೊಳಿಸಿದ್ದ ರೂ. 18ಲಕ್ಷ ಪರಿಹಾರವನ್ನು ರೂ. 10ಲಕ್ಷ ಹಾಗೂ 20 ವರ್ಷಕ್ಕಿಂತ ಕೆಳಗಿನವರಿಗೆ ರೂ. 15 ಲಕ್ಷದಿಂದ ರೂ. 7.5 ಲಕ್ಷಕ್ಕೆ ಇಳಿಸಿ ಆದೇಶ ನೀಡಿತ್ತು.

ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಮೃತರ ಮತ್ತು ಗಾಯಾಳುಗಳ ಸಂಬಂಧಿಕರಿಗೆ 25 ಕೋಟಿ ರು. ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಆದರೆ ದೆಹಲಿ ನ್ಯಾಯಾಲಯ ಹೇರಿದ ದಂಡದ ಮೊತ್ತ ಹೆಚ್ಚಾಯಿತು ಎಂದು ಅನ್ಸಾಲ್ ಸಹೋದರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

1997ರ ಜೂ. 13ರಂದು 'ಬಾರ್ಡರ್' ಚಿತ್ರದ ಪ್ರಥಮ ಪ್ರದರ್ಶನದ ವೇಳೆ ಉಪಹಾರ್ ಚಿತ್ರಮಂದಿರದಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತದಲ್ಲಿ 59 ಮಂದಿ ಸಾವಿಗೀಡಾಗಿ 103 ಜನ ಗಾಯಗೊಂಡಿದ್ದರು.

English summary
In a major setback to the kin of Uphaar cinema fire tragedy, the Supreme Court on Wednesday, Aug 19, allowed industrialist brothers- Sushil Ansal and Gopal Ansal to walk free.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X